Headlines

ಬರೀ ಮೊಸಳೆಗಳೇ ತುಂಬಿದ ನದಿಯಲ್ಲಿ ಕಾಲಿಟ್ಟ ವ್ಯಕ್ತಿ, ಅವು ಸುಮ್ನೆ ಇದ್ವಾ? | Netizens React In Fear As Man Rows Through Crocodile Filled Waters

ಬರೀ ಮೊಸಳೆಗಳೇ ತುಂಬಿದ ನದಿಯಲ್ಲಿ ಕಾಲಿಟ್ಟ ವ್ಯಕ್ತಿ, ಅವು ಸುಮ್ನೆ ಇದ್ವಾ? | Netizens React In Fear As Man Rows Through Crocodile Filled Waters



ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮೊಸಳೆಗಳಿಂದ ತುಂಬಿರುವ ನದಿಯಲ್ಲಿ ಒಬ್ಬಂಟಿಯಾಗಿ ದೋಣಿಯಲ್ಲಿ ಹೋಗುತ್ತಾನೆ. ಅದು ಕೂಡ ಯಾವುದೇ ಭಯವಿಲ್ಲದೆ!

ನೀವೀಗ ಊಹಿಸಿಕೊಳ್ಳಿ… ಒಂದು ತೆಳುವಾದ ಮರದ ದೋಣಿ. ಅದರಲ್ಲಿ ನೀವು ಕುಳಿತಿದ್ದೀರಿ. ಆ ದೋಣಿಯ ಸುತ್ತಲೂ ನೀರಿಲ್ಲ ಬದಲಾಗಿ ಮೊಸಳೆಗಳಿವೆ. ಅದು ಒಂದಲ್ಲ ಎರಡಲ್ಲ, ನೂರಾರು ಮೊಸಳೆಗಳು. ನೀರಿನ ಮೇಲ್ಮೈಯಲ್ಲಿ ಮಲಗಿರುತ್ತವೆ. ಮೊಸಳೆಗಳೇ ತುಂಬಿದ ಆ ನದಿಯ ಮಧ್ಯದಲ್ಲಿ ನೀವು ಹೋಗಬೇಕಾಗುತ್ತದೆ. ಆಗ ಏನು ಮಾಡುತ್ತೀರಿ? ನೀವು ಕಿರುಚುತ್ತೀರಾ ಅಥವಾ ನಡುಗುತ್ತೀರಾ ಅಥವಾ ವಿಧಿಗೆ ಶರಣಾಗುತ್ತೀರಾ?. ಇದೆಂಥ ಪ್ರಶ್ನೆ ಎಂದು ನಿಮಗನಿಸಬಹುದು. ಆದರೆ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮೊಸಳೆಗಳಿಂದ ತುಂಬಿರುವ ನದಿಯಲ್ಲಿ ಒಬ್ಬಂಟಿಯಾಗಿ ದೋಣಿಯಲ್ಲಿ ಹೋಗುತ್ತಾನೆ. ಅದು ಕೂಡ ಯಾವುದೇ ಭಯವಿಲ್ಲದೆ.

ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ನೆಟ್ಟಿಗರ ಮನ ಗೆಲ್ಲುತ್ತವೆ. ಕೆಲವು ವಿಡಿಯೋಗಳು ತಮಾಷೆಯಾಗಿ, ಮತ್ತೆ ಕೆಲವು ತುಂಬಾ ಭಾವನಾತ್ಮಕ ಮತ್ತು ಹೃದಯಸ್ಪರ್ಶಿಯಾಗಿರುತ್ತವೆ. ಹಾಗೆಯೇ ಆಶ್ಚರ್ಯಕರವಾಗಿಯೂ ಇರುತ್ತವೆ. ಆದರೆ ಕೆಲವು ಮಾತ್ರ ಭಯಾನಕವಾಗಿರುತ್ತವೆ. ಅಂತಹ ಒಂದು ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿನ ದೃಶ್ಯಗಳನ್ನು ನೋಡಿದರೆ ಅದು ಅಡೋಕಾ ನದಿ. ಅದರಲ್ಲಿ ಹರಿಯುವ ನೀರಿನಲ್ಲಿ ಅಪಾರ ಸಂಖ್ಯೆಯ ಮೊಸಳೆಗಳಿವೆ.

ವಿಡಿಯೋದಲ್ಲಿ ಏನಿದೆ?
ಈ ವಿಡಿಯೋವನ್ನು ಆಡ್ಲಿ ಟೆರಿಫೈಯಿಂಗ್ ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನೂರಾರು ಮೊಸಳೆಗಳು ನದಿಯ ಮೇಲ್ಮೈಯಲ್ಲಿ ನಿರ್ಜೀವವಾಗಿ ಬಿದ್ದಿರುವುದನ್ನು ಕಾಣಬಹುದು. ಕೆಲವು ಜೌಗು ಮಣ್ಣಿನಲ್ಲಿ ಅರ್ಧದಷ್ಟು ಹೂತುಹೋಗಿವೆ, ಆದರೆ ಕೆಲವು ನೀರಿನ ಮೇಲೆ ಬಾಲವನ್ನು ಹರಡಿ ವಿಶ್ರಾಂತಿ ಪಡೆಯುತ್ತಿವೆ. ಏತನ್ಮಧ್ಯೆ, ಒಬ್ಬ ವ್ಯಕ್ತಿ ಈ ಅಪಾಯಕಾರಿ ಪ್ರಾಣಿಗಳ ಮಧ್ಯೆ ಸಣ್ಣ ಮರದ ದೋಣಿಯಲ್ಲಿ ಹಾದು ಹೋಗುತ್ತಾನೆ. ಅವನು ಕಿರುಚುವುದಿಲ್ಲ ಅಥವಾ ಭಯಭೀತನಾಗುವುದಿಲ್ಲ. ಅವನು ದೋಣಿಯ ಮೇಲೆ ಕುಳಿತು ಸದ್ದಿಲ್ಲದೆ ಮುಂದೆ ಸಾಗುತ್ತಾನೆ, ಇದು ಅವನ ದೈನಂದಿನ ಪ್ರಯಾಣ ಎಂಬಂತೆ.

Scroll to load tweet…

ವಿಐಪಿ ಬಂದಂತೆ ಇತ್ತು!
ಸಾಮಾನ್ಯವಾಗಿ ಅನೇಕ ಜನರು ಅಂತಹ ನದಿಯನ್ನು ನೋಡುವುದಕ್ಕೆ ಹೆದರುತ್ತಾರೆ. ಅಂತಹುದರಲ್ಲಿ ಈ ವಿಡಿಯೋದ ಅತ್ಯಂತ ಅಚ್ಚರಿಯ ವಿಷಯವೆಂದರೆ ದೋಣಿ ಮೊಸಳೆಗಳ ಕಡೆಗೆ ಚಲಿಸಿದ ತಕ್ಷಣ, ಅವು ದಾರಿ ಬಿಟ್ಟು ದೂರ ಸರಿಯಲು ಪ್ರಾರಂಭಿಸುತ್ತವೆ. ಕೆಲವು ನೀರಿನಲ್ಲಿ ಜಾರಿ ಬೀಳುತ್ತವೆ, ಇನ್ನು ಕೆಲವು ಮೇಲಕ್ಕೆ ನೋಡುತ್ತವೆ. ಆದರೆ ಯಾವೂ ಆ ವ್ಯಕ್ತಿಯ ಮೇಲೆ ದಾಳಿ ಮಾಡಲಿಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರಕಾರ, ಈ ದೃಶ್ಯವು ಮೊಸಳೆಗಳು ಅವನಿಗೆ ದಾರಿ ಮಾಡಿಕೊಟ್ಟಂತೆ, ಒಬ್ಬ ವಿಐಪಿ ಬಂದಂತೆ ಇತ್ತು.

ದೋಣಿ ವಿಹಾರ ಮಾಡುತ್ತಿರುವಂತೆ ಭಾಸ
ವಿಡಿಯೋದಲ್ಲಿರುವ ವ್ಯಕ್ತಿಯ ಮುಖದಲ್ಲಿ ಬೇರೆಯದೇ ರೀತಿಯ ಶಾಂತಿ ಇದೆ, ಯಾವುದೇ ಭಯ ಅಥವಾ ಆತುರವಿಲ್ಲ. ಅವನ ಮುಖಭಾವಗಳನ್ನು ನೋಡಿದರೆ ಅವನು ಉದ್ಯಾನವನದಲ್ಲಿ ದೋಣಿ ವಿಹಾರ ಮಾಡುತ್ತಿರುವಂತೆ ಭಾಸವಾಗುತ್ತದೆ, ಆದರೆ ಸತ್ಯವೆಂದರೆ ಅವನು ಸಾವಿನ ದವಡೆಯ ಮೂಲಕ ಹಾದುಹೋಗುತ್ತಿದ್ದಾನೆ.

ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋವನ್ನು ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋಗೆ ಬಳಕೆದಾರರು ತಮಾಷೆಯ ಮತ್ತು ಆಶ್ಚರ್ಯಕರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಓರ್ವ ಬಳಕೆದಾರರು ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕಲು ಇದೇ ಕಾರಣ ಎಂದರೆ ಈ ಮೊಸಳೆಗಳು ಜನರಿಗಿಂತ ಹೆಚ್ಚು ನಾಗರಿಕ ಎಂದಿದ್ದಾರೆ. ಮತ್ತೆ ಕೆಲವರು ಸಹೋದರ, ನೀವು ಹೆದರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.



Source link

Leave a Reply

Your email address will not be published. Required fields are marked *