ನವದೆಹಲಿ, ಜೂನ್ 27: ಸೈಬರ್ ವಂಚನೆಗೆ ಕಡಿವಾಣ ಹಾಕಲು ಟೆಲಿಕಾಂ ಇಲಾಖೆ ಬಿಗಿ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಅದರಂತೆ, ಗ್ರಾಹಕರ ಮೊಬೈಲ್ ನಂಬರ್ ಅಥವಾ ಗುರುತುಗಳನ್ನು ಪರಿಶೀಲಿಸಬಹುದಾದಂತಹ ಕೇಂದ್ರೀಕೃತ ಪ್ಲಾಟ್ಫಾರ್ಮ್ವೊಂದನ್ನು ರಚಿಸಲು ಮುಂದಾಗಿದೆ. ಟೆಲಿಕಾಂ ಆಪರೇಟರ್ಗಳು, ಬ್ಯಾಂಕುಗಳು, ಇಕಾಮರ್ಸ್ ಸಂಸ್ಥೆಗಳು ಮೊದಲಾದವು ಈಗ ಈ ಪ್ಲಾಟ್ಫಾರ್ಮ್ ಮೂಲಕ ತಮ್ಮ ಗ್ರಾಹಕರ ಗುರುತುಗಳನ್ನು ಪರಿಶೀಲಿಸುವುದು ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ 2024ರ ದೂರಸಂಪರ್ಕ ಟೆಲಿಕಾಂ ಸೈಬರ್ ಭದ್ರತೆ ನಿಯಮಗಳಿಗೆ (Telecommunications Rules 2024) ತಿದ್ದುಪಡಿ ತರಲು ರೂಪಿಸಲಾದ ಕರಡು ಅಧಿಸೂಚನೆಯಲ್ಲಿ ಇಂಥದ್ದೊಂದು ಪ್ರಸ್ತಾಪ ಮಾಡಲಾಗಿದೆ.
ಇದು ಮೊಬೈಲ್ ನಂಬರ್ ವ್ಯಾಲಿಡೇಶನ್ (ಎಂಎನ್ವಿ) ಪ್ಲಾಟ್ಫಾರ್ಮ್ ಆಗಿದ್ದು, ಕೇಂದ್ರ ಸರ್ಕಾರವೇ ಖುದ್ದಾಗಿ ಇದನ್ನು ಸ್ಥಾಪಿಸಬಹುದು. ಅಥವಾ ಏಜೆನ್ಸಿಯೊಂದಕ್ಕೆ ಇದರ ಜವಾಬ್ದಾರಿ ವಹಿಸಬಹುದು. ಈ ಪ್ಲಾಟ್ಫಾರ್ಮ್ ಅನ್ನು ವೆರಿಫಿಕೇಶನ್ಗೆ ಬಳಸಲು ನಿರ್ದಿಷ್ಟ ಶುಲ್ಕ ನಿಗದಿ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: Credit Score: ಸಂಬಳ ಹೆಚ್ಚಿದರೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ? ಅಂಕ ನಿರ್ಧಾರ ಆಗೋದು ಹೇಗೆ?
ನಕಲಿ ದಾಖಲೆ ಬಳಸಿ 21 ಲಕ್ಷ ಸಿಮ್ ಕನೆಕ್ಷನ್?
ದೂರಸಂಪರ್ಕ ಇಲಾಖೆಯು ಎಐ ಟೆಕ್ನಾಲಜಿ ಬಳಸಿ ಸಿಮ್ ಕನೆಕ್ಷನ್ಗಳನ್ನು ಪರಿಶೀಲನೆ ನಡೆಸುತ್ತಿದೆ. ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆಯಲಾದ ಕೋಟ್ಯಂತರ ಸಿಮ್ಗಳನ್ನು ಡಿಸ್ಕನೆಕ್ಟ್ ಮಾಡಲಾಗಿದೆ.
ಐಎಂಇಐ ವಿಚಾರದಲ್ಲಿ ಸರ್ಕಾರದ ಕ್ರಮ
ಭಾರತದ ಟೆಲಿಕಾಂ ನೆಟ್ವರ್ಕ್ಗಳಲ್ಲಿ ಈಗಾಗಲೇ ಇರುವ ಐಎಂಇಐಗಳನ್ನು ಮತ್ತೊಂದು ಸಾಧನಗಳಿಗೆ ನಿಯೋಜಿಸದಂತೆ ಎಚ್ಚರ ವಹಿಸಿ ಎಂದು ಮೊಬೈಲ್ ತಯಾರಕರನ್ನು ಸರ್ಕಾರ ಕೇಳಲು ನಿರ್ಧರಿಸಿದೆ. ಭಾರತದಲ್ಲಿ ತಯಾರಾಗುವ ಅಥವಾ ಆಮದಾಗುವ ಫೋನ್ಗಳ ಐಎಂಇಐ ಸಂಖ್ಯೆ ಪುನಾವರ್ತನೆ ಆಗುವಂತಿಲ್ಲ.
ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
ಇದೇ ವೇಳೆ, ಸರ್ಕಾರವು ಭಾರತದಲ್ಲಿ ಬಳಕೆಯಲ್ಲಿದ್ದ ಐಎಂಇಐಗಳ ಡಾಟಾಬೇಸ್ ಅನ್ನು ನಿರ್ಮಿಸಲಿದೆ. ನಿರ್ಬಂಧದಲ್ಲಿರುವ ಐಎಂಇಐಗಳೂ ಕೂಡ ಈ ಡಾಟಾಬೇಸ್ನಲ್ಲಿ ಇರಲಿವೆ. ಈ ಐಎಂಇಐ ಸಂಖ್ಯೆಯು ಹೊಸ ಉಪಕರಣಗಳಿಗೆ ನಿಯೋಜನೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶ. ಮೊಬೈಲ್ ತಯಾರಕರು ಐಎಂಇಐಗಳನ್ನು ನಿಯೋಜಿಸುವ ಮೊದಲು ಈ ಡಾಟಾಬೇಸ್ ಅನ್ನು ಗಮನಿಸಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ