Headlines

ಮತ್ತೆ ಸುದ್ದಿಯಲ್ಲಿದ್ದಾಳೆ ಬರೀ ರೀಲ್ಸ್‌ನಿಂದಲೇ ದಿನಕ್ಕೆ 2.5 ಲಕ್ಷ ರೂ. ಸಂಪಾದಿಸುವ ಯುವತಿ | Meet The Noida Girl Earning 2 And Half Lakh Rs Daily From Instagram Reels

ಮತ್ತೆ ಸುದ್ದಿಯಲ್ಲಿದ್ದಾಳೆ ಬರೀ ರೀಲ್ಸ್‌ನಿಂದಲೇ ದಿನಕ್ಕೆ 2.5 ಲಕ್ಷ ರೂ. ಸಂಪಾದಿಸುವ ಯುವತಿ | Meet The Noida Girl Earning 2 And Half Lakh Rs Daily From Instagram Reels



ಕೇವಲ ಐದು ವರ್ಷಗಳಲ್ಲಿ ಅಪೂರ್ವ ಮುಖಿಜಾ ಡಿಜಿಟಲ್ ಜಗತ್ತಿನಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ. 

‘ದಿ ರೈಬಲ್ ಕಿಡ್’ ಎಂದೇ ಜನಪ್ರಿಯವಾಗಿರುವ ದೆಹಲಿ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಅಪೂರ್ವ ಮುಖಿಜಾ ಇತ್ತೀಚೆಗೆ ವಿಮಾನದಲ್ಲಿ ನಡೆದ ಘಟನೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ವಿಮಾನದಲ್ಲಿ ತುರ್ತು ಸೀಟು ನೀಡದ ಕಾರಣ ಚರ್ಚೆಯಲ್ಲಿದ್ದ ಅಪೂರ್ವ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ವಿಮಾನಯಾನ ಸಿಬ್ಬಂದಿ ಅವರನ್ನು ‘ಫಿಟ್’ ಎಂದು ಪರಿಗಣಿಸದ ಕಾರಣ ಈ ಘಟನೆ ಸಂಭವಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಅಪೂರ್ವ ಅವರ ವೈಯಕ್ತಿಕ ಮತ್ತು ವೃತ್ತಿಜೀವನದತ್ತ ಗಮನ ಸೆಳೆದಿದೆ.

ಅಪೂರ್ವ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವಂತೆ “ನಾನು ನಿದ್ದೆ ಮಾಡದೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ, ಆದರೆ ನಾನು ತುರ್ತು ಸೀಟನ್ನು ಕೇಳಿದಾಗ, ಕೌಂಟರ್‌ನಲ್ಲಿದ್ದ ಮಹಿಳೆ ವಿಶೇಷ ಚೇತನರಿಗೆ ಅದನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನು ಕೇಳಿ ನನಗೆ ಶಾಕ್ ಆಯ್ತು. ನಾನು ವಿಶೇಷಚೇತನಳಲ್ಲ. ಸಂಪೂರ್ಣವಾಗಿ ಸಮರ್ಥ ಯುವತಿ ಎಂದು ಹೇಳಿದಾಗ ಪುನಃ ಅವರು ನೀವು ಅನಾರೋಗ್ಯದಿಂದ ಬಳಲುತ್ತಿರುವಂತೆ ತೋರುತ್ತದೆ. ನಿಮ್ಮ ಮುಖವನ್ನು ನೋಡಿದಾಗ ಹಾಗೆ ಅನಿಸುತ್ತದೆ’ ಎಂದು ಹೇಳಿದ್ದಾರೆ. ಕೋಪಗೊಂಡ ಅಪೂರ್ವ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಿಮಾನಯಾನ ನೌಕರರ ವರ್ತನೆಯ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.

ಅಪೂರ್ವ ಮುಖಿಜಾ ಯಾರು?
1998ರಲ್ಲಿ ದೆಹಲಿಯಲ್ಲಿ ಜನಿಸಿದ ಅಪೂರ್ವ ಮುಖಿಜಾ, ಜೈಪುರದ ಮಣಿಪಾಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದರು. ಕೆಲವು ವರದಿಗಳ ಪ್ರಕಾರ ನೋಯ್ಡಾದಲ್ಲಿ ಜನಿಸಿದರು. ಅಪೂರ್ವ ಇಂದು ಪ್ರಮುಖ ಡಿಜಿಟಲ್ ಇನ್‌ಫ್ಲೂಯೆನ್ಸರ್ ಆಗಿದ್ದು, 2020 ರಲ್ಲಿ ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಾಮಿಕ್ ಸಂಯೋಜನೆಗಳು ಮತ್ತು ಸಣ್ಣ ಬ್ಲಾಗ್‌ಗಳಿಂದ ಜನರ ಗಮನ ಸೆಳೆದರು. ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. NIKE, OnePlus, Netflix, Amazon, Google, Meta, Maybelline, Kate Spade, Swiggy ಸೇರಿದಂತೆ 150 ಕ್ಕೂ ಹೆಚ್ಚು ದೊಡ್ಡ ಬ್ರ್ಯಾಂಡ್‌ಗಳೊಂದಿಗೆ ಸಹಯೋಗ ಹೊಂದಿದ್ದಾರೆ. ಇದಲ್ಲದೆ, ಅವರು ವೆಬ್ ಸಿರೀಸ್‌ನಲ್ಲೂ ಕೆಲಸ ಮಾಡಿದ್ದಾರೆ. 2023 ಮತ್ತು 2024 ರ ಫೋರ್ಬ್ಸ್ ‘ಟಾಪ್ 100 ಡಿಜಿಟಲ್ ಸ್ಟಾರ್ಸ್’ ಪಟ್ಟಿಯಲ್ಲಿ ಅವರನ್ನು ಸೇರಿಸಲಾಯಿತು.

ಆದಾಯ ಮತ್ತು ನಿವ್ವಳ ಆಸ್ತಿ
ಕೋವಿಡ್ ನಂತರದ ಐದು ವರ್ಷಗಳಲ್ಲಿ ಅಪೂರ್ವ ಅವರ ಡಿಜಿಟಲ್ ಉಪಸ್ಥಿತಿಯು ಅವರನ್ನು ಅತ್ಯಂತ ಶ್ರೀಮಂತ ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಜೂನ್ 2025ರ ಇತ್ತೀಚಿನ ವರದಿಯ ಪ್ರಕಾರ, ಅಪೂರ್ವ ಒಟ್ಟು ಆಸ್ತಿ 41 ಕೋಟಿ ರೂ. ದಿನಕ್ಕೆ 2.5 ಲಕ್ಷ ರೂ.ಗಳನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ 30 ಸೆಕೆಂಡುಗಳ ಸ್ಟೋರಿಗೆ 2 ಲಕ್ಷ ರೂ.ಗಳನ್ನು ಮತ್ತು ರೀಲ್ಸ್‌ಗೆ 6 ಲಕ್ಷ ರೂ.ಗಳನ್ನು ಗಳಿಸುತ್ತಾರೆ. ಪ್ರತಿ ಪೋಸ್ಟ್‌ಗೆ 2 ರಿಂದ 5 ಲಕ್ಷ ರೂ.ವಿಧಿಸುತ್ತಾರೆ. ಅಷ್ಟೇ ಅಲ್ಲ, ಯೂಟ್ಯೂಬ್ ಮೂಲಕ ಪ್ರತಿ ತಿಂಗಳು 5 ಲಕ್ಷ ರೂ.ಗಳವರೆಗೆ ಗಳಿಸುತ್ತಾರೆ. ಬ್ರ್ಯಾಂಡ್ ಒಪ್ಪಂದದಿಂದ ಅವರು ಪ್ರತಿ ಬ್ರ್ಯಾಂಡ್‌ಗೆ 10 ಲಕ್ಷ ರೂ.ಗಳನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.

ತಂತ್ರಜ್ಞಾನದ ಮೂಲಕ ಡಿಜಿಟಲ್ ಸ್ಟಾರ್
ತಾಂತ್ರಿಕ ಹಿನ್ನೆಲೆಯಿಂದ ಡಿಜಿಟಲ್ ಕ್ಷೇತ್ರಕ್ಕೆ ಕಾಲಿಟ್ಟ ಅಪೂರ್ವ, ತಮ್ಮ ಹಾಸ್ಯ ಮತ್ತು ಪ್ರಾಮಾಣಿಕ ವಿಷಯದಿಂದ ಜನರ ಹೃದಯ ಗೆದ್ದಿದ್ದಾರೆ. ಕೇವಲ ಐದು ವರ್ಷಗಳಲ್ಲಿ, ಅವರು ಡಿಜಿಟಲ್ ಜಗತ್ತಿನಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ. ಈ ಇತ್ತೀಚಿನ ಘಟನೆಯು ಅವರ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ಬಲಪಡಿಸಿದೆ ಮಾತ್ರವಲ್ಲದೆ, ವಿಮಾನಯಾನ ಸಂಸ್ಥೆಗಳ ಆಸನ ನೀತಿಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದೆ.



Source link

Leave a Reply

Your email address will not be published. Required fields are marked *