ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬೆನ್ನಲ್ಲೇ ಸ್ವಿಗ್ಗಿ-ಜೊಮೆಟೋ ಡೆಲಿವರಿಗೂ ಬ್ರೇಕ್? ಸರ್ಕಾರಿ ಆದೇಶ ತಂದ ಆತಂಕ! | Swiggy Zomato Delivery Also Gets Ban After Rapido Bike Taxi What Is In Govt Order Sat

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬೆನ್ನಲ್ಲೇ ಸ್ವಿಗ್ಗಿ-ಜೊಮೆಟೋ ಡೆಲಿವರಿಗೂ ಬ್ರೇಕ್? ಸರ್ಕಾರಿ ಆದೇಶ ತಂದ ಆತಂಕ! | Swiggy Zomato Delivery Also Gets Ban After Rapido Bike Taxi What Is In Govt Order Sat


ಖಾಸಗಿ ಬೈಕ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದು ಸ್ವಿಗ್ಗಿ, ಝೋಮ್ಯಾಟೋ ಮುಂತಾದ ಕಂಪನಿಗಳ ಗಿಗ್ ಉದ್ಯೋಗಿಗಳಿಗೆ ಆತಂಕ ತಂದಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು (ಜೂ. 25): ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಮೇಲೆ ರಾಜ್ಯದಲ್ಲಿ ನಿಷೇಧ ಉಂಟಾಗುತ್ತಿದ್ದಂತೆ, ಇದೀಗ ಕೇಂದ್ರ ಸಾರಿಗೆ ಸಚಿವಾಲಯದ ಹೊಸ ನಿರ್ಧಾರದಿಂದ ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಹಲವಾರು ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೂ ಶಾಕ್ ಕೊಡುವ ಸಾಧ್ಯತೆಯಿದೆ. ಖಾಸಗಿ ಬೈಕ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದಂತೆ ಕೇಂದ್ರ ಸರ್ಕಾರ ಪ್ರಕಟಿಸಿದ ಹೊಸ ಮಾರ್ಗಸೂಚಿಯು ಗಿಗ್ ಉದ್ಯೋಗಿಗಳಿಗೆ ತೀವ್ರ ಆತಂಕ ಉಂಟುಮಾಡಿದೆ.

ಖಾಸಗಿ ವಾಹನದ ದುರ್ಬಳಕೆ ಮೇಲೆ ತಡೆ:

ಕೇಂದ್ರ ಸಾರಿಗೆ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ನೀಡಿರುವ ಅಧಿಸೂಚನೆಯಲ್ಲಿ, ಖಾಸಗಿ ನೋಂದಾಯಿತ ಬೈಕ್‌ಗಳನ್ನು ವಾಣಿಜ್ಯ ವಿತರಣಾ ಉದ್ದೇಶಗಳಿಗೆ ಬಳಸುವುದು ಸಾರಿಗೆ ನಿಯಮ ಉಲ್ಲಂಘನೆಯಾಗುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದು ರ್ಯಾಪಿಡೋ ಮಾದರಿಯ ಸೇವೆಗಷ್ಟೇ ಸೀಮಿತವಲ್ಲ, ಭವಿಷ್ಯದಲ್ಲಿ ಆಹಾರ ಹಾಗೂ ಇ-ಕಾಮರ್ಸ್ ವಿತರಣಾ ಸೇವೆಗಳಿಗೂ ಅನ್ವಯಿಸಬಹುದಾದ ಘೋಷಣೆಯಾಗಿದೆ.

ಅನೇಕ ಅಡಚಣೆಗಳಿಗೆ ಕಾರಣವಾಗುತ್ತಿರುವ ಡೆಲಿವರಿ ಬೈಕ್ ಬಳಕೆ:

  • ಸಾರ್ವಜನಿಕ ಸುರಕ್ಷತೆ ಅಪಾಯ: ಅತಿ ವೇಗ, ಸಿಗ್ನಲ್‌ ಉಲ್ಲಂಘನೆ, ಟ್ರಾಫಿಕ್‌ನ ವಿರುದ್ಧವಾಗಿ ವಾಹನ ಚಲಾಯಿಸುವಂತಹ ವರದಿಗಳು ಕೇಂದ್ರ ಸರ್ಕಾರವನ್ನು ಚಿಂತನೆಗೆ ದೂಡಿದೆ.
  • ಪಾದಚಾರಿಗಳ ಹಕ್ಕು ಉಲ್ಲಂಘನೆ: ಡೆಲಿವರಿ ಪರ್ಸನ್‌ಗಳು ಪಾದಚಾರಿ ಮಾರ್ಗಗಳ ಬಳಕೆ ಹೆಚ್ಚಿಸಿರುವ ಘಟನೆಗಳು ಸಾರ್ವಜನಿಕರ ಅಸಹನೆಗೆ ಕಾರಣವಾಗಿವೆ.
  • ಸಂಚಾರ ದಟ್ಟಣೆಗೆ ಪೂರಕ: ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರತ ಡೆಲಿವರಿ ವಾಹನಗಳೆ ಪೀಕ್ ಅವರ್‌ಗಳಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿವೆ.
  • ಅನಿಯಂತ್ರಿತ ವಾಹನ ಚಲನೆ: ಅಧಿಕ ವೇಗದ ಚಾಲನೆ, ಲೈಸೆನ್ಸ್ ಇಲ್ಲದ ಚಾಲಕರು ಹಾಗು ಅಪ್ರಮಾಣಿತ ವಾಹನ ಬಳಕೆ ಅಪಾಯಕ್ಕೆ ದಾರಿ ಮಾಡುತ್ತಿದೆ.

ಉದ್ಯೋಗಭದ್ರತೆ ಆತಂಕ:

ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದ ಪ್ಲಾಟ್‌ಫಾರ್ಮ್‌ಗಳಿಗೆ ತನ್ನ ಖಾಸಗಿ ಬೈಕ್‌ಗಳ ಮೂಲಕ ವಿತರಣಾ ಕೆಲಸ ನಿರ್ವಹಿಸುತ್ತಿದ್ದ ಲಕ್ಷಾಂತರ ಗಿಗ್ ಉದ್ಯೋಗಿಗಳಿಗೆ ಇದು ಆರ್ಥಿಕ ಆತಂಕವನ್ನು ತಂದಿಟ್ಟಿದೆ. ಇವರಲ್ಲಿ ಹಲವರು ದಿನಗೂಲಿ ಆದಾಯವನ್ನು ಈ ಸೇವೆಗಳಲ್ಲಿಯೇ ನಿರೀಕ್ಷಿಸುತ್ತಿದ್ದರು. ಈ ಸಂಬಂಧ ಕೇಂದ್ರ ಸಾರಿಗೆ ಸಚಿವಾಲಯ ರಾಜ್ಯ ಸಾರಿಗೆ ಇಲಾಖೆಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು, ರಾಜ್ಯ ಸರ್ಕಾರಗಳು ತಕ್ಷಣವೇ ಕ್ರಮ ಕೈಗೊಂಡರೆ ಇಡೀ ಗಿಗ್ ಎಕೋಸಿಸ್ಟಮ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಖಾಸಗಿ ಬೈಕ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ವಿಚಾರಕ್ಕೆ ಬ್ರೇಕ್ ಹಾಕಿರುವ ಕೇಂದ್ರದ ಈ ನಿರ್ಧಾರ, ಒಂದು ಕಡೆ ಸಾರ್ವಜನಿಕರ ಸುರಕ್ಷತೆಗಾಗಿ ಒಳ್ಳೆಯ ಕ್ರಮವಷ್ಟೇ ಆದರೆ, ಇನ್ನೊಂದು ಕಡೆ ಲಕ್ಷಾಂತರ ಗಿಗ್ ಉದ್ಯೋಗಿಗಳ ಬದುಕಿಗೆ ಚಿಂತೆ ಮೂಡಿಸುವಂತಿದೆ. ಮುಂದಿನ ದಿನಗಳಲ್ಲಿ ಈ ವಿಷಯವು ಮತ್ತಷ್ಟು ಚರ್ಚೆಗೆ ಕಾರಣವಾಗುವುದು ಖಚಿತ.



Source link

Leave a Reply

Your email address will not be published. Required fields are marked *