Headlines

ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್; ವಿಡಿಯೋ ನೋಡಿ

ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್; ವಿಡಿಯೋ ನೋಡಿ


ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಜುಲೈ 2 ರಿಂದ 6 ರವರೆಗೆ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಸೋಲನ್ನು ಎದುರಿಸಿರುವ ಟೀಂ ಇಂಡಿಯಾ ಮತ್ತೆ ಗೆಲುವಿನ ಲಯಕ್ಕೆ ಮರಳುವತ್ತ ಗಮನಹರಿಸುತ್ತಿದೆ. ಇದಕ್ಕಾಗಿ ತಂಡದ ಆಟಗಾರರು ಕೂಡ ಕೆಲವು ದಿನಗಳಿಂದ ಮೈದಾನದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಈ ಸಿದ್ಧತೆಗಳ ನಡುವೆ ಒಂದು ತಮಾಷೆಯ ಘಟನೆ ಎಲ್ಲರ ಗಮನ ಸೆಳೆದಿದ್ದು, ಇದರಲ್ಲಿ ತಂಡದ ಇಬ್ಬರು ಆಟಗಾರರು ತಂಡದ ಬೌಲಿಂಗ್ ಕೋಚ್ ಜೊತೆ ಕುಸ್ತಿಯಾಡಿ ಸೋತಿದ್ದಾರೆ.

ಅಭ್ಯಾಸ ಅವಧಿಯಲ್ಲಿ WWE ಫೈಟ್

ಇಂಗ್ಲೆಂಡ್ ತಂಡದ ಎರಡನೇ ಟೆಸ್ಟ್​​ನಲ್ಲಿ ಮಣಿಸುವ ಸಲುವಾಗಿ ಟೀಂ ಇಂಡಿಯಾ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ತಂಡದ ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಮತ್ತು ಆಕಾಶ್ ದೀಪ್ ಅವರು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ಅವರೊಂದಿಗೆ WWE ಫೈಟ್ ಆಡಿದ್ದಾರೆ. ಆದರೆ ಮಾರ್ಕೆಲ್ ವಿರುದ್ಧ ಮೇಲುಗೈ ಸಾಧಿಸಲು ಅರ್ಷದೀಪ್​ಗೆ ಸಾಧ್ಯವಾಗಿಲ್ಲ. ತಮಾಷೆಯಿಂದ ಕೂಡಿದ್ದ ಈ WWE ಫೈಟ್ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *