ಶೆಫಾಲಿ ಜರಿವಾಲಾ ಸಾವಿನ ರಹಸ್ಯ: ಉಪವಾಸದಲ್ಲಿ ಔಷಧಿ ಸೇವಿಸ್ತೀರಾ, ಹುಷಾರು! | Was Shefali Jariwala Death Caused By Taking Medicines In Empty Stomach Bni

ಶೆಫಾಲಿ ಜರಿವಾಲಾ ಸಾವಿನ ರಹಸ್ಯ: ಉಪವಾಸದಲ್ಲಿ ಔಷಧಿ ಸೇವಿಸ್ತೀರಾ, ಹುಷಾರು! | Was Shefali Jariwala Death Caused By Taking Medicines In Empty Stomach Bni



ನಟಿ ಶೆಫಾಲಿ ಜರಿವಾಲಾ ಅವರ ಹಠಾತ್ ನಿಧನಕ್ಕೆ ಉಪವಾಸದ ಸ್ಥಿತಿಯಲ್ಲಿ ಔಷಧಿ ಸೇವನೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಖಾಲಿ ಹೊಟ್ಟೆಯಲ್ಲಿ ಔಷಧಿ ಸೇವನೆಯ ಅಪಾಯಗಳ ಬಗ್ಗೆ ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಉಪವಾಸದ ಸಮಯದಲ್ಲಿ ಔಷಧಿಗಳ ಪರಿಣಾಮಗಳು ತೀವ್ರವಾಗಬಹುದು.

‘ಕಾಂಟಾ ಲಗಾ ಗರ್ಲ್’ ಎಂದೇ ಚಿರಪರಿಚಿತರಾದ ನಟಿ, ಬಿಗ್‌ ಬಾಸ್‌ ಸ್ಪರ್ಧಿ ಶೆಫಾಲಿ ಜರಿವಾಲಾ 42ನೇ ವಯಸ್ಸಿನಲ್ಲಿ ಹಠಾತ್ತನೆ ನಿಧನರಾದದ್ದು ಆಘಾತಕಾರಿ ಸುದ್ದಿ. ಆರಂಭಿಕ ವರದಿಗಳ ಪ್ರಕಾರ ಅದಕ್ಕೆ ಕಾರಣ ಹೃದಯಾಘಾತ. ಆದರೆ ಬೇರೊಂದು ವಿಷಯವೂ ಗಮನ ಸೆಳೆಯಿತು. ಶೆಫಾಲಿ ಆ ದಿನ ಪೂಜೆಗಾಗಿ ಉಪವಾಸವಿದ್ದರು ಮತ್ತು ಖಾಲಿ ಹೊಟ್ಟೆಯಲ್ಲಿ ತಮ್ಮ ನಿಯಮಿತ ಮಾತ್ರೆಗಳು ಮತ್ತು ಏಜಿಂಗ್‌ ಕಂಟ್ರೋಲ್‌ ಇಂಜೆಕ್ಷನ್ ಅನ್ನು ತೆಗೆದುಕೊಂಡಿದ್ದರು. ಪ್ರಾಥಮಿಕ ಪೊಲೀಸ್ ವರದಿಗಳ ಪ್ರಕಾರ ಇದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿರಬಹುದು. ಆದರೆ ಶೆಫಾಲಿ ಜರಿವಾಲಾ ಅವರ ಸಾವಿಗೆ ನಿಖರವಾದ ಕಾರಣ ಅಧಿಕೃತ ವೈದ್ಯಕೀಯ ಮತ್ತು ವಿಧಿವಿಜ್ಞಾನ ತನಿಖೆಗಳು ಪೂರ್ಣಗೊಂಡ ನಂತರವೇ ತಿಳಿಯಲಿದೆ.

ಆದರೆ, ಇದೀಗ ವೈದ್ಯಕೀಯ ತಜ್ಞರು ಖಾಲಿ ಹೊಟ್ಟೆಗೆ ತೆಗೆದುಕೊಳ್ಳುವ ಔಷಧಿಗಳ ಅಪಾಯಗಳ ಬಗ್ಗೆ ಹೇಳುತ್ತಿದ್ದಾರೆ. ಖಾಲಿ ಹೊಟ್ಟೆಯಲ್ಲಿಯೇ ತೆಗೆದುಕೊಳ್ಳಬೇಕಾದ ಕೆಲವು ಔಷಧಿಗಳಿವೆ. ಹಲವು ಮಾತ್ರೆಗಳಿದ್ದಾಗ, ಆಹಾರಕ್ಕೆ ಮೊದಲು ತೆಗೆದುಕೊಳ್ಳಬೇಕಾದ ಗ್ಯಾಸ್ಟ್ರಿಕ್‌ ಔಷಧವನ್ನು ಡಾಕ್ಟರು ಕೊಡುತ್ತಾರೆ. ಅದನ್ನು ಹಾಗೇ ತೆಗೆದುಕೊಳ್ಳಬೇಕು. ಆದರೆ ಬೇರೆ ಔಷಧಗಳು, ಆಂಟಿಬಯಾಟಿಕ್‌ಗಳನ್ನು ಊಟ ಮಾಡದೆ ತೆಗೆದುಕೊಂಡಾಗ ಅವು ದೇಹದೊಂದಿಗೆ ಅಸಾಮಾನ್ಯ ರೀತಿಯಲ್ಲಿ ಸಂವಹನ ನಡೆಸುತ್ತವೆ. ಆಹಾರ ಇಲ್ಲದೆ ಖಾಲಿಯಾಗಿ ಉಳಿದಿರುವ ಹೊಟ್ಟೆಯ ಒಳಪದರವು ಇದರಿಂದ ಕೆರಳುತ್ತದೆ. ಕೆಲವು ಔಷಧಿಗಳು, ವಿಶೇಷವಾಗಿ ಉರಿಯೂತದ ಔಷಧಗಳು, ಸ್ಟೀರಾಯ್ಡ್‌ಗಳು ಮತ್ತು ಕೆಲವು ಸಪ್ಲಿಮೆಂಟ್‌ಗಳು ಈ ಒಳಪದರವನ್ನು ಕೆರಳಿಸಬಹುದು.

ಈ ಕಿರಿಕಿರಿಯು ಎದೆಯುರಿ ಅಥವಾ ವಾಕರಿಕೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಸೂಕ್ಷ್ಮ ಸಂದರ್ಭಗಳಲ್ಲಿ ಇದು ರಕ್ತದೊತ್ತಡವನ್ನು ಹಠಾತ್ ಕಡಿಮೆ ಮಾಡಬಹುದು, ನಡುಗುವಿಕೆಯನ್ನು ಉಂಟುಮಾಡಬಹುದು ಅಥವಾ ಮೂರ್ಛೆ ಹೋಗಬಹುದು. ಔಷಧಿಯು ತ್ವರಿತವಾಗಿ ಕಾರ್ಯನಿರ್ವಹಿಸಿದರೆ ಮತ್ತು ಹೊಟ್ಟೆ ಖಾಲಿಯಾಗಿದ್ದರೆ, ವಿಷಾಂಶ ಹೀರಿಕೊಳ್ಳುವಿಕೆಯು ತುಂಬಾ ವೇಗವಾಗಿರಬಹುದು. ಅದು ರಕ್ತದಲ್ಲಿನ ಸಕ್ಕರೆ ಅಥವಾ ಹೃದಯ ಬಡಿತದಂತಹ ದೇಹದ ಪ್ರತಿಕ್ರಿಯೆಗಳಲ್ಲಿ ಅನಿರೀಕ್ಷಿತ ಕುಸಿತ ಅಥವಾ ಏರಿಕೆಗೆ ಕಾರಣವಾಗಬಹುದು.

ಆಂಟಿ ಏಜಿಂಗ್‌ ಚುಚ್ಚುಮದ್ದುಗಳು ಮತ್ತು ಸಪ್ಲಿಮೆಂಟ್‌ಗಳು ಖಾಲಿ ಹೊಟ್ಟೆಗೆ ಅಪಾಯಕಾರಿ. ಪೊಲೀಸ್ ವರದಿಗಳ ಪ್ರಕಾರ ಶೆಫಾಲಿ ಮಧ್ಯಾಹ್ನ ಆಂಟಿ ಏಜಿಂಗ್‌ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರು. ಅವರು ವರ್ಷಗಳಿಂದ ಈ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಈ ಚುಚ್ಚುಮದ್ದುಗಳು ಗ್ಲುಟಾಥಿಯೋನ್, ಕಾಲಜನ್ ಬೂಸ್ಟರ್‌ಗಳು ಅಥವಾ ಉತ್ಕರ್ಷಣ ನಿರೋಧಕಗಳಂತಹ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ಅಭಿದಮನಿ ಅಥವಾ ಇಂಟ್ರಾಮಸ್ಕುಲರ್ ಆಗಿ ನೀಡಲಾಗುತ್ತದೆ. ಸಾಮಾನ್ಯವಾಗಿ ಇವು ಸುರಕ್ಷಿತ. ಆದರೆ ವ್ಯಕ್ತಿಯು ಉಪವಾಸ ಮಾಡಿ ನಿರ್ಜಲೀಕರಣಗೊಂಡಾಗ ಅವುಗಳಿಗೆ ದೇಹ ನೀಡುವ ಪ್ರತಿಕ್ರಿಯೆ ಬದಲಾಗಬಹುದು. ಖಾಲಿ ಹೊಟ್ಟೆಯಲ್ಲಿ ಅಥವಾ ಉಪವಾಸದ ಸ್ಥಿತಿಯಲ್ಲಿ ತೆಗೆದುಕೊಂಡಾಗ ಅವು ದೇಹದ ವ್ಯವಸ್ಥೆಗಳ ಮೇಲೆ ಒತ್ತಡವನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಹೊಟ್ಟೆಯಲ್ಲಿ ನಿರಂತರ ಗ್ಯಾಸ್, ಮಲಬದ್ಧತೆ ಇವು ಕ್ಯಾನ್ಸರ್‌ನ ಲಕ್ಷಣಗಳೇ? ಈ ಸಮಸ್ಯೆ ಇರೋರು ಇದನ್ನ ತಿಳ್ಕೊಳ್ಳಿ

ಶೆಫಾಲಿ ಪೂಜೆಗಾಗಿ ಉಪವಾಸ ವ್ರತ ಮಾಡುತ್ತಿದ್ದರು ಎಂದು ವರದಿಯಾಗಿದೆ. ಉಪವಾಸವು ಆಳವಾದ ಆಧ್ಯಾತ್ಮಿಕ ಅಭ್ಯಾಸವಾಗಿದ್ದರೂ, ಇದು ದೇಹದ ಕಾರ್ಯ ನಿರ್ವಹಣೆಯಲ್ಲಿ ಬದಲಾವಣೆ ಉಂಟುಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ, ಎಲೆಕ್ಟ್ರೋಲೈಟ್ ಮಟ್ಟಗಳು ಏರಿಳಿತಗೊಳ್ಳಬಹುದು. ಔಷಧಿಗಳನ್ನು ಬಫರ್ ಮಾಡುವ ದೇಹದ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ. ಸಾಮಾನ್ಯವಾಗಿ ಆಹಾರದ ಅಗತ್ಯವಿರುವ ಔಷಧಿಗಳನ್ನು ಉಪವಾಸದ ಸಮಯದಲ್ಲಿ ಸೇವಿಸಿದರೆ, ಅವುಗಳ ಪರಿಣಾಮಗಳು ಉತ್ಪ್ರೇಕ್ಷಿತವಾಗಬಹುದು ಅಥವಾ ಅಪಾಯಕಾರಿಯಾಗಬಹುದು.

ಪೊಲೀಸರು ಶೆಫಾಲಿ ಕೇಸ್‌ನಲ್ಲಿ ಇಲ್ಲಿಯವರೆಗೆ ಯಾವುದೇ ಸಂಚು ಅನ್ನು ಕಂಡುಕೊಂಡಿಲ್ಲ. ಆಸ್ಪತ್ರೆಯ ವೈದ್ಯರು ಇನ್ನೂ ಸಾವಿಗೆ ನಿರ್ಣಾಯಕ ಕಾರಣವನ್ನು ನೀಡಿಲ್ಲ. ಉಪವಾಸ, ಔಷಧಿಗಳು ಮತ್ತು ರಕ್ತದೊತ್ತಡದಲ್ಲಿ ಹಠಾತ್ ಕುಸಿತ ಹೇಗೆ ಸೈಲೆಟ್‌ ಆಗಿ ಕೊಲ್ಲಬಹುದು ಎಂಬುದರ ಕುರಿತು ಈಗ ಚರ್ಚೆಯಾಗುತ್ತಿದೆ. ವಿಧಿವಿಜ್ಞಾನ ತಂಡಗಳು ಅವರು ತೆಗೆದುಕೊಂಡ ಔಷಧಿಗಳು ಮತ್ತು ಚುಚ್ಚುಮದ್ದಿನ ಮಾದರಿಗಳನ್ನು ಸಂಗ್ರಹಿಸಿವೆ. ತಜ್ಞರು ಹೇಳುವ ಪ್ರಕಾರ- ತೀವ್ರ ಉಪವಾಸದೊಂದಿಗೆ ಗಂಭೀರ ಔಷಧಗಳನ್ನು ಸೇವಿಸಬೇಡಿ.

ಬ್ರೈನ್ ಸ್ಟ್ರೋಕ್‌ಗೆ ಮುನ್ನ ದೇಹದಲ್ಲಿ ಈ 6 ಲಕ್ಷಣಗಳು ಕಂಡುಬರುತ್ತವೆ

 

 



Source link

Leave a Reply

Your email address will not be published. Required fields are marked *