
ಸ್ಟೀಲ್ ಆಭರಣ ಧರಿಸುವುದರ ಶುಭ-ಅಶುಭ ಫಲಗಳ ಬಗ್ಗೆ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ಗುರೂಜಿ ಚರ್ಚಸಿದ್ದಾರೆ. ಸ್ಟೀಲ್‌ನಲ್ಲಿರುವ ಕಬ್ಬಿಣದ ಅಂಶವು ಶನಿ ದೇವರಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಹಿಂದೆ ಬಿದಿರಿನ ಬುಟ್ಟಿಯಲ್ಲಿ ಪೂಜಾ ಸಾಮಗ್ರಿಗಳನ್ನು ಇಡುವುದು ಸಾಮಾನ್ಯವಾಗಿತ್ತು. ಆದರೆ ಆಧುನಿಕ ಜೀವನಶೈಲಿಯಲ್ಲಿ ಈ ಆಚಾರಗಳು ಕಡಿಮೆಯಾಗಿವೆ. ಸ್ಟೀಲ್ ಆಭರಣಗಳ ಬದಲು ತಾಮ್ರ ಅಥವಾ ಹಿತ್ತಾಳೆಯನ್ನು ಬಳಸುವುದು ಉತ್ತಮ ಎಂದು ಅವರು ಸೂಚಿಸಿದ್ದಾರೆ. ಸ್ಟೀಲ್ ಚೈನ್‌ಗಳು, ಕಡಗಗಳು ಮನಸ್ಸನ್ನು ಚಂಚಲಗೊಳಿಸಬಹುದು ಮತ್ತು ಅದೃಷ್ಟಕ್ಕೆ ಅಡ್ಡಿಯಾಗಬಹುದು ಎಂದು ಅವರು ಹೇಳಿದ್ದಾರೆ. ಹೆಚ್ಚಿನ ವಿರಗಳಿಗೆ ವಿಡಿಯೋ ನೋಡಿ.