ಪ್ರಿಯತಮನ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸೌಮ್ಯಾ; ಹುಡುಗ ಕೂಡ ನಟ!

ಪ್ರಿಯತಮನ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸೌಮ್ಯಾ; ಹುಡುಗ ಕೂಡ ನಟ!

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಮಗಳು ವಸು ಪಾತ್ರದಲ್ಲಿ ನಟಿಸುತ್ತಿರುವ ಸೌಮ್ಯಾ ಮೆಂಡನ್‌ ಅವರು ನಿಶ್ಚಿತಾರ್ಥಕ್ಕೆ ಕಾಲಿಟ್ಟಿದ್ದಾರೆ.

ವಸು ಪಾತ್ರಧಾರಿ ಸೌಮ್ಯಾ ಮೆಂಡನ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸೌಮ್ಯಾ ಮೆಂಡನ್‌ ಅವರು ಈ ಹಿಂದೆ ಗೀತಾ, ಕಾವೇರಿ ಕನ್ನಡ ಮೀಡಿಯಂ, ಪಾರು ಸೇರಿದಂತೆ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದರು.

ಪಾರು ಧಾರಾವಾಹಿ ನಟಿ ಸಿತಾರಾ ಕೂಡ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನವಜೋಡಿಗೆ ಶುಭ ಹಾರೈಸಿದ್ದಾರೆ.

ಕನ್ನಡ ಧಾರಾವಾಹಿ, ಸಿನಿಮಾ, ತುಳು ರಂಗದಲ್ಲಿಯೂ ಸಕ್ರಿಯವಾಗಿರುವ ಸೌಮ್ಯಾ ಮೆಂಡನ್‌ ಅವರು ಸುವೇದ್‌ ದಾಸ್‌ ಜೊತೆ ಎಂಗೇಜ್‌ ಆಗಿದ್ದಾರೆ.

ಸೌಮ್ಯಾ ಮೆಂಡನ್‌ ಅವರು ಮದುವೆ ಆಗಲಿರುವ ಸುವೇದ್‌ ದಾಸ್‌ ಅವರು ಕೂಡ ನಟ. ಈ ಹಿಂದೆ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸಿದ್ದರು.

ಸುವೇದ್‌ ದಾಸ್‌ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಜೋಡಿ ಎರಡು ವರ್ಷಗಳ ಹಿಂದೆಯೇ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿತ್ತು.

Source link

Leave a Reply

Your email address will not be published. Required fields are marked *