ಫ್ಲವರ್ ಅಲ್ಲ ಸ್ವಾಮಿ… ರಶ್ಮಿಕಾ ಅಂದ್ರೆ ಫೈಯರ್! ರಕ್ತಸಿಕ್ತ ಅವತಾರದಲ್ಲಿ ರಶ್ಮಿಕಾ ಹಾಜರ್ | Rashmika Mandanna Announced The Title Of Her Pan India Film Mysaa Gow

ಫ್ಲವರ್ ಅಲ್ಲ ಸ್ವಾಮಿ… ರಶ್ಮಿಕಾ ಅಂದ್ರೆ ಫೈಯರ್! ರಕ್ತಸಿಕ್ತ ಅವತಾರದಲ್ಲಿ ರಶ್ಮಿಕಾ ಹಾಜರ್ | Rashmika Mandanna Announced The Title Of Her Pan India Film Mysaa Gow


ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ರೆಡಿಯಾಗಲಿರೋ ಈ ಸಿನಿಮಾಗೆ ಮೈಸಾ ಅಂತ ಹೆಸರಿಡಲಾಗಿದ್ದು ಎಲ್ಲಾ ಭಾಷೆಗಳಲ್ಲೂ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಲಾಗಿದೆ.  ಈ ಪೋಸ್ಟರ್​ನ ಹಂಚಿಕೊಂಡು ನಾನು ಯಾವಾಗಲೂ ಹೊಸತನ್ನ ಕೊಡುವ ಪ್ರಯತ್ನ ಮಾಡ್ತಿನಿ. ಇದೂವರೆಗೆ ನಟಿಸದಂಥಾ ಪಾತ್ರದಲ್ಲಿ ನಟಿಸ್ತಾ ಇದ್ದೀನಿ ಅಂತ ರಶ್ ಅನೌನ್ಸ್ ಮಾಡಿದ್ದರೆ.  ಮುಖದಲ್ಲಿ ರಕ್ತ, ಕಣ್ಣಲ್ಲಿ ಬೆಂಕಿ.. ರಶ್ಮಿಕಾರ ಈ ರಕ್ತ ಸಿಕ್ತ ಪೋಸ್ಟರ್​ ನೋಡಿದವರು, ಅರೇ ಕಿರಿಕ್ ಬ್ಯೂಟಿ ಏನಾ್ದ್ರೂ ಹೀರೋಗಳಿಗೆ ಟಕ್ಕರ್ ಕೊಡೋದಕ್ಕೆ ಸಜ್ಜಾದ್ರಾ ಅಂದುಕೊಳ್ತಾ ಇದ್ದಾರೆ.  

ರಶ್ಮಿಕಾನ ಲಕ್ಕಿ ಹೀರೋಯಿನ್ ಅಂತ ಎಲ್ಲರೂ ಕರೀತಾ ಇದ್ರು. ರಶ್ಮಿಕಾ ನಾಯಕಿಯಾಗಿ ಮಿಂಚಿದ್ರೆ ಈ ಸಿನಿಮಾ ಹಿಟ್ ಆಗುತ್ತೆ ಅನ್ನೋದು ಇಂಡಸ್ಟ್ರಿಯಲ್ಲಿರೋ ನಂಬಿಕೆ. ಅದು ಕಿರಿಕ್ ಪಾರ್ಟಿಯಿಂದ ಕುಬೇರವರೆಗೂ ಪ್ರೂವ್ ಆಗ್ತಾ ಬಂದಿದೆ.ದಳಪತಿ ವಿಜಯ್, ಮಹೇಶ್ ಬಾಬು, ರಣ್​ಬೀರ್ ಕಪೂರ್ , ವಿಕ್ಕಿ ಕೌಶಾಲ್ ಸೇರಿದಂತೆ ರಶ್ಮಿಕಾ ಜೊತೆಗೆ ಡ್ಯುಯೆಟ್ ಹಾಡಿದ ಹೀರೋಗಳೆಲ್ಲಾ ನೂರಾರು ಕೋಟಿ ಗಳಿಸಿ ಗೆದ್ದಿದ್ದಾರೆ. ಅಂತೆಯೇ ರಶ್ಮಿಕಾನ ನಾಯಕಿಯಾಗಿಸಿಕೊಳ್ಳೋದಕ್ಕೆ ಬಲು ಬೇಡಿಕೆ ಇದೆ. ಆದ್ರೆ ಇಷ್ಟು ದಿನ ನಾಯಕನ ಪಾಲಿಗೆ ಲಕ್ಕಿ ಹೀರೋಯಿನ್ ಆಗಿದ್ದುಕೊಂಡು ಅವರ ಜೊತೆ ಮರ ಸುತ್ತಲಿಕ್ಕೆ ಮಾತ್ರ ಸೀಮಿತ ಆಗಿದ್ದ ರಶ್ಮಿಕಾ ಈಗ ತಾನೇ ಲೀಡ್  ಮಾಡ್ಲಿಕ್ಕೆ ಸಜ್ಜಾಗಿದ್ದಾರೆ. ಮೈಸಾ ರಶ್ಮಿಕಾ  ನಟನೆಯ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದ್ದು,   ಮಾಸ್  ಕ್ವೀನ್ ಆಗಿ ಮಿಂಚಲಿಕ್ಕೆ ಸಜ್ಜಾಗಿದ್ದಾರೆ.



Source link

Leave a Reply

Your email address will not be published. Required fields are marked *