Headlines

ರೈತರಿಗೆ ಮುಟ್ಟಿದ ನಂದಿನಿ ಹಾಲಿನ ದರ ಏರಿಕೆ ಹಣ: ಚಿಕ್ಕಬಳ್ಳಾಪುರದಲ್ಲಿ ಹರಿದ ಹಾಲಿನಹೊಳೆ

ರೈತರಿಗೆ ಮುಟ್ಟಿದ ನಂದಿನಿ ಹಾಲಿನ ದರ ಏರಿಕೆ ಹಣ: ಚಿಕ್ಕಬಳ್ಳಾಪುರದಲ್ಲಿ ಹರಿದ ಹಾಲಿನಹೊಳೆ


ಚಿಕ್ಕಬಳ್ಳಾಪುರ, (ಜೂನ್ 23): ಕೋಲಾರದ (Kolar) ಕೊಚಿಮುಲ್ ನಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ – ಚಿಮುಲ್ ( Chikkaballapur Milk Union) ಆರಂಭವಾಗಿದ್ದೆ ತಡ, ವಿವಿದ ವಿನೂತನ ಕಾರ್ಯಕ್ರಮಗಳ ಮೂಲಕ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಇನ್ನೂ ಒಂದು ಹೆಚ್ಚೆ ಮುಂದೆ ಹೋಗಿ ಹಾಲಿನ ಉತ್ಪಾದನೆಯಲ್ಲಿ ತನ್ನದೆ ಸಾಧನೆ ಮಾಡಿದೆ. ಒಂದೆಡೆ ಚಿಮುಲ್ ಜನಪ್ರೀಯ ಯೋಜನೆಗಳು ಮತ್ತೊಂದೆಡೆ ರಾಜ್ಯ ಸರ್ಕಾರ ಲೀಟರ್ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡಿ ಅದರ ಹಣವನ್ನು ನೇರವಾಗಿ ಹಾಲು ಉತ್ಪಾಕರ ರೈತರಿಗೆ ನೀಡುತ್ತಿದೆ. ಇದ್ರಿಂದ ಉತ್ತೇಜನಗೊಂಡಿರುವ ಹೈನೋದ್ಯಮಿಗಳು ಹಸುಗಳನ್ನು ಮುತುವರ್ಜಿಯಿಂದ ಸಾಕುತ್ತಿದ್ದಾರೆ. ಹೀಗಾಗಿ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲಿನ ಹೊಳೆ ಹರಿಯುವಂತಾಗಿದೆ.

ಸರ್ಕಾರದ ಪ್ರೋತ್ಸಾಹದಿಂದ ರೈತರು ಹೈನುಗಾರಿಕೆಯತ್ತ

ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 987 ಗ್ರಾಮೀಣ ಡೈರಿಗಳಿದ್ದು, 40 ಸಾವಿರ ಕುಟುಂಬಗಳು ಹೈನುಗಾರಿಕೆಯಲ್ಲಿ ತೋಡಗಿದ್ದು, ಇತ್ತೀಚೆಗೆ ಒಂದು ಲಕ್ಷ ಲೀಟರ್ ಹಾಲು ಹೆಚ್ಚಳವಾಗಿದೆ. ಪ್ರತಿದಿನ 5 ಲಕ್ಷ 50 ಸಾವಿರ ಲೀಟರ್ ಹಾಲು ಚಿಮುಲ್ ಗೆ ಹರಿದು ಬರುತ್ತಿದೆ. ರೈತರು ಹಾಕುವ ಒಂದು ಹಾಲಿಗೆ ಚಿಮುಲ್ 39 ರೂಪಾಯಿ 40 ಪೈಸೆ ಹಣ ನೀಡುತ್ತಿದೆ. ಇದರಿಂದ ರೈತರು ಹೈನುಗಾರಿಕೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.

ಇದನ್ನೂ ಓದಿ: ನಂದಿನಿ ಹಾಲಿನ ಬೆಲೆ ಏರಿಕೆ: ರೈತರಿಗೆ ಸಿಗೋದೆಷ್ಟು, ಲಾಭದಲ್ಲಿ ಸರ್ಕಾರದ ಪಾಲೆಷ್ಟು? ಇಲ್ಲಿದೆ ಮಾಹಿತಿ

ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಜೊತೆಗೆ ರಾಜ್ಯ ಸರ್ಕಾರ ಪ್ರತಿ ಲೀಟರ್ ಗುಣಮಟ್ಟದ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ.ಇದರಿಂದ ಉತ್ಸುಕರಾಗಿರುವ ಹಾಲು ಉತ್ಪಾದಕರಿಗೆ ಭಾರಿ ಬೇಡಿಕೆ ಬಂದಿದ್ದು, ಹಾಲಿನ ಹೊಳೆ ಹರಿಯುವಂತಾಗಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ನಂದಿನ ಹಾಲಿನ ದರ ಏರಿಕೆ ಮಾಡಿತ್ತು. ಈ ಬೆಲೆ ಏರಿಕೆ ಹಣವನ್ನು ಹಾಲು ಉತ್ಪಾದರಿಗೆ ನೀಡುವಾಗಿ ಸರ್ಕಾರ ಹೇಳಿತ್ತು. ಅದರಂತೆ  ಹಾಲು ಉತ್ಪಾದಿಸುವ ರೈತರ ಬೇಡಿಕೆಯನ್ನು ಪೂರೈಸಲು ಮತ್ತು ಗ್ರಾಹಕರ ಹಿತಾಸಕ್ತಿ ಕಾಪಾಡಲು ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದ್ದ, ಸರ್ಕಾರದ 5 ಪ್ರೋತ್ಸಾಹಧನ ನೇರವಾಗಿ ರೈತರ ಖಾತೆಗಳಿಗೆ ಹೋಗುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಇದು ವಿಳಂಬವಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Published On – 8:57 pm, Mon, 23 June 25



Source link

Leave a Reply

Your email address will not be published. Required fields are marked *