ರೂಲ್ಸ್ ಮಾಡಿದ ಬಾಸ್ ಸುಸ್ತಾದ ಘಟನೆ ನಡೆದಿದೆ. ಮಾತನಾಡ್ಬೇಡಿ ಎಂದ ಬಾಸ್ ಕೊನೆಗೂ ಸೋಲೊಪ್ಪಿಕೊಂಡಿದ್ದಾನೆ. ಆಫೀಸ್ ಘಟನೆ ಈಗ ವೈರಲ್ ಆಗಿದೆ.
ಆಫೀಸ್ (Office)ನಲ್ಲಿರುವ ಬಾಸ್ ಒಂದೊಂದೇ ಹೊಸ ರೂಲ್ಸ್ ಜಾರಿಗೆ ತರ್ತಿರ್ತಾರೆ. ಕೆಲವೊಂದು ಉದ್ಯೋಗಿಗಳಿಗೆ ಕಿರಿಕಿರಿ ನೀಡುತ್ತೆ. ಮತ್ತೆ ಕೆಲವೊಂದನ್ನು ಪಾಲಿಸಿ, ಬಾಸ್ಗೆ ಕಿರಿಕಿರಿ ಕೊಡ್ತಾರೆ ಉದ್ಯೋಗಿಗಳು. ಕಚೇರಿಯಲ್ಲಿ ಕೆಲ್ಸ ಮಾಡೋವಾಗ ಉದ್ಯೋಗಿಗಳು ಮಾತನಾಡೋದು ಕಾಮನ್. ಕೆಲ್ಸದ ವಿಷ್ಯದಿಂದ ಹಿಡಿದು ಪರ್ಸನಲ್ ವಿಷ್ಯದವರೆಗೆ ಎಲ್ಲವೂ ಚರ್ಚೆಗೆ ಬರುತ್ತೆ. ಕೆಲವೊಮ್ಮೆ ಕೆಲ್ಸಕ್ಕಿಂತ ಮಾತು ಜಾಸ್ತಿಯಾದಾಗ ಬಾಸ್ ಕೆಂಗಣ್ಣು ಬಿಡ್ತಾರೆ. ಮಾತು ಕಮ್ಮಿ ಆಗ್ಲಿ, ಕೆಲ್ಸ ಜಾಸ್ತಿ ಆಗ್ಲಿ ಅಂತ ಸೂಚನೆ ನೀಡ್ತಿರ್ತಾರೆ. ಈಗ ರೆಡ್ಡಿಟ್ ನಲ್ಲಿ ಬಾಸ್ ರೂಲ್ಸ್ ಒಂದು ವೈರಲ್ ಆಗಿದೆ. ಉದ್ಯೋಗಿಗಳು ಮಾತನಾಡ್ಬಾರದು ಅಂತ ತಾಕೀತು ಮಾಡಿದ್ದರು ಬಾಸ್. ಮಾತನಾಡ್ಬಾರದು ಎನ್ನುವ ಕಾರಣಕ್ಕೆ ಉದ್ಯೋಗಿ ಇ ಮೇಲ್ ಮಾರ್ಗ ಹಿಡಿದಿದ್ದಾನೆ. ಮುಟ್ಟಿದ್ದಕ್ಕೆ ತಟ್ಟಿದ್ದಕ್ಕೆ ಇ ಮೇಲ್ ನಲ್ಲಿ ಮೆಸ್ಸೇಜ್ ಮಾಡಿದ್ದಾನೆ. ಬಂದಾದ್ಮೇಲೆ ಒಂದರಂತೆ ಬರ್ತಿದ್ದ ಇ ಮೇಲ್ ನೋಡಿ ಬೇಸತ್ತ ಬಾಸ್ ಕೊನೆಗೆ ಸೋತಿದ್ದಾರೆ.
r/MaliciousCompliance ಹೆಸರಿನ ರೆಡ್ಡಿಟ್ ಪೇಜ್ ನಲ್ಲಿ @YunaUnfiltered ಹೆಸರಿನ ವ್ಯಕ್ತಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬಾಸ್ ನಮ್ಮನ್ನು ತುಂಬಾ ಮಾತನಾಡುವವರು ಎಂಬ ಪಟ್ಟಿಗೆ ಸೇರಿಸಿದ್ರು. ಡೆಸ್ಕ್ ನಲ್ಲಿ ಮಾತನಾಡ್ಬಾರದು ಎಂಬ ಹೊಸ ನಿಯಮವನ್ನು ಜಾರಿಗೆ ತಂದ್ರು ಅಂತ ಬಳಕೆದಾರ ಕಚೇರಿಯಲ್ಲಾದ ಘಟನೆಯನ್ನು ಬರೆದಿದ್ದಾರೆ. ಕೆಲ್ಸದ ಸಮಯದಲ್ಲಿ ಮಾತನಾಡ್ಬಾರದು, ಎಲ್ಲವೂ ಬರವಣಿಗೆಯಲ್ಲಿ ಇರಬೇಕು ಅಂತ ಸೂಚನೆ ನೀಡಿದ್ದ ಕಾರಣ ನಾನು ಮಾತು ನಿಲ್ಲಿಸಿ ಇ- ಮೇಲ್ ಶುರು ಮಾಡಿದ್ದೆ. ಪ್ರತಿ ಬಾರಿ ನನಗೆ ಪ್ರಶ್ನೆ ಕೇಳುವಾಗ್ಲೂ ನಾನು ಇ ಮೇಲ್ ಮಾಡ್ತಿದ್ದೆ. ನನಗೆ ಯಾವುದೇ ಅನುಮಾನ ಇದ್ರೆ, ಫೈಲ್ ನೇಮ್ ಯಾವ ಹೆಸರಿನಲ್ಲಿ ಕಳುಹಿಸಬೇಕು. ಫೈಲ್ ಎಲ್ಲಿ ಸೇವ್ ಮಾಡ್ಬೇಕು, ಸ್ಟೆಪ್ಲರ್ ಎಲ್ಲಿಟ್ಟಿದ್ದಾರೆ, ಟಾಯ್ಲೆಟ್ ಬ್ರೇಕ್, ಪ್ರಿಂಟರ್ನಲ್ಲಿ ಮತ್ತೆ ಪೇಪರ್ ಖಾಲಿಯಾಗಿದೆ ಎನ್ನುವ ವಿಷ್ಯದವರೆಗೆ ಎಲ್ಲವನ್ನೂ ಅವರು ಮೇಲ್ ಮಾಡಲು ಶುರು ಮಾಡಿದ್ರು.
ಬಾಸ್ ಸೂಚನೆ ನೀಡಿದ ನಂತ್ರ ಮದ್ಯಾಹ್ನ 2 ಗಂಟೆ 30 ನಿಮಿಷದವರೆಗೆ ಬಳಕೆದಾರ, ಬಾಸ್ ಗೆ 43 ಮೇಲ್ ಕಳುಹಿಸಿದ್ದರು. ಎರಡು ಗಂಟೆ 32 ನಿಮಿಷಕ್ಕೆ ಬಾಸ್,ಉದ್ಯೋಗಿ ಬಳಿ ಬಂದಿದ್ದಾರೆ. ಬಾಸ್ ಗೆ ನನ್ನ ತಪ್ಪಿನ ಅರಿವಾಗಿದೆ. ಎಲ್ಲದಕ್ಕೂ ಮೇಲ್ ಬಳಸಿದ್ರೆ ಏನಾಗುತ್ತೆ ಎಂಬುದು ಗೊತ್ತಾಗಿದೆ. ಹಾಗಾಗಿ, ಸರಿ, ಬಹುಷ್ಯ ಈಗ ನಾವು ನಮ್ಮ ಮೈಂಡ್ ಬಳಸ್ಬೇಕು. ಪೇಪರ್ ಕ್ಲಿಪ್ ಸೇರಿದಂತೆ ಟಾಯ್ಲೆಟ್ ಬ್ರೇಕ್ ನಂತಹ ವಿಷ್ಯಕ್ಕೆ ಮೇಲ್ ಮಾಡುವ ಅಗತ್ಯವಿಲ್ಲ ಎಂದ್ರು ಅಂತ ಬಳಕೆದಾರ ಬರೆದಿದ್ದಾರೆ.
ಈ ರೆಡ್ಡಿಟ್ ಪೋಸ್ಟ್ (Reddit post) ವೈರಲ್ ಆಗಿದೆ. 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಅನೇಕರು ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. ನನಗೆ ಅರ್ಜೆಂಟ್ ಬಾತ್ ರೂಮಿಗೆ ಹೋಗ್ಬೇಕಾಗಿದೆ ಅನ್ನೋದನ್ನೂ ಇ ಮೇಲ್ ಮಾಡಿದ್ದು, ಬಳಕೆದಾರರ ಗಮನ ಸೆಳೆದಿದೆ. ಇ ಮೇಲ್ ಐಡಿಯಾ ಬೆಸ್ಟ್ ಇದೆ ಅಂತ ರೆಡ್ಡಿಟ್ ಬಳಕೆದಾರರು ಹೇಳಿದ್ದಾರೆ. ಅಷ್ಟೇ ಅಲ್ಲ ಬಾಸ್ ಗೆ ಕಿರಿಕಿರಿ ನೀಡ್ಬೇಕು ಅಂದ್ರೆ ಅವರು ಹೇಳಿದ ಕೆಲ್ಸವನ್ನು ಚಾಚೂ ತಪ್ಪದೆ ಮಾಡಿ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.