ವಿಪಕ್ಷ ನಾಯಕ ಆರ್. ಅಶೋಕ್
ಮಂಡ್ಯ, ಜೂನ್ 22: ವಸತಿ ಯೋಜನೆಯಲ್ಲಿ 2137.44 ಕೋಟಿ ಭ್ರಷ್ಟಾಚಾರ ನಡೆದಿದೆ. ಬಿಜೆಪಿ ಆಪಾದನೆ ಸುಳ್ಳಾದರೆ ಸಿಬಿಐಗೆ ವಹಿಸಿ ಸತ್ಯಾಂಶ ಬಯಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಡವರ ಮನೆಗೆ ಕನ್ನ ಹಾಕಿದ ಕಾಂಗ್ರೆಸ್ನವರು ಉತ್ತರ ಕೊಡಬೇಕು. ಸಿಎಂ ಸಿದ್ದರಾಮಯ್ಯ (Siddaramaiah) ಮೂಗನಾಗಬೇಡ, ಬಾಯ್ಬಿಡಪ್ಪ. ಬಡವರ ಹಣವನ್ನು ತಿಂದ ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ಮಾಡಿದರು.
ವೋಟ್ಗಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಕಾಂಗ್ರೆಸ್ ರಾಜ್ಯದಲ್ಲಿ ವಸತಿ ನೀಡುತ್ತಿದೆ. ನಾವು ಹೇಳುವುದು ಸುಳ್ಳಾದರೆ ತನಿಖೆಗೆ ಆದೇಶಿಸಲಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಸಿದ್ಧಾಂತದ ಸರ್ಕಾರ. ಈ ಸರ್ಕಾರ ತನಿಖೆ ನಡೆಸುವ ನಂಬಿಕೆ ನಮಗಿಲ್ಲ. ಮಂಡ್ಯದಲ್ಲೂ ಅಕ್ರಮ ಬಾಂಗ್ಲಾದೇಶದ ವಲಸಿಗರು ಸೇರಿಕೊಂಡಿದ್ದಾರೆ. ಅವರಿಗೆಲ್ಲಾ ವಸತಿ ಮಾಡಿಕೊಟ್ಟು ವೋಟ್ಬ್ಯಾಂಕ್ ಮಾಡಿಕೊಳ್ಳುತ್ತಿದ್ದಾರೆ. ಅಕ್ರಮ ವಲಸಿಗರು ಬಾಂಗ್ಲಾದೇಶ ಗಡಿ ಮೂಲಕ ಪಶ್ಚಿಮ ಬಂಗಾಳ ತಲುಪಿ ಅಲ್ಲಿಂದ ಬರುತ್ತಿದ್ದಾರೆ ಎಂದು ಹೇಳಿದರು.
ಮಂಡ್ಯದಲ್ಲಿ ಆಸ್ಪತ್ರೆ ಜಾಗದಲ್ಲಿರುವ ತಮಿಳರ ಮನೆಗಳಿಗೆ ನುಗ್ಗಿದ್ದಾರೆ ಮುಸ್ಲಿಮರು ನುಗ್ಗಿದ್ದಾರೆ. ಅವರೆಲ್ಲಾ ಹೇಗೆ ಸೇರಿಕೊಂಡ್ರು, ಅಧಿಕಾರಿಗಳೇನು ಕತ್ತೆ ಕಾಯ್ತಿದ್ರಾ? ಶಾಸಕರ ಕುಮ್ಮಕ್ಕಿನಿಂದ ಸ್ಲಂಬೋರ್ಡ್ ವಸತಿ ಸಂಕೀರ್ಣಕ್ಕೆ ನುಗ್ಗಿದ್ದಾರೆ. ಮುಸ್ಲಿಮರ ಓಲೈಕೆ ಮಾಡಬೇಡಿ, ಫಲಾನುಭವಿಗಳಿಗೆ ಮನೆ ಕಲ್ಪಿಸಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ
ಇದನ್ನೂ ನೋಡಿ: ಮನೆ ಹಂಚಿಕೆಗೆ ಹಣ: ಆಡಿಯೋ ರಿಲೀಸ್ ಮಾಡಿದ್ದ ಬಿಆರ್ ಪಾಟೀಲ್ ಕ್ಷೇತ್ರದ ವಿಡಿಯೋ ವೈರಲ್
ಕೆಆರ್ಎಸ್ನಲ್ಲಿ ರಾಜ್ಯ ಸರ್ಕಾರದಿಂದ ಕಾವೇರಿ ಆರತಿ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಕಾವೇರಿ ಆರತಿ ಹೆಸರಲ್ಲಿ ಇವರು ಕೀರ್ತಿ ಪಡೆಯೋಕೆ ಹೋಗುತ್ತಿದ್ದಾರೆ. ಸರ್ಕಾರ ಅಲ್ಲಿನ ಜನರ ಜೀವನ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಅಲ್ಲಿ ಆರತಿಗೆ ನೂರು ಕೋಟಿ ಖರ್ಚು ಮಾಡ್ತಿರೋದು ಯಾಕೆ? ಇದರಲ್ಲಿ ಕಾಂಗ್ರೆಸ್ ಖರ್ಚು ಮಾಡುವುದು 30 ರಿಂದ 40 ಕೋಟಿ ರೂ. ಅಷ್ಟೇ. ಇನ್ನುಳಿದ ಹಣ ತಮ್ಮ ಜೇಬಿಗೆ ಹಾಕಿಕೊಳ್ಳುತ್ತಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಜೊತೆಗೆ ಸದನದೊಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಿದ್ದೇವೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:31 pm, Sun, 22 June 25