
ಕರ್ನಾಟಕ ಸರ್ಕಾರದ ಜವಳಿ ಇಲಾಖೆಯ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಎಸ್ ಎಲ್ ವಿ ಆದರ್ಶ ಸಿರಿ ಫೌಂಡೇಶನ್ ಸಹಯೋಗದೊಂದಿಗೆ ಗ್ರಾಮೀಣ ಭಾಗದ ಮಹಿಳೆಯ ರಿಗೆ ಏರ್ಪಡಿಸಿದ್ದ ಟೈಲರಿಂಗ್ ತರಬೇತಿ ಮತ್ತು ಟೈಲರಿಂಗ್ ಕಿಟ್ ವಿತರಣಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳಾದ ಡಾ. ಕೆ ನಾಗಣ್ಣನವರು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಗ್ರಾಮೀಣ ಭಾಗದ ಮಹಿಳೆಯರು ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕಲಿಯುವುದರ ಮುಖಾಂತರ ಸ್ವಯಂ ಉದ್ಯೋಗ ಮತ್ತು ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದಾಗಿರುತ್ತದೆ ಮತ್ತು ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಗ್ರಾಮೀಣ ಭಾಗದ ಕುಟುಂಬಗಳ ಆರ್ಥಿಕ ಮಟ್ಟವನ್ನು ಸುಧಾರಿಸಬಹುದಾಗಿರುತ್ತದೆ ಮತ್ತು ಕೋಟಿಗೆರೆ ಕ್ಷೇತ್ರದ ಜನಪ್ರಿಯ ಶಾಸಕರು ಗೃಹ ಸಚಿವರು ಆದಂತ ಡಾಕ್ಟರ್ ಜಿ ಪರಮೇಶ್ವರ್ ಅವರು ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುತ್ತಾರೆ ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದಂತ ಡಿ ಶಂಕರ್ ಕಾರ್ಮಿಕ ಇಲಾಖೆಯ ಅಧಿಕಾರಿಗಳಾದಂತ ಶ್ರೀಕಾಂತ್ ಅವರು ಅವರು ವಕೀಲರು ಪತ್ರಕರ್ತರು ಆದ ಶ್ರೀ ಲಕ್ಷ್ಮಿಕಾಂತ್ ಅವರು ಜಿಲ್ಲಾ ರಾಷ್ಟ್ರೀಯ ಮಾನವ ಹಕ್ಕುಗಳ ಯುವ ಘಟಕದ ಅಧ್ಯಕ್ಷರಾದ ಮಂಜುನಾಥ್ ಅವರು ಡಾನ್ ಫೌಂಡೇಶನ್ ಅವರ ಅಕ್ಷಯ್ ಅವರು ಕಾರ್ಮಿಕ ಇಲಾಖೆಯ ರಮೇಶ ಅವರು ತರಬೇತಿ ಅಧಿಕಾರಿಗಳಾದಂತಹ ಶ್ರೀಮತಿ ಗಂಗಾಂಬಿಕೆ ಅವರು ಹಾಜರಿದ್ದರು ಸ್ವಾಗತವನ್ನು ಶ್ರೀಮತಿ ಆಯುಷ್ಯ ಸಿದ್ದಿಕಿ ಅವರು ಕೋರಿದರು