ರ‍್ಯಾಪ್ ಹೆಸ್ರಲ್ಲಿ ಇದೆಂಥಾ ಹುಚ್ಚಾಟ? ಹಿಂದೂ ದೇವತೆ ತರಹ ವೇಷ ತೊಟ್ಟು ಅಸಭ್ಯ ಭಂಗಿಯಲ್ಲಿ ಸಾಂಗ್! | Hindu Gods In Bad Taste Tommy Genesis Latest Rap Song Ignites Controversy

ರ‍್ಯಾಪ್ ಹೆಸ್ರಲ್ಲಿ ಇದೆಂಥಾ ಹುಚ್ಚಾಟ? ಹಿಂದೂ ದೇವತೆ ತರಹ ವೇಷ ತೊಟ್ಟು ಅಸಭ್ಯ ಭಂಗಿಯಲ್ಲಿ ಸಾಂಗ್! | Hindu Gods In Bad Taste Tommy Genesis Latest Rap Song Ignites Controversy


ಕೆನಡಾ ಮೂಲದ ರಾಪರ್ ಟಾಮಿ ಜೆನಿಸಿಸ್ ಟ್ರೂ ಬ್ಲೂ ಅನ್ನೋ ಹೊಸ ರಾಪ್ ಸಾಂಗ್ ರಿಲೀಸ್ ಮಾಡಿದ್ದಾಳೆ. ಆದ್ರೆ ಈ ರಾಪ್ ಹಲವರ ಕಣ್ಣು ಕೆಂಪಗಾಗಿಸಿದೆ. ಹಿಂದೂ ದೇವತೆ ತರಹ ವೇಷ  ತೊಟ್ಟು ಶಿಲುಬೆ ಹಿಡಿದು ಅಸಹ್ಯ ಅಸಭ್ಯ ಭಂಗಿಗಳಲ್ಲಿ ಕಾಣಿಸಿಕೊಂಡಿರೋ ಟಾಮಿ ಅವತಾರ ನೋಡಿ ಇದೆಂಥಾ ಹುಚ್ಚಾಟ ಅಂತ ಜನ ಕ್ಲಾಸ್ ತೆಗೆದುಕೊಳ್ತಾ ಇದ್ದಾರೆ.

ಯೆಸ್ ರಾಪರ್ ಟಾಮಿ ಜೆನಿಸಿಸ್ ಹೊಸ ರಾಪ್ ಸಾಂಗ್ ‘ಟ್ರೂ ಬ್ಲೂ’ ವಿವಾದದ ಕಿಡಿ ಹೊತ್ತಿಸಿದೆ.  ಇದನ್ನ ನೋಡದವರು ರಾಪ್ ಹೆಸರಲ್ಲಿ ಇದೆಂಥಾ ಹುಚ್ಚಾಟ ಅಂತ ಟಾಮಿಗೆ ಕ್ಲಾಸ್ ತೆಗೆದುಕೊಳ್ತಾ ಇದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಟಾಮಿಗೆ ಛೀ ಥೂ ಅಂತಾ ಉಗೀತಾ ಇದ್ದಾರೆ.

ಟಾಮಿ ಮ್ಯೂಸಿಕ್ ಮಾಡಿರೋ ಈ ರಾಪ್​ಗೆ ಪ್ಯಾರೀಸ್ ಜೊಬೆಲ್ ನಿರ್ದೇಶನ ಮಾಡಿದ್ದಾರೆ. ಖದ್ದು ಟಾಮಿ ಇದ್ರಲ್ಲಿ ವಿಭಿನ್ನ ಭಾವ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾಳೆ. ಬಿಂದಿ .. ಕಿವಿಯೋಲೆ .. ಮೂಗುತಿ .. ಚಿನ್ನಾಭರಣ ಹಾಕಿಕೊಂಡು ಹಿಂದೂ ದೇವತೆಯಂತೆ ಮೇಕಪ್ ಮಾಡಿಕೊಂಡಿರುವ ಟಾಮಿ ಮೈತುಂಬಾ ನೀಲಿ ಬಣ್ಣ ಬಳಿದುಕೊಂಡಿದ್ದಾರೆ. ಬಿಕಿನಿಯನ್ನ ಧರಿಸಿ ಕೈಯಲ್ಲಿ ಕ್ರಿಶ್ಚಿಯನ್ ಧರ್ಮದ ಶಿಲುಬೆಯನ್ನು ಹಿಡಿದು ಅಸಹ್ಯ, ಅಶ್ಲೀಲವಾದ ಭಂಗಿಗಳಲ್ಲಿ ಫೋಸ್ ನೀಡಿದ್ದಾರೆ. ಶಿಲುಬೆಯನ್ನ ನೆಕ್ಕಿದ್ದಾರೆ.

ಯೆಸ್ ಟಾಮಿ ಜೆನಿಸಿಸ್ ಗೆ ವಿವಾಗಳು ಹೊಸತೇನಲ್ಲ. ಜೆನಿಸಿಸ್ ಯಾಸ್ಮಿನ್ ಮೋಹನ್ ರಾಜ್ ಅಲಿಯಾಸ್ ಟಾಮಿ ಜೆನಿಸಿಸ್ ಮೂಲತಃ ಕೆನಡಾ ಮೂಲದ ರಾಪರ್. ಈಕೆಯ ತಂದೆ ತಮಿಳುನಾಡು ಮೂಲದವರು ತಾಯಿ ಸ್ವಿಡನ್ ಮೂಲದವರು. ಟಾಮಿ ಹುಟ್ಟಿ ಬೆಳೆದಿದ್ದೆಲ್ಲಾ ಕೆನಡಾದಲ್ಲಿ. ಹಲವಾರು ರಾಪ್ ಸಾಂಗ್​ಗಳನ್ನ ಮಾಡಿರೋ ಟಾಮಿ ಹಲವಾರು ಬಾರಿ ವಿವಾದ ಎಬ್ಬಿಸಿದ್ದಾರೆ.

ಅಭಿವ್ಯಕ್ತಿ ಸ್ವಾಂತತ್ರ್ಯ, ಧಾರ್ಮಿಕ ಸ್ವಾತಂತ್ರದ ಹೆಸರಲ್ಲಿ ಟಾಮಿ ಮಾಡೋದೆಲ್ಲಾ ಅಶ್ಲೀಲ ಭಾವ ಭಂಗಿಯ ಹಾಡುಗಳನ್ನೇ. ಬೈ ಸೆಕ್ಷುವಲ್ ಆಗಿರೋ ಟಾಮಿ ಹಲವು ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ರೆ ಈ ಸಾರಿ ಅಭಿವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದ್ದಾರೆ.

ಟಾಮಿಯ ಟ್ರೂ ಬ್ಲೂ ಸಾಂಗ್ ವಿರುದ್ದ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗ್ತಾ ಇದ್ದು ಈಕೆ ವಿರುದ್ದ  ಕ್ರಮ ಕೈಗೊಳ್ಳಬೇಕು ಅನ್ನೋ ಒತ್ತಡ ಹೆಚ್ಚಾಗ್ತಾ ಇದೆ. ಪ್ರಚಾರ ಪಡೆಯಲಿಕ್ಕೆ ಏನ್ ಬೇಕಾದ್ರೂ ಮಾಡೋದಕ್ಕೆ ಇಂಥದವರನ್ನ ನಿರ್ಲಕ್ಷ ಮಾಡೋದೇ ಒಳ್ಳೆ ಶಿಕ್ಷೆ ಅಂತಿದ್ದಾರೆ ನೆಟ್ಟಿಗರು..!



Source link

Leave a Reply

Your email address will not be published. Required fields are marked *