Headlines

ಮುಸ್ಲಿಂ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದ ಪುಷ್ಪ; ಬಿಬಿಎಂಪಿ ಕಸದ ಲಾರಿಯಲ್ಲಿ ಅನಾಥ ಶವವಾಗಿ ಪತ್ತೆ! | Bengaluru Hindu Woman Pushpa Found Dead In Bbmp Garbage Truck Muslim Husband Under Suspicion Sat

ಮುಸ್ಲಿಂ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದ ಪುಷ್ಪ; ಬಿಬಿಎಂಪಿ ಕಸದ ಲಾರಿಯಲ್ಲಿ ಅನಾಥ ಶವವಾಗಿ ಪತ್ತೆ! | Bengaluru Hindu Woman Pushpa Found Dead In Bbmp Garbage Truck Muslim Husband Under Suspicion Sat



ಬೆಂಗಳೂರಿನ ಬಿಬಿಎಂಪಿ ಕಸದ ಲಾರಿಯಲ್ಲಿ ಪತ್ತೆಯಾದ ಮಹಿಳೆಯ ಒಳ ಉಡುಪಿಲ್ಲದ ಶವದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇತ್ತೀಚೆಗೆ ಮುಸ್ಲಿಂ ವ್ಯಕ್ತಿಯನ್ನು ಲವ್ ಮ್ಯಾರೇಜ್ ಮಾಡಿಕೊಂಡು ಹುಳಿಮಾವು ಏರಿಯಾದಲ್ಲಿ ವಾಸವಾಗಿದ್ದ ಹಿಂದೂ ಮಹಿಳೆ ಪುಷ್ಪಾ ಎಂದು ಗುರುತಿಸಲಾಗಿದೆ. ಗಂಡನೇ ಕೊಲೆ ಮಾಡಿದ ಶಂಕೆಯಿದೆ.

ಬೆಂಗಳೂರು (ಜೂ. 29): ಸಿಲಿಕಾನ್ ಸಿಟಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿಬಿಎಂಪಿ ಕಸದ ಲಾರಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಅಪರಿಚಿತ ಮಹಿಳೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕಳೆದ ಎರಡ್ಮೂರು ವರ್ಷಗಳ ಹಿಂದೆ ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಹೋಗಿದ್ದ ಹಿಂದೂ ಮಹಿಳೆ ಪುಷ್ಪಾ ಎಂಬುದು ಪತ್ತೆಯಾಗಿದೆ. ಇದೀಗ ಗಂಡನೇ ಕೊಲೆ ಮಾಡಿ ಕಸದ ಲಾರಿಗೆ ಬೀಸಾಕಿ ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ನಗರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಅನಾಮಿಕ ಮಹಿಳೆಯ ಶವ ಕೇಸ್‌ಗೆ ಟ್ವಿಸ್ಟ್‌ಗೆ ಸಿಕ್ಕಿದೆ. ಕೊಲೆಯಾದ ಮಹಿಳೆ ಹುಳಿಮಾವು ನಿವಾಸಿ ಪುಷ್ಪ ಅಲಿಯಾಸ್ ಆಶಾ ಎಂದು ಪೊಲೀಸರು ಗುರುತಿಸಿದ್ದಾರೆ. ಮಹಿಳೆ ಹಿಂದೂ ಧರ್ಮದವಳಾಗಿದ್ದು, ಕೆಲ ವರ್ಷಗಳ ಹಿಂದೆ ಮುಸ್ಲಿಂ ವ್ಯಕ್ತಿಯೊಂದಿಗಿನ ಪ್ರೀತಿಗೆ ಮಣಿದು ಮದುವೆಯಾಗಿದ್ದರು.

ಮದುವೆಯ ನಂತರ ಇಬ್ಬರೂ ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ವಾಸವಿದ್ದು, ದಾಂಪತ್ಯ ಜೀವನ ನಡೆಸುತ್ತಿದ್ದರು. ಆದರೆ, ಇವರ ನಡುವೆ ವಿಚ್ಛೇದನದಂತೆ ಆಗಾಗ ತೊಂದರೆಗಳೂ ನಡೆದಿದ್ದವು ಎಂದು ವರದಿಗಳು ತಿಳಿಸುತ್ತವೆ. ಮಹಿಳೆಯ ಮೃತದೇಹವನ್ನು ಸಿ ಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಚನ್ನಮ್ಮನಕೆರೆಯ ಬಳಿ ಬಿಸಾಡಲಾಗಿದ್ದು, ಶವವನ್ನು ದ್ವಿಚಕ್ರ ವಾಹನದಲ್ಲಿ ತಂದು ಬಿಸಾಡಲಾಗಿದೆಯೆಂದು ಶಂಕೆ ವ್ಯಕ್ತವಾಗಿದೆ. ಶವವು ನಿರ್ವಸ್ತ್ರ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅತ್ಯಾಚಾ*ರ ನಡೆದಿರಬಹುದೆಂಬ ಶಂಕೆಯೂ ಇದ್ದು, ತನಿಖೆ ಈಗ ಈ ಕೌಟುಂಬಿಕ ಕಲಹದಿಂದ ಹೀಗಾಗಿರಬಹುದು ಎಂದು ಅಂದಾಜಿಸಲಾಗಿದೆ.

ಆಕೆಯ ಗಂಡನೇ ಈ ಭೀಕರ ಕೃತ್ಯ ಮಾಡಿರಬಹುದು ಎಂಬ ಅನುಮಾನ ಪೊಲೀಸ್ ಅಧಿಕಾರಿಗಳಿಗೆ ಬಂದಿದೆ. ಹುಳಿಮಾವು ಪ್ರದೇಶದಲ್ಲಿ ಮಹಿಳೆಯನ್ನು ಕೊಲೆ ಮಾಡಿ ಬಳಿಕ ಶವವನ್ನು ಇತರೆ ಪ್ರದೇಶಕ್ಕೆ ತಂದು ಬಿಸಾಡಿರುವ ಸಾಧ್ಯತೆಯೂ ಇರಬಹುದು ಎಂದು ತಿಳಿದುಬಂದಿದೆ. ಪೊಲೀಸರು ಈಗಾಗಲೇ ಶಂಕಿತ ಗಂಡನಿಗಾಗಿ ಬಲೆ ಬೀಸಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ದೂರವಾಣಿ ಲೊಕೆಷನ್ ಟ್ರ್ಯಾಕಿಂಗ್ ಮುಂತಾದ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ನಗರದಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದ್ದು, ಸಾರ್ವಜನಿಕರು ಎಚ್ಚರದಿಂದಿರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *