ಸಿನಿಯರ್ ಇನ್ಸ್‌ಪೆಕ್ಟರ್ ಸ್ವಪ್ನಾಲಿ ಶಿಂಧೆ, ಸಬ್-ಇನ್ಸ್‌ಪೆಕ್ಟರ್ ಸುಶೀಲ್ ದಾಮರೆ ಮತ್ತು ಅವರ ತಂಡವು ಶಂಕಿತನ ಆನ್‌ಲೈನ್ ಪ್ರೊಫೈಲ್‌ನ್ನು ಅಧ್ಯಯನ ಮಾಡಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗೆ ಇಮೇಲ್‌ಗಳನ್ನು ಕಳುಹಿಸಿದರು. ಕಂಪನಿಯು ನೋಂದಾಯಿತ ಇಮೇಲ್ ಐಡಿ ಮತ್ತು ಶಂಕಿತನು ಬಳಸಿದ ಮೊಬೈಲ್ ನಂಬರ್ ಸೇರಿದಂತೆ ಮಹತ್ವದ ಮಾಹಿತಿ ಸುಳಿವು ನೀಡಿತು.
ಪೊಲೀಸರು ಬ್ಯಾಂಕ್ ಖಾತೆಗಳ ವಿಶ್ಲೇಷಣೆ ನಡೆಸಿದಾಗ, ಒಬೆರಾಯ್ ಎಂಬ ಹೆಸರಿನಲ್ಲಿ ಹಣ ಬಂದಿಲ್ಲ ಎಂಬುದು ಬೆಳಕಿಗೆ ಬಂತು. ನಮ್ಮ ತನಿಖೆಯ ಬಳಿಕ ಶಂಕಿತ ಆಸ್ಟ್ರೇಲಿಯಾದ ಪರ್ಥ್‌ನಲ್ಲಿ ಇದ್ದಾರೆ ಮತ್ತು ಅವರ ನಿಜ ಹೆಸರು ಅಭಿಷೇಕ್ ಶುಕ್ಲಾ ಎಂದು ತಿಳಿದುಬಂದಿದೆ. ಅವರು ಮೂಲತಃ ಲಕ್ನೋವಿನವರು. ಈ ಮಾಹಿತಿ ಪಡೆದ ನಂತರ, ನಾವು LOC ಹೊರಡಿಸಿದ್ದು, ಅದು ಬಂಧನಕ್ಕೆ ಕಾರಣವಾಯಿತು ಎಂದು ದೇಶಮುಖ್ ವಿವರಿಸಿದರು. ಶುಕ್ಲಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 29ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.