ಶೇಷಾದ್ರಿಪುರಂ ಕಾಲೇಜಿನಿಂದ ಮಾರುಕಟ್ಟೆ ನಿರ್ವಹಣಾ ವಿಷಯದ ಅಂಗವಾಗಿ ವಿಶಿಷ್ಟವಾದ ಶೈಕ್ಷಣಿಕ ಪ್ರಸ್ತುತಿ…

ಶೇಷಾದ್ರಿಪುರಂ ಕಾಲೇಜು, ತುಮಕೂರಿನ MBA ವಿಭಾಗವು IQAC ಘಟಕದ ಸಹಯೋಗದಲ್ಲಿ ಮಾರುಕಟ್ಟೆ ನಿರ್ವಹಣಾ ವಿಷಯದ ಅಂಗವಾಗಿ ಒಂದು ವಿಶಿಷ್ಟವಾದ ಶೈಕ್ಷಣಿಕ ಪ್ರಸ್ತುತಿಕರಣವನ್ನು ಆಯೋಜಿಸಲಾಗಿತ್ತು

“ಮಾರುಕಟ್ಟೆ ಸಾಮರ್ಥ್ಯ ಅನಾವರಣ – ಡೇಟಾ ಆಧಾರಿತ ಆಲೋಚನೆ” ಎಂಬ ವಿಷಯದ ಮೇಲೆ ನಡೆದ ಈ
ಕಾರ್ಯಕ್ರಮದಲ್ಲಿ,ವಿವಿಧ ವಿದ್ಯಾರ್ಥಿ ತಂಡಗಳು, ಮಾರುಕಟ್ಟೆಯಲ್ಲಿ ಸಂಭವನೀಯತೆ ಅನಾವರಣ ಮಾಡುವ ನವೀನ ತಂತ್ರಗಳ ಬಗ್ಗೆ ಅವರ ಅಧ್ಯಯನವನ್ನು ಪ್ರಸ್ತುತ ಪಡಿಸಿದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಪ್ರೊ. ರೇವಣ್ಣಸಿದ್ದೇಶ್ವರ, ವಿಭಾಗಾಧ್ಯಕ್ಷರು, ಬಿಬಿಎ ವಿಭಾಗ, ಸರ್ಕಾರಿ ಪದವಿ ಕಾಲೇಜು, ಕುಣಿಗಲ್, ಇವರು ಇಂದಿನ ಕೃತಕ ಬುದ್ದಿಮತ್ತೆ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕಾದ ಕೌಶಲ್ಯದ ಬಗ್ಗೆ ತಿಳಸಿದರು,

ಡಾ. ಕಿರಣ್ ಕುಮಾರ್ ಎಚ್ ಎಸ್, ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯ ಸ್ನಾತಕೋತ್ತರ ವಿಭಾಗ, ಶೇಷಾದ್ರಿಪುರಂ ಕಾಲೇಜು ಇವರು ಕಾರ್ಯಕ್ರಮದ ತೀರ್ಪುಗಾರರಾಗಿ ಆಗಮಿಸಿದ್ದರು,ಪ್ರಾಂಶುಪಾಲರಾದ ಡಾ. ಜಗದೀಶ G T ಅಧ್ಯಕ್ಷತೆ ವಹಿಸಿದ್ದರು, ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ನಂದನ್, ಸಂಯೋಜಕರಾದ ಪ್ರೊಫೆಸರ್ ವಿ ಆರ್ ಹಿರೇಮಠ್ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *