ಮೊಹಮ್ಮದ್ ಇಂಚಗೇರಿ, ಪಿಂಟೂ ರಾಠೋಡ್
ವಿಜಯಪುರ, ಜೂನ್ 22: ವಸತಿ ಯೋಜನೆಯಲ್ಲಿ ಬಡವರಿಗೆ ಮನೆಗಳನ್ನು ನೀಡಲು ಹಣ ಪಡದು ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಬಿ ಆರ್ ಪಾಟೀಲ್ (BR Patil) ಮಾಡಿರುವ ಆರೋಪ ಸತ್ಯವೆಂಬುದಕ್ಕೆ ವಿಜಯಪುರ (Vijayapura) ಜಿಲ್ಲೆಯಲ್ಲಿ ವಸತಿ ಯೋಜನೆಗಾಗಿ ಹಣ ಪಡೆಯುತ್ತಿರುವುದು ಸಾಕ್ಷಿಯಾಗಿದೆ. ಸಿಂದಗಿ ತಾಲೂಕಿನ ರಾಂಪೂರ ಗ್ರಾಮ ಪಂಚಾಯತಿಯಲ್ಲಿ ಬಡವರಿಗೆ ನೀಡುವ ಮನೆಗಳಿಗೆ ತಲಾ 40 ಸಾವಿರ ರೂಪಾಯಿ ಪಡೆಯಲಾಗುತ್ತಿದೆ ಎಂಬುವುದೇ ದುರಂತವಾಗಿದೆ.
ರಾಂಪೂರ ಪಿ ಎ ಗ್ರಾಮ ಪಂಚಾಯತಿ ವ್ಯಾಪ್ತಿಗೆ ರಾಂಪುರ ಪಿ ಎ, ಗಣಿಹಾರ, ಗಣಿಹಾರ ತಾಂಡಾ, ರಾಂಪೂರ ತಾಂಡಾ, ಬೆನಕವಟಗಿ ಹಾಗೂ ಬೆನಕವಟಗಿ ತಾಂಡಾ, ಬಬಲೇಶ್ವರ ಗ್ರಾಮಗಳು ಬರುತ್ತವೆ. ಈ ನಿಟ್ಟಿನಲ್ಲಿ ರಾಂಪುರ ಪಿ ಎ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳ ಹಾಗೂ ತಾಂಡಾಗಳ ಜನರಿಗೆ ಡಾ. ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ ಅಡಿಯಲ್ಲಿ ಮನೆಗಳನ್ನು ನೀಡಲು ತಲಾ 40 ಸಾವಿರ ರೂಪಾಯಿ ಪಡೆಯಲಾಗುತ್ತಿದೆ.
ರಾಂಪೂರ ಪಿ ಎ ಗ್ರಾಮ ಪಂಚಾಯತಿಯ ಸದಸ್ಯರಾದ ಮೊಹಮ್ಮದ್ ಇಂಚಗೇರಿ ಹಾಗೂ ಪಿಂಟೂ ರಾಠೋಡ್ ವಾಟ್ಸ್ಗ್ರೂಪ್ನಲ್ಲಿ ಹಾಕಿರುವ ವೈಸ್ ಮೆಸೇಜ್ಗಳು ಸಾಕ್ಷಿಯಾಗಿವೆ. ರಾಂಪೂರ್ ಗ್ರಾಮದ ಮಹ್ಮಮದ್ ಇಂಚಗೇರಿ ಹಾಗೂ ಬೆನಕವಟಗಿ ತಾಂಡಾದ ಪಿಂಟೂ ರಾಠೊಡ್ ಡಾ. ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆಯ ಮನೆಗಳ ಹಂಚಿಕೆ ವಿಚಾರದಲ್ಲಿ ವೈಸ್ ಮೆಸೇಜ್ಗಳನ್ನು ರಾಂಪುರ ಪಿ ಎ ಗ್ರಾಮ ಪಂಚಾಯತಿ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ವಸತಿ ಮನೆಗಳನ್ನು ನೀಡುವ ವಿಚಾರದಲ್ಲಿ 40 ಸಾವಿರ ರೂಪಾಯಿ ತೆಗೆದುಕೊಂಡು ನೀಡುತ್ತಿರುವ ಬಗ್ಗೆ ಮಾತನಾಡಿರುವ ವೈಸ್ ಮೆಸೇಜ್ಗಳು ಇದೀಗ ವೈರಲ್ ಆಗಿವೆ.
ಈ ವಿಚಾರದಲ್ಲಿ ಆಡಳಿತಾರೂಢ ಪಕ್ಷದ ವಿರುದ್ಧ ವಿರೋಧ ಪಕ್ಷ ಬಿಜೆಪಿಯವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ವಸತಿ ಯೋಜನೆಗಳ ಮನೆಗಳನ್ನು ನೀಡಲು ಬಡವರಿಂದ ನಿರ್ಗತಿಕರಿಂದ ಹಣ ಪಡೆಯುತ್ತಿರುವುದಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ ಪಿ ಎ ಗ್ರಾಮದಲ್ಲಿ ನಡೆದಿರುವ ಅಕ್ರಮವೇ ಸಾಕ್ಷಿಯೆಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ
ಆಡಿಯೋದಲ್ಲಿ ಏನಿದೆ
ಪಿಂಟೂ ರಾಠೋಡ್: ರಾಂಪೂರ ಹಾಗೂ ಗಣಿಹಾರ ಸದಸ್ಯರು ನಮ್ಮ ತಾಂಡಾದಲ್ಲಿ ವಸತಿ ಯೋಜನೆಯನ್ನು ಹಾಕಬಾರದು. ನಮ್ಮ ತಾಂಡಾದವರ ದಾಖಲೆಗಳನ್ನು ನೀವು ತೆಗೆದುಕೊಂಡು ವಸತಿ ಯೋಜನೆಗೆ ಹಾಕಬೇಡಿ. ಹಾಕುವುದಾದರೆ ನಮ್ಮನ್ನು ಕೇಳಿ ಹಾಕಬೇಕು. ನಮಗೆ ಗೊತ್ತಿಲ್ಲದೇ ಹಾಕಿದ್ದರೆ ಅದನ್ನು ತೆಗೆದುಯುತ್ತೇವೆ.
ಮೊಹಮ್ಮದ್ ಇಂಚಗೇರಿ: ಯಾರ ಬೇಕಾದವರಿಗೆ ಕೊಡಲು, ನಿನಗ್ಯಾಕೆ ಬೇಕು ಅದೆಲ್ಲ. ನಿನ್ನ ಮನಸ್ಸಿಗೆ ಬಂದಿದ್ದನ್ನು ಹಾಕುತ್ತಿ ನೀನು.
ಪಿಂಟೂ ರಾಠೋಡ್: ವಸತಿ ಯೋಜನೆಗೆ ಯಾರದ್ದಾರೂ ಹೆಸರು ಹಾಕುವುದಿದ್ದರೆ ನನಗೆ ಹೇಳಬೇಕು, ನಾನು ಕೊಡುತ್ತೇನೆ. ಮನಸ್ಸಿಗೆ ಬಂದದಂತೆ ಹಾಕುವುದಿದ್ದರೆ ನಮ್ಮೂರಿನಂದು ಹಾಕು, ನಮ್ಮೂರಾಗ ಹಾಕಲ್ಲ. ಈ ಕಾರಣಕ್ಕಾಗಿ ಲೇಟಾಗಿದೆ. ನಾವು ಹಾಕುವುದು ಬಿಟ್ಟು ನಿಮಗೆ ಕೊಟ್ಟು ನಾವ್ ಎಲ್ಲಿಗೆ ಹೋಗುವುದು. ಮೊದಲಿಗೂ ಹೇಳಿದ್ದೇನೆ. ಬೆನಕವಟಿ ತಾಂಡಾದವರಿಗೆ ಹಾಕಿದವರಿಗೆ ಮನೆ ಕೊಡಲ್ಲ. ಎಲ್ಲಾ ನನ್ನ ಕೈಯಲ್ಲಿ ಕೊಟ್ಟರೆ ಮನೆ ಕೊಡುತ್ತೇವೆ ಇಲ್ಲವಾದರೆ ಇಲ್ಲ
ಮೊಹಮ್ಮದ್ ಇಂಚಗೇರಿ: ನಿನಗೆ ಮಾತನಾಡು ಎಂದರೆ ಒಂದು ಮನೆಗೆ 40 ಸಾವಿರ ಕೊಡು. ನಿಮ್ಮ ತಾಂಡಾದವವರೇ 40 ಸಾವಿರಕ್ಕೊಂದು ಹೇಳುತ್ತಿದ್ದಾರೆ. ಬೇಗನೇ ಹೇಳು
ಪಿಂಟೂ ರಾಠೋಡ್: ನಿನಗೆ 40 ಸಾವಿರ ಸಿಗಲ್ಲ, ಮನೆನೂ ಸಿಗಲ್ಲ, ಯಾರಿಗೆ ಹಾಕುತ್ತೀಯಾ ಹಾಕು
ಮೊಹಮ್ಮದ್ ಇಂಚಗೇರಿ: ನಿನಗೆ ಹಣ ಕೊಡು 40 ಸಾವಿರ ಕೊಡು
ಇದನ್ನೂ ಓದಿ: 17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಕೈ ಶಾಸಕ ಪಾಟೀಲ್
ಹೀಗೆ, “ರಾಂಪುರ ಪಿ ಎ ಗ್ರಾಮ ಪಂಚಾಯತಿಯ ಇಬ್ಬರು ಸದಸ್ಯರಾದ ಪಿಂಟೂ ರಾಠೋಡ್ ಹಾಗೂ ಮೊಹಮ್ಮದ್ ಇಂಚಗೇರಿ ನಡುವಿನ ವಾಟ್ಸ್ ಆ್ಯಪ್ ವಾಯ್ಸ್ ಮೇಸೆಜ್ಗಳು ಈಗ ಬಹಿರಂಗವಾಗಿವೆ. ಇದೇ ವೈಸ್ ಮೆಸೇಜ್ಗಳು ವಸತಿ ಯೋಜನೆಯಲ್ಲಿ ಬಡವರಿಗೆ ನಿರ್ಗತಿಕರಿಗೆ ಸೂರಿಲ್ಲದವರಿಗೆ ಮನೆ ನೀಡಲು ಗ್ರಾಮ ಪಂಚಾಯತಿ ಮಟ್ಟದಲ್ಲೇ ಹಣ ಪೀಕಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಲು ಸದಸ್ಯರು ಒಬ್ಬೊಬ್ಬರಿಂದ 40 ಸಾವಿರ ಪಡೆಯುತ್ತಿರೋದು ಸಾಬೀತಾದಂತಾಗಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರೋ ಸರ್ಕಾರ ಎಂಬುದಕ್ಕೆ ಉದಾಹರಣೆ. ಇವರಿಗೆ ಮಾನ ಮರ್ಯಾದೆಯಿದ್ದರೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರ ಬರಬೇಕು. ಸಿಂದಗಿ ತಾಲೂಕಿನ ರಾಂಪುರ ಪಿಎ ಗ್ರಾಮದಲ್ಲಿ ನಡೆದಿರೋ ಭ್ರಷ್ಟಾಚಾರ ಕುರಿತ ತನಿಖೆಯಾಗಬೇಕು. ತನಿಖೆಗೆ ಸಿಎಂ ಹಾಗೂ ವಸತಿ ಸಚಿವರು ಸಹಕಾರ ನೀಡಬೇಕೆಂದು” ಬಿಜೆಪಿ ಮುಖಂಡರು ಒತ್ತಾಯ ಮಾಡಿದ್ದಾರೆ.
ರಾಂಪುರ ಪಿ ಎ ಗ್ರಾಮ ಪಂಚಾಯತಿಯ ಸದಸ್ಯರು ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ನಡೆಸಿರುವ ವೈಸ್ ಮೆಸೆಜ್ಗಳು ಹರಿದಾಡುತ್ತಿವೆ. ಈ ನಿಟ್ಟಿನಲ್ಲಿ ತನಿಖೆಯಾಬೇಕಿದೆ. ಗ್ರಾಮ ಪಂಚಾಯತಿಗೆ ಡಾ. ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ ಅಡಿಯಲ್ಲಿ ಎಷ್ಟು ವಸತಿ ಯೋಜನೆ ಮನೆಗಳು ಮಂಜೂರಾಗಿವೆ? ಯಾವಾಗ ಮಂಜೂರಾಗಿದ್ದವು? ಯಾವ ಯಾವ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ? ಫಲಾನುಭವಿಗಳಿಂದ ಎಷ್ಟು ಹಣ ಪಡೆಯಲಾಗಿದೆ? ಎಂಬುದರ ಕುರಿತು ತನಿಖೆಯಾಗಬೇಕು. ತಪ್ಪಿತಸ್ಥ ಗ್ರಾಪಂ ಸದಸ್ಯರ ಮೇಲೆ ಕಾನೂನು ಕ್ರಮವಾಗಬೇಕು. ಅವರ ಸದಸ್ಯತ್ವ ರದ್ದು ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು ಆಧಿಕಾರಿಗಳು ಗಮನ ಹರಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ