
ಕಳೆದ ಎರಡು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದ. ಇದೀಗ ಮತ್ತೆ ಬೆಂಗಳೂರಿನ ವರುಣ ಆರ್ಭಟಿಸಿದ್ದಾನೆ. ಬೆಂಗಳೂರು ನಗರದ ಹಲವು ಕಡೆಗಳಲ್ಲಿ ರವಿವಾರ ಸಂಜೆ ಮಳೆಯಾಗಿದೆ. ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಗಾಂಧಿನಗರ, ಶಾಂತಿನಗರ, ಜಯನಗರ ರಾಜಾಜಿನಗರ, ವಿಜಯನಗರ, ಕಾಮಾಕ್ಷಿ ಪಾಳ್ಯ, ಹೆಬ್ಬಾಳ, ಆರ್ ಟಿ ನಗರ, ಸಂಜಯ ನಗರ, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಭಾನುವಾರ ಸಂಜೆ ಸುರಿದ ಮಳೆಯಿಂದ ಬೀದಿ ಬದಿ ವ್ಯಾಪಾರಿಗಳು ಮತ್ತು ಹೊರಗಡೆ ಸುತ್ತಾಡಲು ಬಂದಿದ್ದ ವಾಹನ ಸವಾರರು ಪರದಾಡಿದರು. ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿದೆ.