Headlines

ಫ್ಯಾಮಿಲಿ ಜೊತೆ ಶಿವನಸಮುದ್ರಕ್ಕೆ ಭೇಟಿ ಕೊಟ್ಟು… ನಮ್ಮೂರೆ‌ ನಮಗೆ ಮೇಲು ಎಂದ‌ ಕನ್ನಡತಿ

ಫ್ಯಾಮಿಲಿ ಜೊತೆ ಶಿವನಸಮುದ್ರಕ್ಕೆ ಭೇಟಿ ಕೊಟ್ಟು… ನಮ್ಮೂರೆ‌ ನಮಗೆ ಮೇಲು ಎಂದ‌ ಕನ್ನಡತಿ

ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ತಮ್ಮ ಕುಟುಂಬದ ಜೊತೆಗೆ ಶಿವನಸಮುದ್ರಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿನ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ (Ranjani Raghavan) ತಮ್ಮ ಶೂಟಿಂಗ್ ಗೆ ಬ್ರೇಕ್ ಕೊಟ್ಟಂತೆ ಕಾಣಿಸುತ್ತಿದೆ. ಕಳೆದ ಕೆಲವು ಸಮಯದಿಂದ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ನಟಿ ಇದೀಗ ತಮ್ಮ ಕುಟುಂಬದ ಜೊತೆಗೆ ಶಿವನಸಮುದ್ರಕ್ಕೆ ಭೇಟಿ ನೀಡಿದ್ದು, ದೇಗುಲ ದರ್ಶನ, ಜಲಪಾತದ ದರ್ಶನ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಂಜನಿ ಬಹಳ ಸಮಯದ ಬಳಿಕ ತಮ್ಮ ತಂದೆ, ತಾಯಿ ಹಾಗೂ ಸಹೋದರಿಯರಾದ ವೈಷ್ಣವಿ ರಾಘವನ್ ಹಾಗೂ ಸೌಧಾಮಿನಿ ರಾಘವನ್ ಜೊತೆಗೆ ಫ್ಯಾಮಿಲಿ ಟೂರ್ (family tour) ಮಾಡಿದ್ದು, ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ರಂಜನಿ ತಮ್ಮ ಸುಂದರ ಫೋಟೊಗಳ ಜೊತೆಗೆ ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ ಎನ್ನುವ ಅಣ್ಣಾವ್ರ ಹಾಡಿನ ಸಾಲುಗಳನ್ನು ಸಹ ಬರೆದುಕೊಂಡಿದ್ದಾರೆ.

ಕುಟುಂಬದ ಜೊತೆಗೆ ರಂಜನಿ ರಾಘವನ್ ಅವರನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ತುಂಬಾ ಫ್ಯಾಮಿಲಿ ತುಂಬಾನೆ ಚೆನ್ನಾಗಿದೆ. ನೀವು ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ನಟಿಯ ಕ್ಯಾಪ್ಶನ್ ನೋಡಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದು, ನಿಜವಾಗಿಯೂ ಎಲ್ಲಾಕಡೆ ಹೋದಮೇಲೆ ನಮ್ಮ ಊರೇ ನಮಗೆ ಬೆಸ್ಟ್ ಅನಿಸೋದು ಎಂದಿದ್ದಾರೆ.

ರಂಜನಿ ರಾಘವನ್ ಪುಟ್ಟ ಗೌರಿಯ ಮದುವೆ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು, ಬಳಿಕ ಕನ್ನಡತಿ ಧಾರಾವಾಹಿ (Kannadathi serial) ಮೂಲಕ ರಾಜ್ಯಾದ್ಯಂತ ಜನಪ್ರಿಯತೆ ಪಡೆದರು. ಇಂದಿಗೂ ಜನರು ಅವರನ್ನು ಭುವಿ ಅಂತಾನೆ ಕರೆಯುತ್ತಾರೆ. ತೆಲುಗು, ತಮಿಳು ಸೀರಿಯಲ್ ಗಳಲ್ಲೂ ಇವರು ನಟಿಸಿದ್ದಾರೆ. ರಾಜಹಂಸ ಸೇರಿ ಕನ್ನಡದ ಒಂದೆರಡು ಸಿನಿಮಾದಲ್ಲೂ ರಂಜನಿ ಮಿಂಚಿದ್ದಾರೆ. ಕನ್ನಡತಿ ಬಳಿಕ ನಟನೆಯಿಂದ ದೂರ ಉಳಿದಿರುವ ರಂಜನಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ರಂಜನಿ ರಾಘವನ್ ಕೇವಲ ನಟಿ ಮಾತ್ರ ಅಲ್ಲ ಇವರೊಬ್ಬ ಬರಹಗಾರ್ತಿ, ಲೇಖಕಿ ಕೂಡ ಹೌದು. ಈಗಾಗಲೇ ರಂಜನಿ ಬರೆದ ಕಥೆ ಡಬ್ಬಿ ಮತ್ತು ಸ್ವೈಪ್ ಲೆಫ್ಟ್(swipe left) ಬಿಡುಗಡೆಯಾಗಿದೆ. ಇದೀಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿರುವ ರಂಜನಿ ರಾಘವನ್, ನಟ ಪ್ರೇಮ್ ಮತ್ತು ಗಣೇಶ್ ಪುತ್ರ ವಿವಾನ್ ಮುಖ್ಯ ಪಾತ್ರವಹಿಸಿರುವ ‘ಡಿ ಡಿ ಢಿಕ್ಕಿ’ ಎನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಶುರುವಾಗಿದೆ. ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಸಿನಿಮಾ ಯಾವಾಗ ಬರುತ್ತೆ ಅನ್ನೋದನ್ನು ಕಾದು ನೋಡಬೇಕು.

Source link

Leave a Reply

Your email address will not be published. Required fields are marked *