Headlines

ಬದುಕ ಯೋಗ್ಯ ಕನಿಷ್ಟ ವೇತನ ನಿಗಧಿಗೆ ಒತ್ತಾಯಿಸಿ – ಜುಲೈ 28ಸಿಐಟಿಯು ಪ್ರತಿಭಟನೆ..



ರಾಜ್ಯ ಸರ್ಕಾರವು ಕನಿಷ್ಟ ವೇತನ ಪಾವತಿ ಕಾಯಿದೆ- 1948 ಅಡಿಯಲ್ಲಿ ರಾಜ್ಯದಲ್ಲಿ ದುಡಿಯುವ ಎಲ್ಲಾ ಕಾರ್ಮಿಕರಿಗೆ ಕನಿಷ್ಟವೇತನದ ದರಗಳನ್ನು ನಿಗಧಿ ಪಡಿಸಿ ಹೋರಡಿಸಿರುವ ಕರಡು . ಕಾಇ 411 ಎಲ್ಡಬ್ಲೂö್ಯಎ 2023 ದಿನಾಂಕ 11.04.2025ಮತ್ತು 2. ಸೇರ್ಪಡೆ ಅಧಿಸೂಚನೆ ಕಾಇ 411 ಎಲ್ಡಬ್ಲೂö್ಯಎ 2023 ದಿನಾಂಕ 19.04.2025 ಅಧಿಸೂಚನೆಗಳು ವೈಜ್ಞಾನಿಕವಾಗಿಲ್ಲ ಎಂದು ಸಿಐಟಿಯು ಅಭಿಪ್ರಾಯಪಟ್ಟಿದೆ ಹಾಗಾಗಿ ಇಂದಿನ ಬೆಲೆಗಳು ಹಾಗು ಜೀವನ ನಿರ್ವಹಣಾ ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಟ ವೇತನವನವನ್ನು ನಿಗಧಿಗೆ ಒತ್ತಾಯಿಸಿ ಸಿಐಟಿಯು ಸಂಘಟನೆಯು ರಾಜ್ಯಾದ್ಯಂತ ಜುಲೈ-28 ರಂದು ಕಾರ್ಮಿಕ ಕಛೇರಿಗಳ ಮುಂದೆ ಪ್ರತಿಭಟನೆ ನಡೆಸಲಿದೆ. ಅಂದು ತುಮಕೂರುನಲ್ಲಿ ಸಹ ಕಾರ್ಮಿಕ ಅಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು.


1 . ವೇತನ ಹೆಚ್ಚಳ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಹೊರೆ ಆಗುವುದಿಲ್ಲ: ಹಲವು ಸಮೀಕ್ಷೆಗಳಂತೆ ದೇಶದ ಹಾಗು ರಾಜ್ಯದ ಸರಾಸರಿ ಲಾಭಗಳಿಕೆಯಲ್ಲಿ ವೇತನದ ಪಾಲು ತೀವ್ರವಾಗಿ ಕಡಿಮೆಯಾಗುತ್ತಿದೆ. ಉದ್ಯೋಗದ ಸ್ವರೂಪಗಳಲ್ಲಿ ಆಗುತ್ತಿರುವ ಬದಲಾವಣೆಗಳು ಅದರಲ್ಲಿಯು ಖಾಯಮೇತರ ಉದ್ಯೋಗಿಗಳ ಸಂಖ್ಯೆಯು ತೀವ್ರವಾಗಿ ಹೆಚ್ಚಾಗುತ್ತಿರುವುದರಿಂದ ಅತಿ ಕಡಿಮೆ ವೇತನಕ್ಕೆ ಕಾರ್ಮಿಕರನ್ನು ದುಡಿಸಿಕೊಳ್ಳುವ ಅವಕಾಶವು ಮಾಲಕರ ಪಾಲಾಗಿದೆ. ಇದರಿಂದ ಅನೈತಿಕವಾದ ವ್ಯಾಪಾರ ಪೈಪೋಟಿಯು ಹೆಚ್ಚಾಗುತ್ತಿದೆ. ವೇತನಕ್ಕೆ ಆಗುವ ವೆಚ್ಚವನ್ನು ವಿವಿಧ ರೀತಿಗಳಲ್ಲಿ ಕಡಿತಗೊಳಿಸಲು ಸಾಧ್ಯವಿರುವ ಸಂಸ್ಥೆಗಳು ಮಾತ್ರ ಲಾಭದಾಯಕವಾಗಿ ಉಳಿಯಲು ಸಾಧ್ಯ ಎಂದು ಬಿಂಬಿಸಲಾಗುವ ಕಾರಣ ವೇತನದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವ ಅನಾರೋಗ್ಯಕರವಾದ ಪೈಪೋಟಿಯು ತೀವ್ರವಾಗುತ್ತಿದೆ.
ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳ ಬೆಲೆಏರಿಕೆ, ಇಂದನ ಬೆಲೆ ಏರಿಕೆ, ತೆರಿಗೆ ಏರಿಕೆ, ವಿದೇಶಿ ಸರ್ಕಾರಗಳು ಹೆಚ್ಚಿಸುವ ಸುಂಕಗಳಿAದ ಆಗುವ ವೆಚ್ಚಗಳ ಹೆಚ್ಚಳ ಮತ್ತು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಬಳಸುವ ಹಲವು ವಸ್ತುಗಳ ಬೆಲೆಏರಿಕೆಯಾದಗ ಅದನ್ನು ಸ್ವೀಕರಿಸುವ ಮಾಲಿಕರು, ಕಾರ್ಮಿಕರಿಗೆ ನ್ಯಾಯಯುತವಾಗಿ ಮಾಡಲಾಗುವ ಕೂಲಿ ಹೆಚ್ಚಳವನ್ನು ಮಾತ್ರ ವಿರೋಧಿಸುವುದು ವಿಪರ್ಯಾಸವಾಗಿದೆ. ಆದ್ದರಿಂದ ವೈಜ್ಞಾನಿಕ ಕೂಲಿ ಹಚ್ಚಳದ ವಿರುದ್ಧ ಉದ್ಯೋಗದಾತರು ಮಾಡುವ ಆಕ್ಷೇಪಣೆಗಳನ್ನು ಪರಿಗಣಿಸುವುದು ಸೂಕ್ತವಲ್ಲ ಎಂಬುದು ನಮ್ಮ ನಿಲುವಾಗಿದೆ.

  1. ಮೂರು ವಲಯಗಳಿಗೆ ಸ್ವಾಗತ: ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿಯ ಹೆಚ್ಚಳವು ನಗರ ಪ್ರದೇಶಗಳಿಗೆ ವಲಸೆ ಬರುವುದನ್ನು ತಡೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಮೂರು ವಲಯಗಳಾಗಿ ಕರ್ನಾಟಕ ರಾಜ್ಯವನ್ನು ಅಧಿಸೂಚನೆಯಲ್ಲಿ ವಿಭಾಗಿಸಿರುವುದನ್ನು ನಮ್ಮ ಸಂಘಟನೆಯು ಸ್ವಾಗತಿಸುತ್ತದೆ.
  2. ಎಲ್ಲಾ ಉದ್ದಿಮೆಗಳಿಗೂ ಒಂದೇ ರೀತಿಯಲ್ಲಿನ ವೇತನವನ್ನು ಪ್ರಕಟಿಸುವ ಏಕರೂಪ ಅಧಿಸೂಚನೆಗೆ ಸ್ವಾಗತ: ಕನಿಷ್ಟವೇತನವೆಂಬುದು ಬದುಕಿಉಳಿಯಲು ಅಗತ್ಯವಾದ ಕನಿಷ್ಟ ಪ್ರಮಾಣದ ವೇತನವಾಗಿರುತ್ತದೆ. ಈ ಕನಿಷ್ಟ ಪ್ರಮಾಣದ ವೇತನವನ್ನು ಕಾರ್ಮಿಕರಿಗೆ ನೀಡಲು ಸಾಧ್ಯವಿಲ್ಲದ ಉದ್ದಿಮೆಗಳು, ಆ ಸಾಮರ್ಥ್ಯವನ್ನು ಪಡೆಯಲು ಪ್ರಯತ್ನಿಸಬೇಕು. ಕನಿಷ್ಟ ವೇತನ ನೀಡುವುದರಿಂದ ವಿನಾಯಿತಿಯನ್ನು ಪಡೆಯಲು ಪ್ರಯತ್ನಿಸಬಾರದು. ಈ ರೀತಿಯ ಪ್ರಯತ್ನಗಳಿಗೆ ಸರ್ಕಾರವು ಅವಕಾಶವನ್ನು ನೀಡಬಾರದು.
    ಕೌಶಲ್ಯತೆಯ ಆಧಾರದಲ್ಲಿ ಎಲ್ಲಾ ಕಾರ್ಮಿಕರಿಗು ಸಮಾನವೇತನವನ್ನು ಪ್ರಕಟಿಸಬೇಕೆಂಬುದು ಕಾರ್ಮಿಕ ಸಂಘಟನೆಗಳ ದೀರ್ಘಕಾಲದ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಈ ಕರಡು ಸೂಚನೆಯಲ್ಲಿ 62 ಉದ್ದಿಮೆಗಳಿಗೆ ಮಾತ್ರ ಏಕರೂಪದ ವೇತನವನ್ನು ಪ್ರಕಟಿಸಲಾಗಿದೆ. ಈಗಾಗಲೇ ಅನುಸೂಚಿತ ಪಟ್ಟಿಯಲ್ಲಿರುವ 19 ಉದ್ಯೋಗಗಳು ಹಾಗು ಹೊಸದಾಗಿ ಅನುಸೂಚಿಗೆ ಸೇರ್ಪಡೆಗೊಳಿಸಲಾಗಿರುವ ಉದ್ದಿಮೆಗಳಿಗು ಅಂತಿಮವಾಗಿ ಪ್ರಕಟಣೆಯಾಗುವ ವೇತನವು ಅನ್ವಯವಾಗುವಂತೆ ಸರ್ಕಾರ ಕ್ರಮವಹಿಸಬೇಕಿದೆ. ಇಲ್ಲದಿದ್ದಲ್ಲಿ ಉದ್ದಿಮೆಗಳ ನಡುವೆ ತಾರತಮ್ಯಗಳು ಹೆಚ್ಚಾಗುವ ¸+Áಧ್ಯತೆಗಳು ಹಾಗು ಸರ್ಕಾರದ ಮೇಲೆ ಪ್ರಭಾವ ಬೀರುವ ಅಕ್ರಮ ಮಾರ್ಗಗಳಿಗೆ ಅವಕಾಶಮಾಡಿಕೊಡುತ್ತದೆ.
  3. ನಾಲ್ಕು ಕಾರ್ಮಿಕರಿಗೆ ಹೆಚ್ಚು ವೇತನ ಪ್ರಕಟಿಸಿರುವ ಪ್ರಸ್ತಾಪಕ್ಕೆ ಸ್ವಾಗತ: ಈ ಅಧಿಸೂಚಿ 2ರಲ್ಲಿ ಶೌಚಾಲಯಗಳು, ಸ್ನಾನಗೃಹಗಳು, ಒಳಚರಂಡಿಗಳನ್ನು ಶುಚಿ ಮಾಡುವ ಕೆಲಸಗಳಲ್ಲಿನ ಉದ್ಯೋಗ, ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ, ಫೌಂಡ್ರಿ (ಯಂತ್ರಗಳ ಸಹಿತ ಅಥವಾ ರಹಿತ ಮೆಷಿನ್ ಶಾಪ್)ಗಳಲ್ಲಿ ಉದ್ಯೋಗ ಹಾಗು ರಾಸಾಯನಿಕ ರಸಗೊಬ್ಬರ-ಕೀಟ ನಾಶಕ-ಕ್ರಿಮಿನಾಶಕಉತ್ಪಾದನಾ ಉದ್ದಿಮೆಗಳಲ್ಲಿನ ಕೆಲಸಗಳಲ್ಲಿ ಉದ್ಯೋಗ ಎಂಬ ನಾಲ್ಕು ಉದ್ಯೋಗಗಳಿಗೆ ಉಳಿದ ಉದ್ದಿಮೆಗಳಿಗೆ ನಿಗದಿಯಾಗುವ ವೇತನಕ್ಕಿಂತಲೂ ಹೆಚ್ಚುವರಿ ವೇತನ ನಿಗದಿಪಡಿಸುವ ಪ್ರಸ್ತಾಪನೆಗಳನ್ನು ನಾವು ಸ್ವಾಗತಿಸುತ್ತೇವೆ. ಈ ಪಟ್ಟಿಯಲ್ಲಿ ಅಪಾಯಕಾರಿ ಕೆಲಸಗಳ ಪಟ್ಟಿಯಲ್ಲಿ ಯು.ಜಿ.ಡಿ, ಘನ ತ್ಯಾಜ್ಯ ವಿಲೆವಾರಿ, ಯು,ಜಿ,ಡಿ ನೀರು ಸಂಸ್ಕರಣೆ ಮತ್ತು ಕಸದ ಸಂಗ್ರಹ ಹಾಗು ಸಾಗಾಣಿಕೆಯ ಕೆಲಸಗಳನ್ನು ಒಳಗೋಳ್ಳುವಂತೆ ಕೋರುತ್ತೇವೆ.
    6.. ತರಬೇತಿ, ನಿಶ್ಚಿತ ಅವಧಿಯ ತರಬೇತಿ ಹಾಗು ಹಂಗಾಮಿ ಕೆಲಸಗಾರರಿಗೂ ಸಮಾನವೇತನ: ಈ ಅಧಿಸೂಚನೆಯಲ್ಲಿ ತರಬೇತಿ, ನಿಶ್ಚಿತ ಅವಧಿಯ ತರಬೇತಿ ಹಾಗು ಹಂಗಾಮಿ ಮುಂತಾದ ಖಾಯಮೇತರ ಸ್ವರೂಪಗಳಲ್ಲಿ ಉತ್ಪಾದನೆಯ ಪ್ರಕ್ರಿಯೆಯಲ್ಲಿ ತೊಡಗುವ ಕಾರ್ಮಿಕರಿಗೆ ಸಮಾ£ ಕೆಲಸಕ್ಕೆ ಸಮಾನವೇತನ ಎಂಬ ನಿಯಮದ ಅಡಿಯಲ್ಲಿ ಪ್ರಕಟಿತ ಕನಿಷ್ಟವೇತನವನ್ನು ನೀಡಬೇಕು ಎಂಬ ಷರತ್ತನ್ನು ಒಳಗೊಳಿಸಬೇಕು.. ಈ ಕಾರ್ಮಿಕರಿಗೆ ಕೆಲಸದ ರಕ್ಷಣೆ ಹಾಗು ಸುರಕ್ಷಿತ ಕೆಲಸ ಹಾಗು ವೇತನ ಸವಲತ್ತುಗಳನ್ನು ಖಾತರಿಪಡಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿರುತ್ತದೆ. ಉದ್ಯೋಗವು ಅನೌಪಚಾರಿಕ ಸ್ವರೂಪವನ್ನು ತಡೆಯಬೇಕೆಂಬ ಐಎಲ್‌ಓ ಕನ್ವೆಶನ್‌ನಿನ ಉದ್ದೇಶಗಳಿಗೆ ಪೂರಕವಾಗಿ ಈ ಷರತ್ತನ್ನು ಅಧಿಸೂಚನೆಯಲ್ಲಿ ಒಳಪಡಿಸುವ ಅಗತ್ಯವಿದೆ.
    ಆಕ್ಷೇಪಣೆಗಳು:
  4. ಕನಿಷ್ಟ ವೇತನದ ವೈಜ್ಞಾನಿಕ ಲೆಕ್ಕಾಚಾರ: ಈ ಅಧಿಸೂಚನೆಯನ್ನು ಮೆ: ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿಯ ಪ್ರಕರಣದಲ್ಲಿ ರೂಪಿಸಲಾಗಿರುವ ಮಾನದಂಡಗಳನ್ನು ಅನ್ವಯಿಸಿ ಹೊಸದಾಗಿ ಹೊರಡಿಸುವ ಕುರಿತು ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆದು ಆ ಮಾರ್ಗದರ್ಶನದ ಆಧಾರದಲ್ಲಿ ಪ್ರಕಟಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಪ್ರಕಟಿತ ಕನಿಷ್ಟವೇತನವು ಸರ್ವೋಚ್ಚನ್ಯಾಯಾಲಯವು “ವರ್ಕಮೆನ್ ಎದುರು ರೆಪ್ಟೆಕೋಸ್ ಬ್ರೆಟ್ ಆಡಳಿತವರ್ಗ ಎಐಆರ್ 1992 ಎಸ್‌ಸಿ 504′, ಪ್ರಕರಣದಲ್ಲಿ ರೂಪಿಸಿದ ಮಾನದಂಡಗಳಿಗೆ ಅನುಗುಣವಾಗಿರುವುದಿಲ್ಲ. ಸದರಿ ಪ್ರಕರಣದಲ್ಲಿ ಈ ಕೆಳಕಂಡ ಮಾನದಂಡಗಳನ್ನು ಸೂಚಿಸಲಾಗಿದೆ:
  5. ಕುಟುಂಬದ ಯೂನಿಟ್‌ಗಳು 3.6 ಆಗಬೇಕು:
    ಅದೇ ರೀತಿಯಲ್ಲಿ ಕನಿಷ್ಟವೇತನ ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ಒಂದು ಕುಟುಂಬದ ಕುರಿತ ವ್ಯಾಖ್ಯಾನವು ಅವಧಿ ಮೀರಿದ ಹಳೆಯ ವ್ಯಾಖ್ಯಾನವಾಗಿರುತ್ತದೆ. ಪುರುಷನಿಗೆ ಒಂದು ಯೂನಿಟ್, ಮಹಿಳೆಗೆ 0.8 ಯೂನಿಟ್ ಹಾಗು ಎರಡು +ಮಕ್ಕಳಿಗೆ ತಲಾ 0.6 ಯೂನಿಟ್ ಒಟ್ಟು ಮೂರು ಯೂನಿಟ್‌ಗಳೆಂದು ಲೆಕ್ಕಿಸುವ ವಿಧಾನವನ್ನು ಮುಂದುವರಿಸುವುದು ಸೂಕ್ತವಾದದಲ್ಲ. ಮಹಿಳೆಯನ್ನು ಎರಡನೇ ದರ್ಜಿಯ ಪ್ರಜೆಯಾಗಿ ಹಾಗು ಮಹಿಳೆಯ ಆದಾಯ ಗಳಿಕೆಯನ್ನು ಎರಡನೇ ಆದಾಯವೆಂದು ಪರಿಗಣಿಸುವುದು ಲಿಂಗ ತಾರತಮ್ಯದಿಂದ ಕೂಡಿದ ಪುರುಷ ಪ್ರಧನ ವ್ಯವಸ್ಥೆಯ ವ್ಯಾಖ್ಯಾನವಾಗಿರುತ್ತದೆ.
    ಅದೇ ರೀತಿಯಲ್ಲಿ ಶಿಕ್ಷಣ ಹಾಗು ಆರೋಗ್ಯದ ಖಾಸಗೀಕರಣದಿಂದ ಹೆರಿಗೆ ಹಾಗು ಮಕ್ಕಳ ಪೋಷಣೆಗೆ ವೇತನದ ದೊಡ್ಡಪಾಲನ್ನು ವೆಚ್ಚಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗಂಡು ಹಾಗು ಹೆಣ್ಣನ್ನು ತಲಾ ಒಂದು ಯೂನಿಟ್ ಹಾಗು ಎರಡು ಮಕ್ಕಳಿಗೆ ತಲಾ 0.8 ಯೂನಿಟ್ ಎಂಬ ಆದಾರದಲ್ಲಿ 3.6 ಗ್ರಾಹಕ ಯೂನಿಟುಗಳಾಗಿ ಕುಟುಂಬನ್ನು ಪರಿಗಣಿಸಬೇಕೆಂದು ಒತ್ತಾಯಿಸುತ್ತೇವೆ.
  6. ಘೋಷಣೆಯಾಗ ಬೇಕಾದ ಕನಿಷ್ಟವೇತನ:
    ಈ ಹಿನ್ನೆಲೆಯಲ್ಲಿ ಕನಿಷ್ಟ ವೇತನವನ್ನು ನಿಗದಿಪಡಿಸಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಲು ನಾವು ಒತ್ತಾಯಿಸುತ್ತಿದ್ದೇವೆ:
    ಅ) ಓರ್ವ ದುಡಿಯುವ ವ್ಯಕ್ತಿಗೆ 3.6 ಬಳಕೆಯ ಯೂನಿಟ್‌ಗಳು
    ಆ) ಸರಳ ಚಟುವಟಿಕೆ ನಡೆಸುವ ಸರಾಸರಿ ಭಾರತೀಯ ವಯಸ್ಕರಿಗೆ ಡಾ||ಅಕ್ರಾಯ್ಡ್ ಶಿಫಾರಸ್ಸು ಮಾಡಿರುವ ರೀತಿಯಲ್ಲಿ 2700 ಕ್ಯಾಲೊರಿ ನಿವ್ವಳ ಆಹಾರ ಸೇವನೆಯು ಕನಿಷ್ಟ ಆಹಾರ ಅವಶ್ಯಕತೆಯಾಗಬೇಕು.
    ಇ) ವರ್ಷಕ್ಕೆ 72 ಯಾರ್ಡ್ ಬಟ್ಟೆಯ ಅವಶ್ಯಕತೆ ಪೂರೈಸುವಂತೆ ಇರಬೇಕು.
    ಈ) ಸರ್ಕಾರದ ಕೈಗಾರಿಕಾ ಪ್ರದೇಶ ಗೃಹ ಯೋಜನೆಗೆ ಪೂರಕವಾಗಿ ಬಾಡಿಗೆ
    e) ಒಟ್ಟು ಕನಿಷ್ಟ ವೇತನದ ಶೇ.20ರಷ್ಟು ಪ್ರಮಾಣ ಇಂಧನ, ವಿದ್ಯುಚ್ಛಕ್ತಿ ಮತ್ತಿತರ ವಸ್ತುಗಳಿಗೆ ಆಗಬೇಕು.
    ಜಿ) ಶಿಕ್ಷಣ ವೆಚ್ಚ, ವೈದ್ಯಕೀಯ ಅಗತ್ಯ, ಹಬ್ಬಗಳು/ ಆಚರಣೆಗಳು ಒಳಗೊಂಡು ಕನಿಷ್ಟ ಮನರಂಜನೆ ಮತ್ತು ವೃದ್ಯಾಪ್ಯ, ಮದುವೆ ಇತ್ಯಾದಿಗಳಿಗೆ ಕೂಡಿಡುವುದಕ್ಕೆ ಒಟ್ಟು ಕನಿಷ್ಠ ವೇತನದಲ್ಲಿ ಶೇ.25ರಷ್ಟು ಪ್ರಮಾಣ ಹೊಂದಿರಬೇಕು.
  7. ಏರಿಳಿತವಾಗುವ ತುಟ್ಟಿಭತ್ಯೆ: ಗ್ರಾಹಕ ಬೆಲೆ ಸೂಚ್ಯಾಂಕದ ಆದಾರದಲ್ಲಿ ಏರಿಳಿತವಾಗುವ ತುಟ್ಟಿಭತ್ಯೆಯ ದರಗಳನ್ನು ನಿಗದಿಪಡಿಸುವ ವಿಚಾರದ ಕುರಿತು ಸರ್ಕಾರ ಮೊದಲು ಹೊರಡಿಸಿದ ಅಧಿಸೂಚನೆಯಲ್ಲಿ ಯಾವುದೇ ಪ್ರಸ್ತಾಪಗಳು ಇರಲಿಲ್ಲ. ನಂತರ ಸೇರ್ಪಡೆ ಅಧಿಸೂಚನೆಯನ್ನು ಹೊರಡಿಸಿ ಸೇರ್ಪಡೆ ಮಾಡಿಸಲಾಗಿದೆ. ಈ ಅಧಿಸೂಚನೆಯಲ್ಲಿನ ಪ್ರಸ್ತಾಪದಂತೆ ಮೂಲವೇತನವನ್ನು ಗ್ರಾಹಕ ಬೆಲೆ ಸೂಚ್ಯಾಂಕದ 9469 ಅಂಶಗಳಿಗೆ ಸಮಗೊಳಿಸಲಾಗಿರುತ್ತದೆ. ಈ ಬೆಲೆ ಸೂಚ್ಯಾಂಕವು 2023ರ ಸಾಲಿನ ಡಿಸೆಂಬರ್ ತಿಂಗಳವರೆಗಿನ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕವಾಗಿರುತ್ತದೆ.
    ಈ ಅಂಶಗಳಿಗಿAತಲು ಹೆಚ್ಚಾಗುವ ಪ್ರತಿ ಅಂಶಕ್ಕೆ ಒಂದು ದಿನಕ್ಕೆ 6ಪೈಸೆಯಂತೆ ತುಟ್ಟಿಭತ್ಯೆಯ ಪಾವತಿಯನ್ನು ನಿರ್ಣಯಿಸಲು ನಮ್ಮ ಸಂಘವು ಒತ್ತಾಯಿಸುತ್ತದೆ. ಅದಲ್ಲದೇ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ಪ್ರಕಟಿತವಾಗುವಂತೆ ಏಪ್ರಿಲ್ ಹಾಗು ಅಕ್ಟೋಬರ್ ತಿಂಗಳುಗಳಲ್ಲಿ ವಾರ್ಷಿಕ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಅವಕಾಶ ನೀಡುವಂತೆ ನಿಗದಿಪಡಿಸಬೇಕು.
    ಈ ಸಲುವಾಗಿ ದಿನಾಂಕ 01.04.2025ರಿಮದ ಅನ್ವಯವಾಗುವರೀತಿಯಲ್ಲಿ ತುಟ್ಟಿಭತ್ಯೆಯನ್ನು 496 ಅಂಶಗಳ ಹೆಚ್ಚಳಕ್ಕೆ ದಿನಕ್ಕೆ 6 ಪೈಸೆಗಳಂತೆ ಲೆಕ್ಕಹಾಕಿ ಮಾಸಿಕ ರೂ 892.80 ಹಾಗು ದಿನಕ್ಕೆ ರೂ. 34.33 ತುಟ್ಟಿಭತ್ಯೆಯನ್ನು ನೀಡುವಂತೆ ಪ್ರಕಟಿಸಬೇಕು. 1.10.2025ರಿಂದ ಅನ್ವಯವಾಗುವಂತೆ ಜನವರಿ 2025 ರಿಂದ ಜೂನ್ 2025ರವರೆಗೆ ಹೆಚ್ಚಾಗುವ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕದ ಪ್ರತಿ ಅಂಶಕ್ಕೆ 6 ಪೈಸೆಯಂತೆ ತುಟ್ಟಿಭತ್ಯೆ ಹೆಚ್ಚಳವನ್ನು ನೀಡುವಂತೆ ಪ್ರಕಟಿಸಬೇಕು. 01.04.2026ಕ್ಕೆ ಅನ್ವಯವಾಗುವ ತುಟ್ಟಿಭತ್ಯೆಯನ್ನು ಜುಲೈ 2025 ರಿಂದ ಡಿಸೆಂಬರ್ 2025ರ ವರೆಗಿನ ಹೆಚ್ಚಳವಾಗುವ ಸರಾಸರಿ ಗ್ರಾಹಕ ಬೆಲೆ ಸೂಚ್ಯಾಂಕದ ಆಧಾರದಲ್ಲಿ ನೀಡುವಂತಾಗಬೇಕು. ಈ ವೃತ್ತವು ಪ್ರತಿ ವರ್ಷವು ಮುಂದುವರೆಯಬೇಕು.
  8. ಪೂರ್ವಾನ್ವಯ ಆಗುವ ರೀತಿಯಲ್ಲಿ ಕನಿಷ್ಟವೇತನ ಪ್ರಕಟಣೆಯಾಗಬೇಕು: ಈಗಾಗಲೇ ತಿಳಿಸಿರುವ ರೀತಿಯಲ್ಲಿ ಪ್ರಕಟಿತ ಮೂಲವೇತನವು 2023ರ ಗ್ರಾಹಕ ಬೆಲೆ ಸೂಚ್ಯಾಂಕದ ಸರಾಸರಿಯನ್ನು ಒಳಗೊಂಡಿರುವುದರಿAದ ಹೊಸದಾಗಿ ಪ್ರಕಟಣೆಯಾಗುವ ಕನಿಷ್ಟ ವೇತನವು 01.04.2025ರಿಂದ ಪೂರ್ವಾನ್ವಯವಾಗುವಂತೆ ಕ್ರಮವಹಿಸಬೇಕು. ವೈಜ್ಞಾನಿಕವಾದ ಕನಿಷ್ಟವೇತನ ಪ್ರಕಟಿಸುವುದರಲ್ಲಿ ಆದ ನ್ಯಾಯಾಲಯದ ದಾವೆಗಳು ಹಾಗು ವಿಳಂಬಗಳನ್ನು ಪರಿಗಣಿಸಬೇಕು. ಏಪ್ರಿಲ್ 2025ರಿಂದಲೇ ಇದನ್ನು ಅನ್ವಯ ಮಾಡುವ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸಿದಂತಾಗುತ್ತದೆ.
    ಹಾಗು ಪ್ರತಿ ಮೂರು ವರ್ಷಗಳಿಗೊಮ್ಮೆ ಕನಿಷ್ಟ ವೇತವನ್ನು ಪುನರ್ವಿಮರ್ಶೆ ಮಾಡುವಂತೆ ಕಾಲಾವಧಿಯನ್ನು ನಿಗದಿಪಡಿಸುವ ಅಗತ್ಯವಿದೆ.
  9. ಉದ್ದಿಮೆಗಳಿಗೆ ಕಲಂ 5(1) (ಎ) ಪ್ರಕಾರ ವೇತನ ನಿಗದಿಪಡಿಸಲು ಮಾಡಿರುವ ಪ್ರಸ್ತಾಪಗಳಿಗೆ ಹಾಗು ಹೊಸದಾಗಿ ಅನುಸೂಚಿತ ಉದ್ದಿಮೆಗಳ ಕುರಿತ ಆಕ್ಷೇಪಣೆ: ತುಂಡು ಆದಾರದಲ್ಲಿ ಕೆಲಸದ ಸ್ವರೂಪಗಳಲ್ಲಿಇರುವ ಹಾಗು ಶ್ರಮಿಕ ಪ್ರಾಧಾನ್ಯತೆಯುಳ್ಳ ಉದ್ದಿಮೆಗಳಾಗಿ 19 ಉದ್ದಿಮೆಗಳನ್ನು ಗುರುತಿಸಿರುವುದು ತಾರ್ಕಿಕವಾಗಿರುವುದಿಲ್ಲ. ಈ ವಿಶೇಷವಾದ ಆದ್ಯತೆಯು ಈ 19 ಉದ್ದಿಮೆಗಳಲ್ಲಿ ಕೆಲಸಮಾಡುವ ಬಹು ದೊಡ್ಡ ಸಂಖ್ಯೆಯ ಕಾರ್ಮಿಕರಿಗೆ ಮಾತ್ರವಲ್ಲದೇ ಬೇರೆ ಉದ್ದಿಮೆಗಳಿಗು ತೊಂದರೆಯಾಗುತ್ತದೆ. ಹಾಗು ನ್ಯಾಯುತ ಕನಿಷ್ಟವೇತವನ್ನು ಪಡೆಯುವ ಹಕ್ಕಿನಿಂದ ಬೃಹತ್ ಸಂಖ್ಯೆಯ ಕಾರ್ಮಿಕರನ್ನು ಅದರಲ್ಲಿಯು ಮಹಿಳಾ ಕಾರ್ಮಿಕರನ್ನು ಹೊರಗುಳಿಸುವ ಕ್ರಮವಾಗಿದೆ. ಅಧಿಸೂಚನೆಯಲ್ಲಿನ ಈ ವಿಶೇಷ ಸೂಚನೆಯನ್ನು ನಮ್ಮ ಸಂಘವು ತೀವ್ರವಾಗಿ ಆಕ್ಷೇಪಿಸುತ್ತದೆ ಹಾಗು ಹಿಂದಕ್ಕೆ ಪಡೆಯಲು ಒತ್ತಾಯಿಸುತ್ತದೆ. ಜವಳಿ, ತಂಬಾಕು, ಬೇಸಾಯ, ತೊಟಗಾರಿಕೆ, ಅರಣ್ಯ, ಮೀನುಗಾರಿಕೆ, ಮನೋರಂಜನೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೂರಕವಾದ ವ್ಯವಸ್ಥೆ ಹಾಗು ಅಲಂಕಾರ ಮುಂತಾದ ಉದ್ದಿಮೆಗಳಿಗೆ ಯಾವ ಆಧಾರದಲ್ಲಿ ಈ ವಿಶೇಷ ಆದ್ಯತೆಯನ್ನು ನೀಡಲಾಗಿದೆ ಎಂಬುದನ್ನು ಸಮರ್ಥಿಸಲು ಸಾಧ್ಯವಾಗುವುದಿಲ್ಲ. ರಾಜ್ಯದಲ್ಲಿ ಒಟ್ಟು ಶ್ರಮ ಜೀವಿಗಳಲ್ಲಿ ಅದರಲ್ಲಿಯು ಮಹಿಳಾ ಕಾರ್ಮಿಕರನ್ನೇ ಅವಲಂಬಿಸಿರುವ ಈ ಉದ್ದಿಮೆಗಳಿಗೆ ಪ್ರಕಟಿತ ಕನಿಷ್ಟ ವೇತನಕ್ಕಿಂತಲು ಕಡಿಮೆ ಪ್ರಮಾಣದಲ್ಲಿನ ವೇತನವನ್ನು ನಿಗದಿಪಡಿಸುವುದು ಸ್ವಾಭಾವಿಕ ನ್ಯಾಯದ ಪರಿಕಲ್ಪನೆಗಳಿಗೆ ವಿರುದ್ಧವಾಗಿರುತ್ತದೆ.
    ಮಹಿಳಾ ಕಾರ್ಮಿಕರ ವೇತವನ್ನು ಕುಟುಂಬದ ಎರಡನೇ ಆದಾಯವಗಿ ಪರಿಗಣಿಸುವುದು ಯಾವುದೇ ರೀತಿಯಲ್ಲಿಯು ಸಮರ್ಥಿಸಲಾಗದ ತರ್ಕವಾಗಿರುತ್ತದೆ. ದುಡಿಮೆ ಹಾಗು ದುಡಿಮೆಯು ಸೃಷ್ಟಿಸುವ ಮೌಲ್ಯದ ಆಧಾರಿತವಾದ ವೇತನವೆಂಬ ಬದಲು, ದುಡಿಮೆಗಾರರ ಕೌಟುಂಬಿಕ ಹಿನ್ನೆಲೆಯಲ್ಲಿ ವೇತನವನ್ನು ನಿಗದಿಪಡಿಸುವುದು ಸರಿಯಾದ ವಿಧಾನವಾಗುವುದಿಲ್ಲ. ಹಾಗು ವೇತನ ಪಾವತಿಯಲ್ಲಿನ ಲಿಂಗ ತಾರತಮ್ಯವನ್ನು ಸರ್ಕಾರವೇ ಪೋಷಿಸುವುದು ಸಂವಿಧಾನ ವಿರೋಧಿ ಕ್ರಮವಾಗಿರುತ್ತದೆ.
  10. ಸಿದ್ದ ಉಡುಪು ತಯಾರಿಕೆಯಲ್ಲಿನ ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು:
    ಸಿದ್ದ ಉಡುಪು ತಯಾರಿಕೆಯಲ್ಲಿ ದುಡಿಯುವ ಲಕ್ಷಾಂತರ ಮಹಿಳಾ ಕಾರ್ಮಿಕರನ್ನು ಒಳಗೊಂಡ ಎಲ್ಲಾ ಕಾಮಿರ್ಕರಿಗು ಕನಿಷ್ಟ ವೇತನ ನಿಗದಿಪಡಿಸುವುದರಲ್ಲಿ ಆಗಿರುವ ಘೋರ ಅನ್ಯಾಯವನ್ನು ತಡೆದು, ನ್ಯಾಯ ಒದಗಿಸ ಬೇಕು .. ಟೈಲರಿಂಗ್ ಉದ್ದಿಮೆ ಒಳಗೊಂಡು 4 ಜವಳಿ ಉದ್ದಿಮೆಗಳಿಗೆ 2014ರ ನಂತರ ಕನಿಷ್ಟ ವೇತನ ಪರಿಷ್ಕರಣೆಯಾಗಿಲ್ಲ ಎಂಬುದು ವಾಸ್ತವವಾಗಿದೆ.
  11. ಬೀಡಿ ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ: ರಾಜ್ಯದಲ್ಲಿ ಬೀಡಿ ಕಾರ್ಮಿಕರಿಗೆ ವೇತನ ನಿಗದಿ ಪಡಿಸುವುದರಲ್ಲಿಯು ನಿರಂತರವಾಗಿ ಅನ್ಯಾಯವಾಗಿದೆ. ಕಾಇ44ಎಲ್‌ಎಂಡಬ್ಲುö್ಯ 2018 ದಿನಾಂಕ 14.03.2018ರಲ್ಲಿ ಕಲಂ 5(1)(ಎ) ಅಡಿಯಲ್ಲಿ ನಿಗದಿಯಾದ ಕನಿಷ್ಟ ವೇತವನ್ನು ಮಾಲಿಕರು ಬೀಡಿ ಕಾರ್ಮಿಕರಿಗೆ ನೀಡಲಿಲ್ಲ. ಇಲ್ಲಿಯವರೆಗು ಸಮರ್ಪಕವಾಗಿ ಈ ಕನಿಷ್ಟವೇತನ ಜಾರಿಯಾಗಿರುವುದಿಲ್ಲ. ಕೋವಿಡ್ ಸಾಂಕ್ರಮಿಕದ ವೇಳೆ ಒಂದು ವರ್ಷಗಳ ಕಾಲ ವಿಡಿಎ ಹೆಚ್ಚಳವನ್ನು ಕಾರ್ಮಿಕರಿಗೆ ನೀಡುವುದರಿಂದ ಮಾಲಕರಿಗೆ ವಿನಾಯಿತಿ ನೀಡುವ ಸರ್ಕಾರದ ಆದೇಶವನ್ನು ಮಾನ್ಯ ಉಚ್ಚನ್ಯಾಯಲಯವು ತಡೆಹಿಡಿದಿದೆ. ಆದರು ಕೂಡ ಕಾರ್ಮಿಕರಿಗೆ 2015-16 ರಿಂದ ಇಲ್ಲಿಯವರೆಗೆ ಅಧಿಸೂಚಿತ ತುಟ್ಟಿಭತ್ಯೆಯನ್ನು ಕಾರ್ಮಿಕರಿಗೆ ನೀಡಲು ನಿರಾಕರಿಸುತ್ತಿದ್ದಾರೆ. ಈತನ್ಮಧ್ಯೆ 2018 ಕನಿಷ್ಟವೇತನ ಅಧಿಸೂಚನೆಯನ್ನು ದಿನಾಂಕ 27.02.2025ರಂದು ಹಿಂದಕ್ಕೆ ಪಡೆದು ನಿಗದಿಯಾದ ಕೂಲಿಯನ್ನು ಸಾವಿರ ಬೀಡಿಗಳನ್ನು ಕಟ್ಟಲು ರೂ. 210 ರಿಂದ ರೂ. 185ಕ್ಕೆ ಇಳಿಸಲಾಗಿದೆ. ತುಟ್ಟಿ ಭತ್ಯೆ ಹೆಚ್ಚಳದ ದರವನ್ನು ಪ್ರತಿ ಗ್ರಾಹಕರ ಬೆಲೆ ಸೂಚ್ಯಾಂಕದ ಅಂಶಕ್ಕೆ 4ಪೈಸೆಯಿಂದ 3 ಪೈಸೆಗೆ ಪೂರ್ವಾನ್ವಯವಾಗುವಂತೆ ಇಳಿಸಲಾಗಿದೆ. ಈ ಘೋರ ಅನ್ಯಾಯವನ್ನು ಸರಿಪಡಿಸಬೇಕು. ಕಾರ್ಮಿಕರಿಗೆ ದೊರಕಬೇಕಾದ ಕಾನೂನು ಬದ್ದ ತುಟ್ಟಿಭತ್ಯೆ ಹೆಚ್ಚಳವನ್ನು ಬಾಕಿ ಸಮೇತವಾಗಿ ಕೊಡಿಸಲು ಕ್ರಮ ವಹಿಸಬೇಕು.
    ಕಲಂ 5(1)(ಎ) ಗಳ ಅನುಸಾರ ರಚಿತವಾದ ಸಮಿತಿಗಳ ಶಿಫಾರಸ್ಸುಗಳಂತೆ ನಿಗದಿಯಾಗಿದ್ದ ಕನಿಷ್ಟವೇತವನ್ನು ಮಾಲಕರು ಜಾರಿ ಮಾಡಲು ನಿರಾಕರಿಸುವುದು, ಹಾಗು ಕನಿಷ್ಟ ವೇತನವನ್ನು ಜಾರಿ ಮಾಡಲು ನಿರಾಕರಿಸುವ ಮಾಲಿಕರ ಪರವಾಗಿ ಕನಿಷ್ಟ ವೇತನ ಅಧಿಸೂಚನೆಯನ್ನು ಹಿಂಪಡೆಯುವ ಸರ್ಕಾರದ ಕ್ರಮಗಳು ಅಘಾತಕಾರಿಯಾದ, ಕಾರ್ಮಿಕ ವಿರೋಧಿ ಧೋರಣೆಗಳಾಗಿರುತ್ತದೆ.
    ಕಲಂ 5(1)(ಎ) ಮೂಲಕ ಕನಿಷ್ಟ ವೇತನವನ್ನು ನಿಗದಿಪಡಿಸುವ ವಿಧಾನವು ಕಾನೂನು ಬದ್ಧವೇತನವನ್ನು ಪಡೆಯಲು ಕಾರ್ಮಿಕರಿಗೆ ಸಹಕರಿಸುವುದಿಲ್ಲ ಎಂಬುದಕ್ಕೆ ಇದಕ್ಕಿಂತಲು ಉತ್ತಮ ಉದಾಹರಣೆ ಇಲ್ಲ.
    ಬೀಡಿ ಹಾಗು ತಂಬಾಕು ಉದ್ದಿಮೆಗಳಿಗು ಎಲ್ಲಾ ಉದ್ದಿಮೆಗಳಿಗೆ ನಿಗದಿಯಾಗುವ ವೇತವನ್ನು ಅನ್ವಯಗೊಳಿಸಬೇಕೆಂದು ನಮ್ಮ ಸಂಘವು ಒತ್ತಾಯಿಸುತ್ತದೆ.

ನಮ್ಮ ಹಕ್ಕೊತ್ತಾಯಗಳು:

  1. ರಾಜ್ಯದಲ್ಲಿನ ಎಲ್ಲಾ ಉದ್ದಿಮೆಗಳ ಕಾರ್ಮಿಕರಿಗೆ ಮಾಸಿಕ ಕನಿಷ್ಟ ವೇತನ 35500 ರೂ ಗಳಿಗಿಂತ ಕಡಿಮೆ ಇಲ್ಲದೆಂತೆ À ಕನಿಷ್ಟ ವೇತವನ್ನು ನಿಗಧಿಪಡಿಸಬೇಕು. ಕಲಂ 5(1)(ಎ) ಅಡಿಯಲ್ಲಿ ಬೀಡಿ ಕಾರ್ಮಿಕರಿಗೆ ಕನಿಷ್ಟ ವೇತನ ನಿಗಧಿಪಡಿಸುವ ವಿಧಾನವನ್ನು ಕೈಬಿಡಬೇಕು. ದಿನಾಂಕ 01.04.2025ರಿಂದ ಜಾರಿಗೆ ಬರುವಂತೆ ಕನಿಷ್ಟವೇತನ ಜಾರಿಯಾಗಬೇಕು.
  2. ತುಟ್ಟಿ ಭತ್ಯೆಯನ್ನು 9469 ಅಂಶಗಳಿಗೆ ಹೆಚ್ಚಾಗುವ ಪ್ರತಿ ಅಂಶಕ್ಕು ಪ್ರತಿ ದಿನಕ್ಕೆ 6 ಪೈಸೆ ರೀತಿಯಲ್ಲಿ ಪಾವತಿಸುವಂತಾಗಬೇಕು. ಈ ಮೇಲೆ ಸೂಚಿಸಿದ ರೀತಿಯಲ್ಲಿ ಪ್ರತಿ ಏಪ್ರಿಲ್ ಹಾಗು ಅಕ್ಟೋಬರ್ ತಿಂಗಳಲ್ಲಿ ತುಟ್ಟಿಭತ್ಯೆಯ ಹೆಚ್ಚಳವನ್ನು ನೀಡುವಂತೆ ಪ್ರಕಟಿಸಬೇಕು.
  3. ಪ್ರತಿ ಮೂರು ವರ್ಷಕ್ಕೊಮ್ಮೆ ಕನಿಷ್ಟವೇತನದ ಪುನರ್ವಿಮರ್ಶೆಯಾಗುವಂತಾಗಬೇಕು.
    4 ಟೈಲರಿಂಗ್‌ಒಳಗೊAಡAತೆ ಜವಳಿ ಉದ್ದಿಮೆಗಳ ಹಾಗು ಬೀಡಿ ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.
  4. ಸ್ಕಿಮ್ ನೌಕರರಾದ ಅಂಗವಾಡಿ, ಆಶಾ, ಬಿಸಿಯೂಟ ನೌಕರರ ಕನಿಷ್ಟ ವೇತನದ ವ್ಯಾಪ್ತಿಗೆ ಒಳಪಡಿಸಬೇಕು.

ಎನ್. ಕೆ. ಸುಬ್ರಮಣ್ಯ ನಾಗರತ್ನ ಸುಜಾತ
ಪೌರ ಕಾರ್ಮಿಕರ ಸಂಘ ಬಿಸಿಊಟ ನೌಕರರ ಸಂಘ, ಸ್ವಚ್ಚವಾಹಿತಿ ನೌಕರರ ಸಂಘ

Leave a Reply

Your email address will not be published. Required fields are marked *