ರಾಯಚೂರು, ಜೂನ್ 26: ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆಯ ಕೆಲಸ ಶುರುಮಾಡಿದ್ದಾರೆ . ರಾಜ್ಯದೆಲ್ಲೆಡೆ ಸುತ್ತುತ್ತಿರುವ ಅವರು ಇಂದು ಜಿಲ್ಲೆಯ ಸಿಂಧನೂರಲ್ಲಿ (Sindhanur) ಒಂದು ಸಮಾವೇಶ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಅವರಿಗೆ ಪತ್ರಕರ್ತರು, ಬಿಜೆಪಿ ರಾಜ್ಯಾಧ್ಯಕ್ಷರಾಗಿರವ ವಿಜಯೇಂದ್ರ ತಮ್ಮ ತಂದೆಯ ಸಾಧನೆ ಮತ್ತು ಜೆಡಿಎಸ್ ನಾಯಕರಾಗಿರವ ನೀವು, ನಿಮ್ಮ ತಾತ ಹಾಗೂ ತಂದೆಯ ಸಾಧನೆಗಳನ್ನು ಹೇಳಿಕೊಳ್ಳುತ್ತಿರುವಿರಿ, ಜನ ಯಾರನ್ನು ನಂಬಬೇಕು ಅಂತ ಕೇಳಿದಾಗ; ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳು, ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದೇವೆ ಮತ್ತು ಒಳ್ಳೆಯ ಉದ್ದೇಶಕ್ಕಾಗಿ ಕೈ ಜೋಡಿಸಿದ್ದೇವೆ, ಅವರ ಸಂಘಟನೆ ಅವರು ಮಾಡುತ್ತಾರೆ ನಮ್ಮ ಸಂಘಟನೆ ನಾವು ಮಾಡುತ್ತೇವೆ ಎಂದು ನಿಖಿಲ್ ಹೇಳಿದರು.
ಇದನ್ನೂ ಓದಿ: ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್ ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ