Headlines

ಸಂಬಂಧಿಕರಿಲ್ಲ, ಇಂಗ್ಲಿಷ್ ಬರಲ್ಲ, ಅರೇಂಜ್ಡ್​ ಮ್ಯಾರೇಜ್ ಆಗಿ ಅಮೆರಿಕಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಸಂಬಂಧಿಕರಿಲ್ಲ, ಇಂಗ್ಲಿಷ್ ಬರಲ್ಲ, ಅರೇಂಜ್ಡ್​ ಮ್ಯಾರೇಜ್ ಆಗಿ ಅಮೆರಿಕಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ವಾಷಿಂಗ್ಟನ್, ಜೂನ್ 29: ಯಾವುದೇ ಸಂಬಂಧಿಕರಿಲ್ಲ, ಇಂಗ್ಲಿಷ್ ಕೂಡ ಬರೋದಿಲ್ಲ, ಅರೇಂಜ್ಡ್​ ಮ್ಯಾರೇಜ್ ಆಗಿ ಅಮೆರಿಕಕ್ಕೆ ಹೋಗಿದ್ದ ಮಹಿಳೆ ಏಕಾಏಕಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 24 ವರ್ಷದ ಭಾರತೀಯ ಮಹಿಳೆ ಸಿಮ್ರನ್ ಜೂನ್ 20ರಂದು ಭಾರತದಿಂದ ನ್ಯೂಜೆರ್ಸಿಗೆ ಬಂದು ಸ್ವಲ್ಪ ಸಮಯದ ನಂತರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ.

ಲಿಂಡೆನ್ವೋಲ್ಡ್ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.ವಿಡಿಯೋದಲ್ಲಿ ಅವರು ತಮ್ಮ ಮೊಬೈಲ್ ನೋಡುತ್ತಿರುವುದನ್ನು ಕಾಣಬಹುದು. ಹಾಗೆಯೇ ಯಾವುದೇ ಚಿಂತೆಯಾಗಲಿ ಅಥವಾ ಅವರು ತೊಂದರೆಯಲ್ಲಿರುವಂತೆ ಕಾಣಿಸಿರಲಿಲ್ಲ.

ಸಿಮ್ರನ್ ಅಮೆರಿಕಕ್ಕೆ ಬಂದ ಐದು ದಿನಗಳ ಬಳಿಕ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ನಾಪತ್ತೆಯಾಗಿರುವ ಕುರಿತು ತನಿಖೆ ಆರಂಭಿಸಿರುವ ಪೊಲೀಸರಿಗೆ ಅವರನ್ನು ಅರೇಂಜ್ಡ್​ ಮದುವೆ ಎಂಬುದು ತಿಳಿದುಬಂದಿದೆ. ಮದುವೆಯಾದ ಬಳಿಕ ಅವರು ಅಮೆರಿಕಕ್ಕೆ ಹೋಗಿದ್ದಾರೆ.
ಅಮೆರಿಕಕ್ಕೆ ಉಚಿತ ವಿಮಾನ ಟಿಕೆಟ್ ಪಡೆಯಲು ಮದುವೆ ಒಂದು ನೆಪವಾಗಿರಬಹುದೇ ಎಂಬ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ .

ಮತ್ತಷ್ಟು ಓದಿ: ಸಿಕ್ಕಿಂ: ನದಿಗೆ ಉರುಳಿದ ವಾಹನ, ಹನಿಮೂನ್​ಗೆ ಹೋಗಿದ್ದ ದಂಪತಿ ಸೇರಿ 9 ಮಂದಿ ನಾಪತ್ತೆ

ಸಿಮ್ರನ್​ಗೆ ಅಮೆರಿಕದಲ್ಲಿ ಯಾವುದೇ ಸಂಬಂಧಿಕರಿಲ್ಲ, ಅವರಿಗೆ ಇಂಗ್ಲಿಷ್ ಕೂಡ ಬರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾವ ಕುಟುಂಬದ ಸದಸ್ಯರನ್ನಯ ಸಂಪರ್ಕಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.

ಸಿಮ್ರನ್ ಐದು ಅಡಿ, ನಾಲ್ಕು ಇಂಚು ಎತ್ತರವಾಗಿದ್ದು, ಸುಮಾರು 68 ಕೆಜಿ ತೂಕ ಇದ್ದಾರೆ. ಅವರ ಹಣೆಯ ಎಡ ಭಾಗದಲ್ಲಿ ಸಣ್ಣ ಗಾಯದ ಗುರುತಿದೆ. ಕೊನೆಯ ಬಾರಿಗೆ ಬೂದು ಬಣ್ಣದ ಸ್ವೆಟ್​​ಪ್ಯಾಂಟ್ ಹಾಗೂ ಬಿಳಿ ಟಿ ಶರ್ಟ್​ ಧರಿಸಿದ್ದರು. ಆಕೆಯ ಇರುವಿಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ಲಿಂಡೆನ್‌ವೋಲ್ಡ್ ಪೊಲೀಸ್ ಡಿಟೆಕ್ಟಿವ್ ಜೋ ಟೊಮಸೆಟ್ಟಿರನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 



Source link

Leave a Reply

Your email address will not be published. Required fields are marked *