ಇಸ್ಲಾಮಾಬಾದ್, ಜೂನ್ 27: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ (Khawaja Asif) ಅವರು ಭಾರತದೊಂದಿಗಿನ ಮಿಲಿಟರಿ ಒಪ್ಪಂದಗಳ ಸಮಯದಲ್ಲಿ ಚೀನಾ (China) ಪಾಕಿಸ್ತಾನಕ್ಕೆ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ಒದಗಿಸಿದೆ ಎಂದು ಒಪ್ಪಿಕೊಂಡಿದ್ದಾರೆ. ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಬಗ್ಗೆ ಚೀನಾದಿಂದ ನಮಗೆ ಮಾಹಿತಿ ಸಿಕ್ಕಿತ್ತು. ಇದು ಹೆಚ್ಚಿದ ಉದ್ವಿಗ್ನತೆಯ ಸಮಯದಲ್ಲಿ ಪಾಕಿಸ್ತಾನವು (Pakistan) ತನ್ನ ಕಾರ್ಯತಂತ್ರದ ಸಿದ್ಧತೆಯನ್ನು ಬಲಪಡಿಸಲು ಅನುವು ಮಾಡಿಕೊಟ್ಟಿತು ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.
‘ಯುದ್ಧದ ಸಮಯದಲ್ಲಿ ಚೀನಾ ನಮ್ಮೊಂದಿಗೆ ಭಾರತದ ಬಗ್ಗೆ ಗುಪ್ತಚರವನ್ನು ಹಂಚಿಕೊಂಡಿದೆ’ ಎಂದು ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನ ಮತ್ತು ಚೀನಾದ ಅಸಲಿ ಮುಖ ಮತ್ತೊಮ್ಮೆ ಬಯಲಾದಂತಾಗಿದೆ. ಪಹಲ್ಗಾಮ್ ದಾಳಿಯ ನಂತರ ಭಾರತದೊಂದಿಗಿನ ಸಂಘರ್ಷದ ಬಳಿಕ ಪಾಕಿಸ್ತಾನವು ಹೆಚ್ಚಿನ ಅಲರ್ಟ್ನಲ್ಲಿದೆ ಎಂದು ಖವಾಜಾ ಆಸಿಫ್ ಹೇಳಿದ್ದಾರೆ. ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಸಂಬಂಧಿಸಿದ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಚೀನಾ ಇಸ್ಲಾಮಾಬಾದ್‌ಗೆ ಸಹಾಯ ಮಾಡಿದೆ ಎಂದು ಒತ್ತಿ ಹೇಳಿದ್ದಾರೆ.
Pakistan’s Defence Minister Khawaja Asif admits that China shared intelligence on Indian Air Defence System, Missile, Flight path and operation with Paksitan pic.twitter.com/xMc3sj4rde
— India Matters with Rohit Sharma (@indiajourno) June 27, 2025
ಇದನ್ನೂ ಓದಿ: ಪಾಕಿಸ್ತಾನದ ಪಿಆರ್; ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ವಿರುದ್ಧ ಕಾಂಗ್ರೆಸ್, ಬಿಜೆಪಿ ವಾಗ್ದಾಳಿ
“ಭಾರತದೊಂದಿಗಿನ ಅಲ್ಪ ಸಮಯದ ಯುದ್ಧದ ನಂತರ ಪಾಕಿಸ್ತಾನವು ಹೆಚ್ಚಿನ ಅಲರ್ಟ್ನಲ್ಲಿದೆ. ಕಳೆದ 1 ತಿಂಗಳಿಗಿಂತ ಹೆಚ್ಚು ಸಮಯದ ನಂತರವೂ ಪಾಕಿಸ್ತಾನ ಹೈ ಅಲರ್ಟ್ ವಹಿಸಿದೆ” ಎಂದು ಖವಾಜಾ ಹೇಳಿದ್ದಾರೆ. ಭಾರತದ ಉಪಗ್ರಹದ ಚಿತ್ರಣ ಸೇರಿದಂತೆ ಸೂಕ್ಷ್ಮ ಡಾಟಾಗಳ ವಿನಿಮಯವು ಸಮಾನ ಹಿತಾಸಕ್ತಿಗಳನ್ನು ಹಂಚಿಕೊಳ್ಳುವ ದೇಶಗಳ ನಡುವೆ ನಿಯಮಿತ ವಿಷಯವಾಗಿದೆ ಎಂದು ಆಸಿಫ್ ಹೇಳಿದ್ದಾರೆ. ಪಾಕಿಸ್ತಾನದಂತೆಯೇ ಚೀನಾ ಕೂಡ ಭಾರತದ ಬಗ್ಗೆ ತನ್ನದೇ ಆದ ಭದ್ರತಾ ಕಾಳಜಿಗಳನ್ನು ಹೊಂದಿದೆ. ಹೀಗಾಗಿಯೇ ಅದು ಪಾಕಿಸ್ತಾನಕ್ಕೆ ಸಹಾಯ ಮಾಡಿತು ಎಂದಿದ್ದಾರೆ.
ಇದನ್ನೂ ಓದಿ: ಸಿಂಧೂ ನದಿ ನೀರಿನ ಹರಿವು ನಿಲ್ಲಿಸಿದರೆ ಪಾಕಿಸ್ತಾನ ಯುದ್ಧಕ್ಕೆ ಸಿದ್ಧ; ಭಾರತಕ್ಕೆ ಬಿಲಾವಲ್ ಭುಟ್ಟೋ ಬೆದರಿಕೆ
“ರಾಷ್ಟ್ರಗಳು ತಮಗೆ ತಿಳಿದಿರುವುದನ್ನು ಬೇರೆ ದೇಶದೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಅರಲ್ಲೂ ಎರಡೂ ದೇಶಕ್ಕೆ ಒಂದೇ ದೇಶ ಶತ್ರುವಾಗಿದ್ದಾಗ ಇದು ಸಾಮಾನ್ಯ. ಚೀನಾ ನಮ್ಮಂತೆಯೇ ಭಾರತದಿಂದ ಸವಾಲುಗಳನ್ನು ಎದುರಿಸುತ್ತಿದೆ. ಉಪಗ್ರಹ ಆಧಾರಿತ ಗುಪ್ತಚರ ಮತ್ತು ಕಣ್ಗಾವಲು ಮಾಹಿತಿಗಳನ್ನು ಹಂಚಿಕೊಳ್ಳುವುದು ನಮ್ಮ ನಡುವೆ ನಡೆಯುತ್ತಿರುವ ಕಾರ್ಯತಂತ್ರದ ಸಹಯೋಗದ ಭಾಗವಾಗಿದೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:02 pm, Fri, 27 June 25