ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ 45 ಕೆಜಿ 580 ಗ್ರಾಂ ಗಾಂಜ ಮಾದಕ ವಸ್ತುಗಳ ನಾಶ.

ಮಾದಕ ವಸ್ತುಗಳನ್ನು ಡ್ರಗ್ ಡಿಸ್ಪೋಸಲ್ ಕಮಿಟಿಯ ವತಿಯಿಂದ ನಿಯಮಾನುಸಾರ ನಾಶಪಡಿಸಲಾಗಿರುತ್ತದೆ.

ತುಮಕೂರು ಜಿಲ್ಲೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ವಿವಿಧ ಪ್ರಕರಣಗಳಲ್ಲಿ 45 ಕೆಜಿ 580 ಗ್ರಾಂ ಗಾಂಜ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಮಾದಕ ವಸ್ತುಗಳನ್ನು ಜಿಲ್ಲಾ ಮಟ್ಟದ ಡ್ರಗ್ ಡಿಸ್ಪೋಸಲ್ ಕಮಿಟಿ ವತಿಯಿಂದ ನಾಶಪಡಿಸಲು ಸಂಬಂಧಪಟ್ಟ ನ್ಯಾಯಾಲಯಗಳಿಂದ ಅನುಮತಿ ಪಡೆದು ದಿನಾಂಕ:15-07-2025 ರಂದು ತುಮಕೂರು ಜಿಲ್ಲೆಯ ಕೋರ ಪೊಲೀಸ್ ಠಾಣಾ ಸರಹದ್ದಿನ “ರಿ ಸಸ್ಟೇನೆಬಿಲಿಟಿ ಇಂಡಿಸ್ಟ್ರೀಯಲ್ ಸಲುಷನ್ಸ್ ಪ್ರವೇಟ್ ಲಿಮಿಟೆಡ್”, ಪ್ಲಾಟ್‌ನಂ 161 ಬಿ & ಸಿ, ಕೆಐಎಡಿಬಿ ಇಂಡಸ್ಟ್ರಿಯಲ್ ಎರಿಯಾ, ಫಸ್ಟ್‌ಪೇಸ್, ವಸಂತನರಸಾಪುರದಲ್ಲಿ ಡ್ರಗ್ ಡಿಸ್ಪೋಸಲ್ ಕಮಿಟಿಯ ವತಿಯಿಂದ ನಿಯಮಾನುಸಾರ ನಾಶಪಡಿಸಲಾಗಿರುತ್ತದೆ.

Leave a Reply

Your email address will not be published. Required fields are marked *