ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿಯಾದ ಕನ್ನಡಿಗ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್ ಹೇಳಿದ್ದೇನು? | Getting To Meet Rajinikanth Is A Dream Come True For Me Says Niranjan Mukundan

ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿಯಾದ ಕನ್ನಡಿಗ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್ ಹೇಳಿದ್ದೇನು? | Getting To Meet Rajinikanth Is A Dream Come True For Me Says Niranjan Mukundan



ರಜನಿಕಾಂತ್ ಸರ್ ಅವರನ್ನು ಭೇಟಿಯಾಗಿದ್ದು ನನ್ನ ಕನಸು ನನಸಾದ ಕ್ಷಣ. ಅವರ ಸರಳತೆ ಮತ್ತು ಸೌಜನ್ಯವನ್ನು ಕಂಡು ನಾನು ಮೂಕವಿಸ್ಮಿತನಾದೆ. ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ನನ್ನ ಈಜು ಪಯಣ, ನಾನು ಎದುರಿಸಿದ ಸವಾಲುಗಳು, ಪ್ಯಾರಾ ಕ್ರೀಡಾಪಟುವಾಗಿ ನನ್ನ ಸಾಧನೆಗಳು

ಬೆಂಗಳೂರು: ಭಾರತದ ಹೆಮ್ಮೆಯ ಪ್ಯಾರಾ ಈಜುಪಟು, ಅರ್ಜುನ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ನಿರಂಜನ್ ಮುಕುಂದನ್ (Niranjan Mukundan) ಅವರ ಬಹುದಿನಗಳ ಕನಸೊಂದು ನನಸಾಗಿದೆ. ತಮ್ಮ ಆರಾಧ್ಯ ದೈವ, ತಲೈವಾ ಎಂದೇ ಖ್ಯಾತರಾದ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಇತ್ತೀಚೆಗೆ ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ, ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಈ ಭೇಟಿಯ ಕುರಿತು ನಿರಂಜನ್ ಅವರು ತಮ್ಮ ಸಂತಸ ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಬಾಲ್ಯದ ಹೀರೋ ಜೊತೆ ಅಮೂಲ್ಯ ಕ್ಷಣಗಳು:

ಚಿಕ್ಕಂದಿನಿಂದಲೂ ರಜನಿಕಾಂತ್ ಅವರ ಪಕ್ಕಾ ಅಭಿಮಾನಿಯಾಗಿರುವ ನಿರಂಜನ್, ಅವರ ‘ಬಾಷಾ’ ಚಿತ್ರವನ್ನು 200ಕ್ಕೂ ಹೆಚ್ಚು ಬಾರಿ ನೋಡಿದ್ದಾರಂತೆ. ಅಂತಹ ಮಹಾನ್ ನಟನನ್ನು ಭೇಟಿಯಾಗುವುದು ಅವರ ಜೀವಮಾನದ ಕನಸಾಗಿತ್ತು. ಈ ಕನಸನ್ನು ನನಸು ಮಾಡಲು ಸಾಮಾನ್ಯ ಸ್ನೇಹಿತರೊಬ್ಬರು ಸಹಾಯ ಮಾಡಿದ್ದು, ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ರಜನಿಕಾಂತ್ ಅವರ ನಿವಾಸದಲ್ಲಿ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಸುಮಾರು 25 ರಿಂದ 30 ನಿಮಿಷಗಳ ಕಾಲ ನಡೆದ ಈ ಭೇಟಿಯ ಬಗ್ಗೆ ಮಾತನಾಡಿದ ನಿರಂಜನ್, “ರಜನಿಕಾಂತ್ ಸರ್ ಅವರನ್ನು ಭೇಟಿಯಾಗಿದ್ದು ನನ್ನ ಕನಸು ನನಸಾದ ಕ್ಷಣ. ಅವರ ಸರಳತೆ ಮತ್ತು ಸೌಜನ್ಯವನ್ನು ಕಂಡು ನಾನು ಮೂಕವಿಸ್ಮಿತನಾದೆ. ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ನನ್ನ ಈಜು ಪಯಣ, ನಾನು ಎದುರಿಸಿದ ಸವಾಲುಗಳು, ಪ್ಯಾರಾ ಕ್ರೀಡಾಪಟುವಾಗಿ ನನ್ನ ಸಾಧನೆಗಳು ಮತ್ತು ನನಗೆ ಸಂದ ಅರ್ಜುನ ಪ್ರಶಸ್ತಿಯ ಬಗ್ಗೆ ಬಹಳ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು” ಎಂದು ಹೇಳಿದರು.

ಬೆಂಗಳೂರಿನ ನಂಟು ಮತ್ತು ಸ್ಪೂರ್ತಿದಾಯಕ ಮಾತುಗಳು:

ನಿರಂಜನ್ ಅವರು ಬೆಂಗಳೂರಿನವರು ಎಂದು ತಿಳಿದಾಗ ರಜನಿಕಾಂತ್ ಅವರಿಗೆ ಇನ್ನಷ್ಟು ಸಂತೋಷವಾಯಿತು. ತಮಗೂ ಬೆಂಗಳೂರಿಗೂ ಇರುವ ಹಳೆಯ ನಂಟನ್ನು ನೆನಪಿಸಿಕೊಂಡ ಅವರು, ತಮ್ಮ ಹಿಂದಿನ ದಿನಗಳ ಬಗ್ಗೆ ಕೆಲ ಮಾತುಗಳನ್ನಾಡಿದರು. ನಿರಂಜನ್ ಅವರ ಸಾಧನೆಗಳನ್ನು ಕೇಳಿ ಬಹಳಷ್ಟು ಪ್ರಭಾವಿತರಾದ ರಜನಿಕಾಂತ್, ಅವರ ಹೋರಾಟದ ಮನೋಭಾವವನ್ನು ಶ್ಲಾಘಿಸಿದರು. “ನಿಮ್ಮಂತಹ ಯುವಕರು ದೇಶಕ್ಕೆ ಸ್ಪೂರ್ತಿ. ನಿಮ್ಮ ಸಾಧನೆ ನಿಜಕ್ಕೂ ದೊಡ್ಡದು,” ಎಂದು ಬೆನ್ನುತಟ್ಟಿದ್ದಾರೆ.

ಈ ಸಂದರ್ಭದಲ್ಲಿ ನಿರಂಜನ್ ಅವರು ರಜನಿಕಾಂತ್ ಅವರಿಗೆ ತಮ್ಮ ಚಿತ್ರವಿರುವ ಫ್ರೇಮ್ ಮತ್ತು ಶಾಲನ್ನು ಉಡುಗೊರೆಯಾಗಿ ನೀಡಿದರು. ಇದಕ್ಕೆ ಪ್ರತಿಯಾಗಿ, ರಜನಿಕಾಂತ್ ಅವರು ತಮ್ಮ ಹಸ್ತಾಕ್ಷರವುಳ್ಳ ಪುಸ್ತಕವೊಂದನ್ನು ನಿರಂಜನ್ ಅವರಿಗೆ ನೀಡಿ ಹರಸಿದರು. ಅಷ್ಟೇ ಅಲ್ಲದೆ, “ನಿನ್ನ ಮುಂದಿನ ಎಲ್ಲಾ ಪ್ರಯತ್ನಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಯಾವುದೇ ಸಹಾಯ ಬೇಕಿದ್ದರೂ ಹಿಂಜರಿಯಬೇಡ,” ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

ಈ ಭೇಟಿಯು ನನಗೆ ಹೊಸ ಚೈತನ್ಯ ಮತ್ತು ಪ್ರೇರಣೆಯನ್ನು ನೀಡಿದೆ. ಅವರ ಆಶೀರ್ವಾದ ಪಡೆದಿದ್ದು ನನ್ನ ಭಾಗ್ಯ. ಮುಂಬರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತರುವುದೇ ನನ್ನ ಮುಂದಿನ ಗುರಿ. ತಲೈವಾ ಅವರ ಮಾತುಗಳು ಆ ಗುರಿಯನ್ನು ತಲುಪಲು ನನಗೆ ಮತ್ತಷ್ಟು ಶಕ್ತಿ ನೀಡಿದೆ ಎಂದು ನಿರಂಜನ್ ಮುಕುಂದನ್ ಭಾವನಾತ್ಮಕವಾಗಿ ನುಡಿದರು.

 



Source link

Leave a Reply

Your email address will not be published. Required fields are marked *