ಬೆಂಗಳೂರು, ಜೂನ್ 23: ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದೇ ಎಂಬ ಪ್ರಶ್ನೆಗೆ ವಿಡಿಯೋದಲ್ಲಿ ಡಾ. ಬಸವರಾಜ ಗುರೂಜಿಯವರು ಉತ್ತರಿಸಿದ್ದಾರೆ. ಸಾಮಾನ್ಯವಾಗಿ ದೇವರ ಮನೆ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿರುತ್ತದೆ. ಆದರೆ, ಪಶ್ಚಿಮಾಭಿಮುಖವಾಗಿಯೂ ಇರಬಹುದು. ಶೈವಾಗಮ ಮತ್ತು ವೈಷ್ಣವಾಗಮಗಳಲ್ಲಿ ದೇವಸ್ಥಾನಗಳ ನಿರ್ಮಾಣ ಮತ್ತು ದೇವತಾ ಪ್ರತಿಷ್ಠಾಪನೆಗೆ ವಿಭಿನ್ನ ವಿಧಿವಿಧಾನಗಳಿವೆ. ಆದರೆ ಮನೆಯಲ್ಲಿ, ಗೃಹವಾಸ್ತು ಪದ್ಧತಿಯನ್ನು ಅನುಸರಿಸಿ, ಮೂರುವರೆ ಅಂಗುಲಕ್ಕಿಂತ ಚಿಕ್ಕ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿಯೂ ಇಡಬಹುದಾಗಿದೆ.