Headlines

ಲೋಕಾಯುಕ್ತ ದಾಳಿ: ಅಧಿಕಾರಿಗಳ ಮನೆಗಳಲ್ಲಿ ಕೆಜಿಗಟ್ಟಲೆ ಚಿನ್ನ-ಬೆಳ್ಳಿ, ನೋಟಿನ ಕಂತೆಗಳು ಪತ್ತೆ!

ಲೋಕಾಯುಕ್ತ ದಾಳಿ: ಅಧಿಕಾರಿಗಳ ಮನೆಗಳಲ್ಲಿ ಕೆಜಿಗಟ್ಟಲೆ ಚಿನ್ನ-ಬೆಳ್ಳಿ, ನೋಟಿನ ಕಂತೆಗಳು ಪತ್ತೆ!

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅಧಿಕಾರಿಗಳ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ದಾಖಲೆ ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶದಿಂದ ಈ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.

ಬೆಳಗಾವಿಯ ಕೆಎನ್‌ಎನ್ಎಲ್ ಮುಖ್ಯ ಇಂಜಿನಿಯರ್ ಅಶೋಕ ವಸಂದ್ ಮನೆ ಮೇಲೆ ದಾಳಿ

ಸ್ಥಳ: ರಾಮತೀರ್ಥ ನಗರ, ಬೆಳಗಾವಿ ಮತ್ತು ಧಾರವಾಡ ಕಚೇರಿ

ಹುದ್ದೆ: ಧಾರವಾಡದ ಕೆಎನ್‌ಎನ್ಎಲ್ ಮುಖ್ಯ ಇಂಜಿನಿಯರ್

ಪತ್ತೆ ಹಚ್ಚಿದ ಆಸ್ತಿ:

ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ (ನೆಕ್ಲೆಸ್, ಪಾಟ್ಲಿ, ಬಿಲ್ವರ್ ಇತ್ಯಾದಿ)

2 ಕೆಜಿ ಬೆಳ್ಳಿ ಪಾತ್ರೆಗಳು, ಆರತಿ ತಟ್ಟೆ, ದೀಪಗಳು

ಅಕ್ರಮ ಆಸ್ತಿಯ ದಾಖಲೆಗಳು

ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆ

ದಾಳಿ ಸ್ಥಳಗಳು: ಬೆಳಗಾವಿಯ ನಿವಾಸ ಹಾಗೂ ಧಾರವಾಡದ ಕಚೇರಿ

ಲೋಕಾಯುಕ್ತ ಅಧಿಕಾರಿಗಳಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದ್ದು, ಸಂಪೂರ್ಣ ಆಸ್ತಿ ವಿವರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗದಗ: ಸಿಪಿಐ ಡಿಬಿ ಪಾಟೀಲ ಮನೆ ಮೇಲೆ ಹಣದ ದಾಳಿ

ಸ್ಥಳ: ಶಿವಾನಂದ ನಗರ, ಗದಗ

ಹುದ್ದೆ: ನಗರ ಪೊಲೀಸ್ ಠಾಣೆಯ ಸಿಪಿಐ (CPI) ಡಿ.ಬಿ. ಪಾಟೀಲ

ಪತ್ತೆ ಆದ ಹಣ:3 ಲಕ್ಷಕ್ಕೂ ಹೆಚ್ಚು ನಗದು (₹500, ₹200 ಮುಖಬೆಲೆಯ ನೋಟುಗಳಲ್ಲಿ)

ಚಿಲ್ಲರೆ ಹಣ, ಬೆಳ್ಳಿ ಕಾಯಿನ್

ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳಲ್ಲೂ ದಾಳಿ

ಸಿಪಿಐ ಪಾಟೀಲ ಅವರ ಬಾಡಿಗೆ ಮನೆಯಲ್ಲಿ ನಗದು ಸಿಕ್ಕಿದ್ದು, ಭ್ರಷ್ಟಾಚಾರದ ಆರೋಪದ ಮೇಲೆ ತನಿಖೆ ಮುಂದುವರೆದಿದೆ.

ಶಿವಮೊಗ್ಗ: ಡಾ. ಎಸ್. ಪ್ರದೀಪ್ ಮನೆ ಮೇಲೆ ದಾಳಿ

ಸ್ಥಳ: ಪ್ರಿಯದರ್ಶಿನಿ ಲೇಔಟ್, ಶಿಕಾರಿಪುರ – ಭದ್ರಾಪುರ, ಹೊಸನಗರ

ದಾಳಿಗೆ ಒಳಗಾದವರು: ಡಾ. ಎಸ್‌. ಪ್ರದೀಪ್, ಸಾವಯುವ ಕೃಷಿ ಸಹ ಸಂಶೋಧನಾ ನಿರ್ದೇಶಕರು

ದಾಳಿಗೆ ನೇತೃತ್ವ: ಲೋಕಾಯುಕ್ತ ಎಸ್ಪಿ ಎಂ.ಹೆಚ್. ಮಂಜುನಾಥ್ ಚೌಧರಿ

ಪತ್ತೆ ಹಚ್ಚಿದ ಪ್ರಮುಖ ವಸ್ತುಗಳು:

ಚಿನ್ನದ ಮತ್ತು ಬೆಳ್ಳಿಯ ಆಭರಣಗಳು

ಬೆಲೆಬಾಳುವ ವಾಚ್‌ಗಳು

ಆಸ್ತಿ ದಾಖಲಾತಿಗಳು

ಹಣಕಾಸು ದಾಖಲೆಗಳು

ಶಿವಮೊಗ್ಗದ ಡಾ. ಎಸ್. ಪ್ರದೀಪ್ ಮನೆ ಮೇಲೆ ದಾಳಿ ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಭ್ರಷ್ಟಾಚಾರದ ಅನುಮಾನದ ಮೇಲೆ ಡಾ. ಪ್ರದೀಪ್ ಅವರ ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ಚಿಕ್ಕಮಗಳೂರು ನಗರಸಭೆ ಲೆಕ್ಕಾಧಿಕಾರಿ ಮನೆ ಮೇಲೆ ದಾಳಿ:

ಚಿಕ್ಕಮಗಳೂರಿನ ನಗರಸಭೆ ಲೆಕ್ಕಾಧಿಕಾರಿ ಲತಾ ಮಣಿ ನಿವಾಸದ ಮೇಲೆ ದಾಳಿ ಲೋಕಾಯುಕ್ತ ದಾಳಿ. ಎರಡು ತಂಡಗಳ ಲತಾ ಮಣಿ ನಿವಾಸದಲ್ಲಿ ದಾಖಲೆ ಪರಿಶೀಲನೆ. ನಗರದ ಜಯನಗರ ಬಡಾವಣೆಯಲ್ಲಿ ಇರುವ ಲತಾ ಮಣಿ ನಿವಾಸ. ಚಿಕ್ಕಮಗಳೂರು ನಗರದ ಜಯನಗರ ಬಡಾವಣೆಯ ಮನೆಯಿಂದ ಕಚೇರಿಗೆ ಬಂದ ಅಧಿಕಾರಿಗಳ ತಂಡ. ಬೆಳಗ್ಗೆ ನಗರಸಭೆ ಲೆಕ್ಕಾಧಿಕಾರಿ ಲತಾಮಣಿ ಮನೆ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತರು. ನಗರಸಭೆಗೆ ಬಂದು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ನಗರಸಭೆ ಆಯುಕ್ತರನ್ನ ಕರೆಸಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ.

Source link

Leave a Reply

Your email address will not be published. Required fields are marked *