'ಮದುವೆಯಾಗುವುದಾಗಿ 5 ವರ್ಷಗಳಿಂದ..': RCB ಸ್ಟಾರ್ ಕ್ರಿಕೆಟಿಗನಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ! FIR ದಾಖಲು

'ಮದುವೆಯಾಗುವುದಾಗಿ 5 ವರ್ಷಗಳಿಂದ..': RCB ಸ್ಟಾರ್ ಕ್ರಿಕೆಟಿಗನಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ! FIR ದಾಖಲು

ನವದೆಹಲಿ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆರ್‌ಸಿಬಿ ತಂಡದ ಸ್ಟಾರ್ ವೇಗಿ ಯಶ್ ದಯಾಳ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮಿಂಚಿದ್ದ ಕ್ರಿಕೆಟಿಗ ಯಶ್‌ ದಯಾಳ್‌ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ, ವಂಚನೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮಹಿಳೆ ಮುಖ್ಯಮಂತ್ರಿಗಳ ಹೆಲ್ಪ್‌ಲೈನ್ ಪೋರ್ಟಲ್‌ ಮೂಲಕ ದಯಾಳ್ ವಿರುದ್ಧ ದೂರು ಸಲ್ಲಿಸಿದ್ದು, ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಕಾಲ್‌, ಫೋಟೋ, ಸ್ಕ್ರೀನ್‌ಶಾಟ್‌ಗಳು ಇರುವುದಾಗಿ ಹೇಳಿದ್ದಾರೆ.

‘ಅವರ ಜೊತೆ 5 ವರ್ಷಗಳಿಂದ ಸಂಬಂಧ ಹೊಂದಿದ್ದೇನೆ. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ 5 ವರ್ಷಗಳಿಂದ ದೈಹಿಕ, ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಪ್ರೀತಿಯಲ್ಲಿದ್ದಾಗ ನನ್ನಿಂದ ಹಣವನ್ನೂ ಪಡೆದು ವಂಚಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಅಲ್ಲದೇ ಹಿಂದೆಯೂ ಅನೇಕ ಯುವತಿಯರ ಜೊತೆಗೆ ಇದೇ ರೀತಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಯುವತಿಯ ಆರೋಪ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮುಖ್ಯಮಂತ್ರಿ ಕಾರ್ಯಾಲಯ ಕಚೇರಿ ತಲುಪಿದೆ. ಹೀಗಾಗಿ ಯಶ್ ದಯಾಳ್ ಕಾನೂನು ಸಮರಕ್ಕೆ ಮುಂದಾಗುವ ಸಾಧ್ಯತೆಯಿದೆ.

ಅಂದಹಾಗೆ ಈ ಘಟನೆಯ ಕುರಿತಂತೆ ಯಶ್ ದಯಾಳ್ ಅವರಾಗಲಿ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಾಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

2025ರ ಐಪಿಎಲ್ ಟೂರ್ನಿಗೂ ಮುನ್ನ ಯಶ್ ದಯಾಳ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿತ್ತು. ಆರ್‌ಸಿಬಿ ಚೊಚ್ಚಲ ಗೆಲುವಿನಲ್ಲಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು.

Source link

Leave a Reply

Your email address will not be published. Required fields are marked *