ಇನ್ನು ಸುಂದರ್ ನಿರ್ದೇಶನದ ಸಿನಿಮಾಗೆ ಮೊದಲು ನಟಿಯಾಗಿ ಆಯ್ಕೆಯಾಗಿದ್ದು, ಅಂದಿನ ಸ್ಟಾರ್ ನಟಿ ಸೌಂದರ್ಯ. ಆದರೆ, ಸೌಂದರ್ಯ ಅವರು ಬಹುಭಾಷೆಗಳಲ್ಲಿ ತುಂಬಾ ಬ್ಯೂಸಿ ಆಗಿದ್ದರಿಂದ ಸಿನಿಮಾಗೆ ಡೇಟ್ ಕೊಡಲಾಗದೇ ರಿಜೆಕ್ಟ್ ಮಾಡಿದ್ದರು. ಇದಾದ ನಂತರ ನಟಿ ಮೀನಾಗೆ ಈ ಸಿನಿಮಾದ ಆಫರ್ ಹೋಗಿತ್ತು. ಆದರೆ, ಅನ್ಯ ಕಾರಣಕ್ಕೆ ಮೀನಾ ಅವರು ಕೂಡ ಸಿನಿಮಾದಿಂದ ದೂರ ಉಳಿದರು.
ಒಂದು ವೇಳೆ ಸೌಂದರ್ಯ ಅಥವಾ ಮೀನಾ ‘ಮುರೈ ಮಾಮನ್’ ಸಿನಿಮಾ ಮಾಡಿದರೆ ಖುಷ್ಬೂ-ಸುಂದರ್ ಜೋಡಿ ಆಗ್ತಿರಲಿಲ್ಲ ಅಂತ ಖುಷ್ಬೂ ಹೇಳಿದ್ದಾರೆ.