ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ

ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ


ನವದೆಹಲಿ, ಜೂನ್ 22: ಜಾಗತಿಕ ಜವಳಿ ಉದ್ಯಮದ ಸರಬರಾಜು ಸರಪಳಿಯಲ್ಲಿ ಬದಲಾವಣೆ ಆಗುತ್ತಿದೆ. ಚೀನಾ, ಬಾಂಗ್ಲಾದೇಶಗಳು ಜವಳಿ ವಸ್ತುಗಳ (garments) ಸರಬರಾಜು ವಿಚಾರದಲ್ಲಿ ಪ್ರಬಲವಾಗಿವೆ. ಬಾಂಗ್ಲಾದೇಶದ ಪ್ರಮುಖ ಆದಾಯ ಮೂಲವೇ ಜವಳಿ ಕ್ಷೇತ್ರವಾಗಿದೆ. ಈಗ ಜಾಗತಿಕ ಜವಳಿ ಸರಬರಾಜು ಸರಪಳಿಯಲ್ಲಿ (global supply chain) ಚೀನಾ, ಬಾಂಗ್ಲಾದೇಶದಿಂದ ಭಾರತಕ್ಕೆ ಹಂತ ಹಂತಕ್ಕೆ ಬದಲಾವಣೆ ಆಗತೊಡಗಿದೆ. ಅಂದರೆ, ಜವಳಿ ಆಮದು ಮಾಡಿಕೊಳ್ಳಲು ಚೀನಾ ಮತ್ತು ಬಾಂಗ್ಲಾ ಬದಲು ಭಾರತಕ್ಕೆ ಆದ್ಯತೆ ನೀಡಲಾಗುತ್ತಿದೆ.

ಇಂಥದ್ದೊಂದು ಬೆಳವಣಿಗೆ ಆಗುತ್ತಿದೆ ಎನ್ನುವ ಸುದ್ದಿಗೆ ಇಂಬುಕೊಡುವಂತೆ ಭಾರತದ ಜವಳಿ ಉದ್ಯಮದ ಸಂಘಟನೆಯಾದ ಸಿಐಟಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಭಾರತದಿಂದ ಜವಳಿ ರಫ್ತು ಮೇ ತಿಂಗಳಲ್ಲಿ ಶೇ. 11.3ರಷ್ಟು ಹೆಚ್ಚಳ ಆಗಿದೆ. ಚೀನಾ ಮತ್ತು ಬಾಂಗ್ಲಾದೇಶದ ಜವಳಿ ಉದ್ಯಮವು ಭಾರತದಕ್ಕೆ ಹೋಲಿಸಿದರೆ ಬಹಳ ಪ್ರಬಲವಾಗಿವೆ. ಆದಾಗ್ಯೂ ಭಾರತದಿಂದ ಗಾರ್ಮೆಂಟ್ಸ್ ರಫ್ತು ಗಣನೀಯವಾಗಿ ಏರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಡಿಆರ್​​​ಡಿಒ ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರಗಳು ಮತ್ತವುಗಳ ಸಾಮರ್ಥ್ಯ; ಇಲ್ಲಿದೆ ಪಟ್ಟಿ

2024ರ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡು ಹೊಸ ಆಡಳಿತ ಬಂದಿದೆ. ಆಗಿನಿಂದ ಅಲ್ಲಿ ರಾಜಕೀಯ ಅಸ್ಥಿರತೆ ನೆಲಸಿದೆ. ಅದರ ಪರಿಣಾಮವಾಗಿ ಮತ್ತು ಭಾರತ ಸರ್ಕಾರದ ಜವಳಿ ಪರ ನೀತಿಗಳಿಂದಾಗಿ ಭಾರತೀಯ ಕಂಪನಿಗಳಿಗೆ ಹೆಚ್ಚೆಚ್ಚು ಗಾರ್ಮೆಂಟ್ಸ್ ಆರ್ಡರ್ ಸಿಗತೊಡಗಿದೆ.

ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ 2024ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ರಫ್ತು ಶೇ. 17.3ರಷ್ಟು ಏರಿತ್ತು. ಅಕ್ಟೋಬರ್​​ನಲ್ಲಿ ಶೇ. 24.35ರಷ್ಟು ಏರಿತ್ತು.

ಚೀನಾಗೆ ಹೋಗಬೇಕಿದ್ದ ಆರ್ಡರ್​​ಗಳು ಭಾರತಕ್ಕೆ ಸಿಗುತ್ತಿವೆಯಾ?

ಅಮೆರಿಕ ಸರ್ಕಾರವು ಚೀನಾ ಮೇಲೆ ಹೆಚ್ಚಿನ ಸುಂಕ ವಿಧಿಸಿರುವುದು ಭಾರತದ ಜವಳಿ ಉದ್ಯಮಕ್ಕೆ ಅನುಕೂಲವಾಗಿರಬಹುದು. ಹೆಚ್ಚಿನ ಜಾಗತಿಕ ಉಡುಪು ಉದ್ಯಮಗಳು ತಮ್ಮ ಪೂರೈಕೆಗಾಗಿ ಚೀನಾ ಬದಲು ಭಾರತವನ್ನು ಆಯ್ಕೆ ಮಾಡಿಕೊಳ್ಳುತ್ತಿರಬಹುದು.

ಇದನ್ನೂ ಓದಿ: ಭಾರತದಲ್ಲಿ ಇನ್ನೈದು ವರ್ಷದಲ್ಲಿ 10 ಪಟ್ಟು ಹೆಚ್ಚಲಿದೆ ಎಲೆಕ್ಟ್ರಿಕ್ ಕಾರ್ ನಿರ್ಮಾಣ ಸಾಮರ್ಥ್ಯ: ವರದಿ

ಚೀನಾ ಮತ್ತು ಬಾಂಗ್ಲಾದೇಶದ ಗಾರ್ಮೆಂಟ್ಸ್ ಉದ್ಯಮದಷ್ಟು ಉತ್ಪಾದನಾ ಸಾಮರ್ಥ್ಯ ಭಾರತದ ಕಂಪನಿಗಳಿಗೆ ಇಲ್ಲವಾದರೂ, ಹಂತ ಹಂತವಾಗಿ ಕೆಪಾಸಿಟಿ ಏರಿಕೆ ಮಾಡುತ್ತಿವೆ. ಮುಂಬರುವ ವರ್ಷಗಳಲ್ಲಿ ಭಾರತದ ಜಿಡಿಪಿಗೆ ಜವಳಿ ಉದ್ಯಮದ ಕೊಡುಗೆ ಗಣನೀಯವಾಗಿ ಏರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *