ಜೂನ್ 21ರಂದು ವಿಶ್ವ ಯೋಗ ದಿನ (International Day of Yoga) ಆಚರಿಸಲಾಯಿತು. ಅನೇಕ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್ ಸಲುವಾಗಿ ಯೋಗ (Yoga) ಮಾಡುತ್ತಾರೆ. ಕನ್ನಡ ಚಿತ್ರರಂಗದಿಂದ ಬಾಲಿವುಡ್ ತನಕ ಹಲವು ನಟ-ನಟಿಯರಿಗೆ ಯೋಗದಿಂದ ಲಾಭ ಆಗಿದೆ. ವಿಶ್ವ ಯೋಗ ದಿನದ ಪ್ರಯುಕ್ತ ಡಾ. ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಯಾಕೆಂದರೆ, ಅಣ್ಣಾವ್ರು ಕೂಡ ಅತ್ಯುತ್ತಮ ಯೋಗಪಟು ಆಗಿದ್ದರು. ಹಠಯೋಗದಲ್ಲಿ ಅವರು ಪರಿಣತಿ ಹೊಂದಿದ್ದರು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಅದನ್ನು ತೋರಿಸಲಾಗಿದೆ. ಅದೇ ರೀತಿ ಡಾ. ರಾಜ್ಕುಮಾರ್ (Dr Rajkumar) ಅವರ ಹಲವು ವಿಡಿಯೋಗಳು ಮತ್ತೆ ವೈರಲ್ ಆಗಿವೆ.
ಡಾ. ರಾಜ್ಕುಮಾರ್ ಅವರು ಬಾಲ್ಯದಿಂದಲೇ ಯೋಗ ಕಲಿತವರಲ್ಲ. 50 ವರ್ಷ ವಯಸ್ಸಿನ ಬಳಿಕ ಅವರು ಯೋಗಾಭ್ಯಾಸ ಮಾಡಲು ಆರಂಭಿಸಿದರು. ಅದರಿಂದ ಅವರಿಗೆ ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಕ್ಕಿತು. ಇದರ ಬಗ್ಗೆ ಜನಸಾಮಾನ್ಯರಿಗೂ ಹೆಚ್ಚಾಗಿ ತಿಳಿಯಲಿ ಎಂಬ ಕಾರಣದಿಂದ ಸಿನಿಮಾದಲ್ಲೂ ಯೋಗಾಭ್ಯಾಸದ ದೃಶ್ಯಗಳನ್ನು ತೋರಿಸಿದರು.
Yoga dinada Shubhashayagalu! 🙂
Dr. Rajkumar’s legacy will indeed live on forever in our hearts 😊 pic.twitter.com/S29H0JIDr0
— Chakravarty Sulibele (@astitvam) June 21, 2025
ಆಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇರಲಿಲ್ಲ. ಜನರನ್ನು ತಲುಪಲು ಸಿನಿಮಾವೇ ದೊಡ್ಡ ಮಾಧ್ಯಮ ಆಗಿತ್ತು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಅವರು ಯೋಗಾಭ್ಯಾಸ ಮಾಡುವುದು ನೋಡಿ ಸ್ಫೂರ್ತಿ ಪಡೆದವರು ಸಾಕಷ್ಟು ಮಂದಿ ಇದ್ದಾರೆ. ಆ ಬಳಿಕವೇ ಯೋಗ ಕಲಿತು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡ ಅಭಿಮಾನಿಗಳ ಸಂಖ್ಯೆ ಅಪಾರ.
ಇದನ್ನೂ ಓದಿ: 1 ನಿಮಿಷದಲ್ಲಿ 10 ಯೋಗದ ಆಸನ: ವಿಶ್ವ ದಾಖಲೆ ಬರೆದ ಹಾಸನದ ಬಾಲಕಿ
ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಅವರು ಮಾಡದೇ ಇರುವ ಪಾತ್ರಗಳೇ ಇಲ್ಲ. ದೇವರಿಂದ ದಾನವರ ತನಕ, ರಾಜನಿಂದ ರೈತನ ತನಕ ಎಲ್ಲ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡರು. ಅಂಥ ಪಾತ್ರಗಳಿಗೆ ಬಹಳ ಸುಲಭವಾಗಿ ಒಪ್ಪಿಕೊಳ್ಳಲು ಅವರಿಗೆ ಯೋಗ ಕೂಡ ಸಹಕಾರಿ ಆಯಿತು. 50ರ ವಯಸ್ಸಿನ ನಂತರವೂ ಆ್ಯಕ್ಷನ್ ಸನ್ನಿವೇಶಗಳಲ್ಲಿ ಸರಾಗವಾಗಿ ನಟಿಸಲು ಅವರಿಗೆ ಸಾಧ್ಯವಾಯ್ತು. ಈ ಮಾತಿಗೆ ವೈರಲ್ ಆಗಿರುವ ವಿಡಿಯೋನೇ ಸಾಕ್ಷಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.