ರಶ್ಮಿಕಾ ಮಂದಣ್ಣಗೆ ‘ಅನಿಮಲ್’ ಚಿತ್ರದಲ್ಲಿ ಠಕ್ಕರ್ ಕೊಟ್ಟ ನಟಿ ತೃಪ್ತಿ ದಿಮ್ರಿ, ಪ್ರಭಾಸ್ ಜೊತೆ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿರುವ ಅವರು ಮುಂದೆ ಕನ್ನಡ ಚಿತ್ರರಂಗಕ್ಕೂ ಬರಬಹುದೆಂಬ ಚರ್ಚೆಗಳು ಹುಟ್ಟಿಕೊಂಡಿವೆ.
ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂದು ಖ್ಯಾತಿ ಪಡೆದಿದ್ದರು. ಆದರೆ, ಹಿಂದಿಯ ‘ಅನಿಮಲ್’ ಚಿತ್ರದಲ್ಲಿ ರಶ್ಮಿಕಾ ಜೊತೆಗೆ ನಟಿಸಿದ ತೃಪ್ತಿ ದಿಮ್ರಿ ರಶ್ಮಿಕಾಗೆ ಠಕ್ಕರ್ ಕೊಟ್ಟಿದ್ದರು.

ಇದರ ಬೆನ್ನಲ್ಲಿಯೇ ತೆಲುಗು ಚಿತ್ರರಂಗಕ್ಕೆ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಗೆ ಕಾಲಿಟ್ಟ ತೃಪ್ತಿ ಇದೀಗ ತಮಿಳು ಚಿತ್ರಕ್ಕೂ ಕಾಲಿಟ್ಟಿದ್ದಾಳೆ. ಮುಂದಿನ ದಿನಗಳಲ್ಲಿ ಕನ್ನಡಿಗರ ಮನೆ ಬಾಗಿಲಿಗೂ ತೃಪ್ತಿ ಬರಲಿದ್ದಾಳೆ ಎಂಬ ಚರ್ಚೆ ಶುರುವಾಗಿದೆ.

ಹೌದು, ಅನಿಮಲ್ ಸಿನಿಮಾದಲ್ಲಿ ತೃಪ್ತಿ ದಿಮ್ರಿಗೆ ಖ್ಯಾತಿ ದೊರೆತ ನಂತರ ಅವರು ಮೊದಲ ಬಾರಿಗೆ ತೆಲುಗು ಚಿತ್ರರಂಗದ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದ ನಾಯಕನಾಗಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರೊಂದಿಗೆ ಅಭಿನಯಿಸುತ್ತಿರುವ ತೃಪ್ತಿ, ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದಲ್ಲಿ ಭಾಗವಾಗಿದ್ದಾರೆ . ‘ಸ್ಪಿರಿಟ್’ ಸಿನಿಮಾ ಈಗಾಗಲೇ ಪೋಸ್ಟ್‑ಪ್ರೊಡಕ್ಷನ್ ಹಂತದಲ್ಲಿದ್ದು, ಈ ವರ್ಷದ ಅಂತ್ಯದೊಳಗೆ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

’ಸ್ಪಿರಿಟ್’ ಚಿತ್ರೀಕರಣ ಇನ್ನೂ ಆರಂಭವೇ ಆಗಿಲ್ಲ. ಅಷ್ಟರಲ್ಲಿಯೇ ತೃಪ್ತಿ ಅವರಿಗೆ ತಮಿಳು ಚಲನಚಿತ್ರದಿಂದಲೇ ಪ್ರಮುಖ ಅವಕಾಶ ದೊರಕಿದೆ. ತಮಿಳಿನ ದೊಡ್ಡ ಸ್ಟಾರ್ ನಟನೊಂದಿಗೆ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಗೆ ತೃಪ್ತಿಯನ್ನು ನಾಯಕಿಯಾಗಿ ಬರುವಂತೆ ಕೇಳಲಾಗಿದೆ.

ಈಗಿರುವ ಮಾಹಿತಿ ಪ್ರಕಾರ ತಮಿಳು ನಟ ಸೂರ್ಯನೊಂದಿಗೆ ತೃಪ್ತಿ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಸಿನಿಮಾ ನಿರ್ದೇಶಕರಾಗಲೀ ಅಥವಾ ನಾಯಕಿಯಾಗಲೀ ಖಚಿತಪಡಿಸಿಲ್ಲ.

ಮೂಲತಃ ಬಾಲಿವುಡ್ ನಟಿಯಾಗಿರುವ ತೃಪ್ತಿ ದಿಮ್ರಿ ಅನಿಮಲ್ ಸಿನಿಮಾಗಿಂತ ಮುಂಚೆಯೇ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಆದರೆ, ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣಗೆ ಠಕ್ಕರ್ ಕೊಡುವಂತೆ ನಟಿಸಿದ ಬೆನ್ನಲ್ಲಿಯೇ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿತ್ತು.

ಹೀಗಾಗಿ, ಹಿಂದಿ, ತೆಲುಗು, ತಮಿಳು ಸೇರಿ ವಿವಿಧ ಭಾಷೆಗಳ ಸಿನಿಮಾದಿಂದ ಅವಕಾಶಗಳು ಬರುತ್ತಿವೆ. ಇದೀಗ ತೃಪ್ತಿ ಹಿಂದಿ ಸಿನಿಮಾಗಳ ನಟನೆಯಲ್ಲಿಯೇ ಬ್ಯೂಸಿ ಆಗಿದ್ದಾರೆ.

ತೃಪ್ತಿ ದಿಮ್ರಿ ಈ ವರ್ಷಾಂತ್ಯದಲ್ಲಿ ಸ್ಪಿರಿಟ್ ಸಿನಿಮಾದಲ್ಲಿ ನಟನೆ ಪೂರ್ಣಗೊಂಡರೂ 2026ರ ವೇಳೆಗೆ ತಮಿಳು ಸಿನಿಮಾಗೆ ಕಾಲ್‌ಶೀಟ್ ಕೊಡುವ ಸಾಧ್ಯತೆಯಿದೆ. ಒಂದು ವೇಳೆ ಕರ್ನಾಟಕದ ಸಿನಿಮಾ ನಿರ್ದೇಶಕ ಅಥವಾ ಸಿನಿಮಾ ನಿರ್ಮಾಣ ಸಂಸ್ಥೆಗಳು ತೃಪ್ತಿ ದಿಮ್ರಿಗೆ ಕನ್ನಡದ ಸಿನಿಮಾಗಳಲ್ಲಿ ಚಾನ್ಸ್ ಕೊಡಲು ಆಫರ್ ನೀಡಿದರೆ ಅದಕ್ಕೆ ಒಪ್ಪಿಕೊಳ್ಳಬಹುದು ಎಂಬ ಮಾತುಗಳೂ ಕೂಡ ಕೇಳಿಬರುತ್ತಿವೆ.

ಕನ್ನಡದಿಂದ ಬಾಲಿವುಡ್‌ಗೆ ಹೋದ ರಶ್ಮಿಕಾ ಮಂದಣ್ಣ ಅವರ ತವರು ಚಿತ್ರರಂಗಕ್ಕೆ ತೃಪ್ತಿ ಬಂದಲ್ಲಿ ಭಾರೀ ಖ್ಯಾತಿ ಸಿಗಲಿದೆ ಎಂದು ಹೇಳಲಾಗುತ್ತಿದೆ. ನಟ ಸುದೀಪ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಅಥವಾ ಯಶ್ ಅವರ ಸಿನಿಮಾಗೆ ನಟಿ ತೃಪ್ತಿ ದಿಮ್ರಿಯನ್ನು ಕರೆತರುವ ಅವಕಾಶವನ್ನೂ ತಳ್ಳಿ ಹಾಕುವಂತಿಲ್ಲ.

Source link
ರಶ್ಮಿಕಾ ಮಂದಣ್ಣಗೆ ಠಕ್ಕರ್ ಕೊಟ್ಟ ನಟಿ ತೃಪ್ತಿ ದಿಮ್ರಿ: ಈಗ ಕನ್ನಡಕ್ಕೂ ಬರ್ತಾರಾ?