Headlines

ಮಾಸ್ ಪೊಲೀಸ್ ಲುಕ್‌ನಲ್ಲಿ ದಳಪತಿ ವಿಜಯ್ ಧಮಾಕಾ: ಟ್ರೆಂಡಿಂಗ್‌ನಲ್ಲಿ ಜನ ನಾಯಕನ್ ಟೀಸರ್

ಮಾಸ್ ಪೊಲೀಸ್ ಲುಕ್‌ನಲ್ಲಿ ದಳಪತಿ ವಿಜಯ್ ಧಮಾಕಾ: ಟ್ರೆಂಡಿಂಗ್‌ನಲ್ಲಿ ಜನ ನಾಯಕನ್ ಟೀಸರ್

‘ಮೊದಲ ಘರ್ಜನೆ’ ಎಂಬ ಹೆಸರಿನಲ್ಲಿ ಈ ತುಣುಕು ಬಿಡುಗಡೆಯಾಗಿದ್ದು, ವಿಜಯ್ ಮಾಸ್ ಪೊಲೀಸ್ ಅವತಾರದಲ್ಲಿ ರಕ್ತ ಸಿಕ್ತ ಕತ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಕನ್’ ಟೀಸರ್ ಬಿಡುಗಡೆಯಾಗಿ ಕೆಲವು ಗಂಟೆಗಳಲ್ಲಿ 60 ಲಕ್ಷಕ್ಕೂ ಅಧಿಕ ವೀಕ್ಷಣೆ ದಾಖಲಿಸಿದೆ.

‘ಮೊದಲ ಘರ್ಜನೆ’ ಎಂಬ ಹೆಸರಿನಲ್ಲಿ ಈ ತುಣುಕು ಬಿಡುಗಡೆಯಾಗಿದ್ದು, ವಿಜಯ್ ಮಾಸ್ ಪೊಲೀಸ್ ಅವತಾರದಲ್ಲಿ ರಕ್ತಸಿಕ್ತ ಕತ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಈ ಟೀಸರ್‌ನ ಹಿನ್ನೆಲೆಯಲ್ಲಿ ‘ನಿಜವಾದ ನಾಯಕ ಅಧಿಕಾರಕ್ಕಾಗಿ ಅಲ್ಲ, ಜನರಿಗಾಗಿ ಎದ್ದು ಬಂದು ಹೋರಾಡುತ್ತಾನೆ’ ಎಂಬ ಪವರ್‌ಫುಲ್ ಸಾಲುಗಳಿವೆ. ಕೊನೆಯಲ್ಲಿ ವಿಜಯ್ ರಾಜಕೀಯ ಪ್ರವೇಶ ಸಂಕೇತಿಸುವಂತೆ, ‘ಬನ್ನಿ, ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ಸಾಗೋಣ’ ಎಂಬ ಮಾತಿದೆ.

ಈ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಹೆಚ್‌ ವಿನೋದ್‌ ನಿರ್ದೇಶನವಿದೆ. ಮಲಯಾಳಂ ನಟಿ ಮಮಿತಾ ಬೈಜು ನಾಯಕಿ. 2026ರ ಜ.9ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

ತಮಿಳು ಚಿತ್ರರಂಗದಲ್ಲಿ ಬಾಲ್ಯದಲ್ಲಿಯೇ ಕ್ಯಾಮೆರಾ ಮುಂದೆ ಬಂದ ನಟರಲ್ಲಿ ವಿಜಯ್ ಒಬ್ಬರು. ಬಾಲನಟನಾಗಿ ಪ್ರಾರಂಭಿಸಿದ ವಿಜಯ್, ಸ್ಟಾರ್ ಹೀರೋ ಆಗಿ ಬೆಳೆದಿದ್ದಾರೆ. ಚಿತ್ರವೊಂದಕ್ಕೆ 200 ಕೋಟಿ ರೂಪಾಯಿ ಪಡೆಯುತ್ತಿರುವ ವಿಜಯ್, ಬಾಲನಟನಾಗಿ ತಮ್ಮ ಚಿತ್ರ ಜೀವನವನ್ನು ಆರಂಭಿಸಿದರು.

ಕ್ಯಾಮೆರಾ ಮುಂದೆ ವಿಜಯ್ ಮೊದಲ ಬಾರಿಗೆ ಕಾಣಿಸಿಕೊಂಡ ಚಿತ್ರ ‘ವೆಟ್ರಿ’, ಇದು 1984 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರಕ್ಕೆ ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ನಿರ್ದೇಶನ ಮಾಡಿದ್ದರು. ವಿಜಯ್ ಬಾಲನಟನಾಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

Source link

Leave a Reply

Your email address will not be published. Required fields are marked *