Headlines

‘ಸಿತಾರೆ ಜಮೀನ್ ಪರ್’ ಸಿನಿಮಾ ಕಲೆಕ್ಷನ್ ಗಣನೀಯ ಏರಿಕೆ; 2ನೇ ದಿನ ಸಖತ್ ಕಮಾಯಿ

‘ಸಿತಾರೆ ಜಮೀನ್ ಪರ್’ ಸಿನಿಮಾ ಕಲೆಕ್ಷನ್ ಗಣನೀಯ ಏರಿಕೆ; 2ನೇ ದಿನ ಸಖತ್ ಕಮಾಯಿ


ಆಮಿರ್ ಖಾನ್ (Aamir Khan) ನಟಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿತ್ತು. ಹಾಗಾದರೆ ಈ ಸಿನಿಮಾದ ಭವಿಷ್ಯ ಕಷ್ಟವಿದೆ ಎಂದು ಕೆಲವರು ಊಹಿಸಿದ್ದರು. ಆದರೆ ಆ ರೀತಿ ಆಗಿಲ್ಲ. 2ನೇ ಸಿನಿಮಾದ ಗಳಿಕೆ ಹೆಚ್ಚಾಗಿದೆ. ಅದಕ್ಕೆ ಕಾರಣಗಳು ಕೂಡ ಇವೆ. ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ ಎರಡೇ ದಿನಕ್ಕೆ 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದರಿಂದ ಆಮಿರ್ ಖಾನ್ ಅವರ ಮುಖದಲ್ಲಿ ನಗು ಅರಳಿದೆ. ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ (Box Office Collection) ಏರಿಕೆ ಕಾಣುತ್ತಿದೆ.

ಇದು ರಿಮೇಕ್ ಸಿನಿಮಾ. ಸ್ಪ್ಯಾನಿಶ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾವನ್ನು ‘ಸಿತಾರೆ ಜಮೀನ್ ಪರ್’ ಎಂದು ಹಿಂದಿಯಲ್ಲಿ ರಿಮೇಕ್ ಮಾಡಲಾಗಿದೆ. ರಿಮೇಕ್ ಸಿನಿಮಾ ಎಂಬ ಕಾರಣಕ್ಕೆ ಆರಂಭದಲ್ಲಿ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸಲಿಲ್ಲ. ಆದರೆ ಎಲ್ಲ ಕಡೆಗಳಿಂದ ಉತ್ತಮ ವಿಮರ್ಶೆ ಕೇಳಿಬರುತ್ತಿರುವುದರಿಂದ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಆಸಕ್ತಿ ಹೆಚ್ಚಿದೆ. ಹಾಗಾಗಿ ಶನಿವಾರ (ಜೂನ್ 21) ಹೆಚ್ಚಿನ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ.

ಶನಿವಾರ ವೀಕೆಂಡ್ ರಜೆ ಇರುವುದು ಕೂಡ ‘ಸಿತಾರೆ ಜಮೀನ್ ಪರ್’ ಸಿನಿಮಾದ ಕಲೆಕ್ಷನ್ ಹೆಚ್ಚಲು ಕಾರಣ ಆಗಿದೆ. ಮೊದಲ ದಿನ (ಜೂನ್ 20) ಈ ಸಿನಿಮಾ 10.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 2ನೇ ದಿನ (ಜೂನ್ 21) ಕಲೆಕ್ಷನ್ ಬಹುತೇಕ ಡಬಲ್ ಆಗಿದೆ. ಅಂದರೆ 19.90 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. 2 ದಿನಕ್ಕೆ ಚಿತ್ರದ ಒಟ್ಟು ಕಲೆಕ್ಷನ್ 30.60 ಕೋಟಿ ರೂಪಾಯಿ.

ಇದನ್ನೂ ಓದಿ

ಇದನ್ನೂ ಓದಿ: Sitaare Zameen Par Review: ನಗಿಸಿ, ಅಳಿಸಿ ಮನರಂಜನೆ ನೀಡುವ ‘ಸಿತಾರೆ ಜಮೀನ್ ಪರ್’

ಆರ್​.ಎಸ್​. ಪ್ರಸನ್ನ ಅವರು ‘ಸಿತಾರೆ ಜಮೀನ್ ಪರ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆಮಿರ್ ಖಾನ್ ಮತ್ತು ಜೆನಿಲಿಯಾ ದೇಶಮುಖ್ ಅವರು ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಹೊಸ ಕಲಾವಿದರಿಗೆ ಆಮಿರ್ ಖಾನ್ ಅವರು ಈ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ಸ್ವತಃ ಆಮಿರ್ ಖಾನ್ ಅವರೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

‘ಸಿತಾರೆ ಜಮೀನ್ ಪರ್’ ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾನುವಾರ (ಜೂನ್ 22) ಬಹುತೇಕ ಕಡೆಗಳಲ್ಲಿ ಹೌಸ್​ಫುಲ್ ಆಗಿದೆ. ಹಾಗಾಗಿ ಭಾನುವಾರ 25 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕೂಡ ಈ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.



Source link

Leave a Reply

Your email address will not be published. Required fields are marked *