
ಚಿಕ್ಕನಾಯಕನಹಳ್ಳಿ : ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎನ್ನುವ ಮಾತು ಎಂದಿಗೂ ಸತ್ಯ, ಶಿಕ್ಷಣದ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವುದು ಮಕ್ಕಳ ಭವಿಷ್ಯವನ್ನ ರೂಪಿಸುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ಬನಶಂಕರಿ ಪ್ರಾರ್ಥನ ಮಂದಿರದಲ್ಲಿ ದೇವಾಂಗ ಸಂಘದ ವತಿಯಿಂದ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಾಂಗ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗದೇವಾಂಗ ಸಂಘದಲ್ಲಿ 1 ಲಕ್ಷವನ್ನು ಪುದುವಟ್ಟು ಇಡುತ್ತಿದ್ದೇನೆ. ವಿದ್ಯಾರ್ಥಿಗಳು ಎಂದಿಗೂ ಶಿಕ್ಷಣದ ಕಡೆ ಗಮನ ಹರಿಸಿ, ಆ ಶಿಕ್ಷಣ ನಿಮ್ಮಗಳ ಬೆಳವಣಿಗೆ ಹಾಗೂ ಮುಂದಿನ ಭವಿಷ್ಯಕ್ಕೆ ದಾರಿಯಾಗಲಿದೆ ಎಂದರು.
ಸಿಇಟಿ ಪರೀಕ್ಷೆಯಲ್ಲಿ ಎಸ್.ಬಿ.ಚಾರಿಟಬಲ್ ವತಿಯಿಂದ ನೀಡುತ್ತಿರುವ ತರಬೇತಿಯಲ್ಲಿ ಉತ್ತಮ ಅಂಕಗಳಿಸಿ ಇಂಜನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ದೇವಾಂಗ ಬೀದಿಯು ಬೆಂಗಳೂರಿನ ಚಿಕ್ಕಪೇಟೆ ರೀತಿ ಬೆಳೆದಿದೆ. ರಸ್ತೆ ಪೂರ್ಣ ಬಟ್ಟೆ ಅಂಗಡಿಗಳದೇ ದರ್ಬಾರ್ ಆಗಿದೆ. ಚಿಕ್ಕನಾಯಕನಹಳ್ಳಿ ಪಟ್ಟಣವೂ ದಿನ ಕಳೆದಂತೆ ಬೆಳೆಯುತ್ತಿದೆ ಎಂದರು.
ದೇವಾಂಗ ಸಂಘದ ನಿರ್ದೇಶಕ ಬನಶಂಕರಯ್ಯ ದೇವಾಂಗ ಸಮಾಜದ ವತಿಯಿಂದ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ, ಅಜಾತರುದ್ರ ಮಠದಲ್ಲಿ ಹಾಗೂ ದೇವಾಂಗ ಸಂಘದ ನಿವೇಶನದಲ್ಲೊಂದು ಸಮುದಾಯ ಭವನ ನಿರ್ಮಿಸಲು ಅನುದಾನ ನೀಡುವಂತೆ ಹಾಗೂ ದೇವರ ದಾಸಿಮಯ್ಯ ನವರ ಹೆಸರನ್ನು ಮುಖ್ಯರಸ್ತೆಯಲ್ಲಿ ಇಡುವಂತೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಲಕ್ಷ್ಮೀ ಪಾಂಡುರಂಗಯ್ಯ, ದೇವಾಂಗ ಸಂಘದ ಸಿ.ಎ.ಕುಮಾರಸ್ವಾಮಿ ಮಾತನಾಡಿದರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಾಂಗ ಸಂಘದ, ದೇವಾಂಗ ಹಾಸ್ಟಲ್ ಸಂಘದ ನಿರ್ದೇಶಕರುಗಳಾದ ಬನಶಂಕರಯ್ಯ, ಕೇಶವಮೂರ್ತಿ, ಬಿ.ಎನ್.ಜಗದೀಶ್, ಗಿರೀಶ್ , ಸಿ.ಕೆ.ರಾಧಕೃಷ್ಣ, ಲೋಕೇಶ್ ಸೇರಿದಂತೆ ಹಲವರು ಇದ್ದರು.
ಚಿಕ್ಕನಾಯಕನಹಳ್ಳಿ ಪಟ್ಟಣದ ಬನಶಂಕರಿ ಪ್ರಾರ್ಥನ ಮಂದಿರದಲ್ಲಿ ದೇವಾಂಗ ಸಂಘದ ವತಿಯಿಂದ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದು ಲಕ್ಷ ರೂಗಳ ಪುದುವಟ್ಟನ್ನು ಇಡಲು ದೇವಾಂಗ ಸಂಘದ ಮುಖಂಡರಿಗೆ ನೀಡಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯೆ ಲಕ್ಷ್ಮೀಪಾಂಡುರಂಗಯ್ಯ, ಸಿ.ಎ.ಕುಮಾರಸ್ವಾಮಿ, ಬನಶಂಕರಯ್ಯ, ಕೇಶವಮೂರ್ತಿ, ಬಿ.ಎನ್.ಜಗದೀಶ್, ಗಿರೀಶ್ , ಸಿ.ಕೆ.ರಾಧಕೃಷ್ಣ, ಲೋಕೇಶ್ ಸೇರಿದಂತೆ ಹಲವರು ಇದ್ದರು.