ಭಾರತೀಯ ಮೂಲದ ಕೆನಡಿಯನ್ ರ‍್ಯಾಪ್ ಸಿಂಗರ್ ಜೆನಿಸಿಸ್ ಯಾಸ್ಮಿನ್ ಮೋಹನ್‌ರಾಜ್ ಹೊಸ ಮ್ಯೂಸಿಕ್ ಆಲ್ಬಮ್ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಜೆನಿಸಿಸ್ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನೆಗಳು ಜೋರಾಗುತ್ತಿದೆ.
ಟೊರೆಂಟೋ(ಜೂ.22) ಭಾರತೀಯ ಮೂಲದ ಕೆನಡಿಯನ್ ರ‍್ಯಾಪ್ ಸಿಂಗರ್ ಜೆನಿಸಿಸ್ ಯಾಸ್ಮಿನ್ ಮೋಹನ್‌ರಾಜ್ ಹೊಸ ಮ್ಯೂಸಿಕ್ ವಿಡಿಯೋ ಹೊರತಂದಿದ್ದಾರೆ. ಟ್ರೂ ಬ್ಲೂ ಮ್ಯೂಸಿಕ್ ವಿಡಿಯೋ ಭಾರತದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಮ್ಯೂಸಿಕ್ ವಿಡಿಯೋ ನೆಪದಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮವನ್ನು ಅಪಮಾನಿಸಿದ್ದಾರೆ ಎಂದು ಆಕ್ರೋಶಗಳು ಹೆಚ್ಚಾಗುತ್ತಿದೆ. ಇದು ಕ್ರಿಯೇಟಿವಿಟಿ ಅಲ್ಲ, ಎರಡು ಧರ್ಮಗಳಿಗೆ ಮಾಡಿದ ಅಗೌರವ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಜೆನಿಸಿಸ್ ಯಾಸ್ಮಿನ್, ಹಿಂದೂ ದೇವರಂತೆ ಮೇಕ್ಅಪ್ ಮಾಡಿಕೊಂಡಿದ್ದಾರೆ. ಜೊತೆಗೆ ಕ್ರಿಶ್ಚಿಯನ್ ಧರ್ಮದ ಶಿಲುಬೆಯನ್ನು ಅಸಹ್ಯ ಭಂಗಿಯಲ್ಲಿ ಹಿಡಿದು ಫೋಸ್ ಕೊಟ್ಟಿದ್ದಾರೆ.
ಹಿಂದೂ ದೇವರಂತೆ ಮೇಕ್ಅಪ್
ಜೆನಿಸಿಸ್ ಹಿಂದೂ ಕಾಳಿ ದೇವತೆಯಂತೆ ಮೇಕ್ಅಪ್ ಮಾಡಿಕೊಂಡಿದ್ದಾರೆ. ನೀಲಿ ಬಣ್ಣವನ್ನು ಬಳಿದುಕೊಂಡಿದ್ದಾರೆ. ಬಿಂದಿ, ಕಿವಿಯೋಲೆ, ಮೂಗುತಿ ಸೇರಿದಂತೆ ಚಿನ್ನಾಭರಣ ಧರಿಸಿದ್ದಾರೆ. ಬಿಕಿನಿ ಧರಿಸಿದ ಈ ಸಿಂಗರ್ ಶಿಲುಬೆಯನ್ನು ಹಿಡಿದು ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಶಿಲುಬೆಯನ್ನು ನೆಕ್ಕಿ ಹೊಸ ಮ್ಯೂಸಿಕ್ ವಿಡಿಯೋ ಪ್ರಚಾರ ಮಾಡಿದ್ದಾರೆ. ಟ್ರೂ ಬ್ಲೂ ಮ್ಯೂಸಿಕ್ ವಿಡಿಯೋದ ಹಲವು ತುಣುಕುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಕ್ಷಣವೇ ಈ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಿ ಕ್ಷಮೆ ಕೇಳುವಂತೆ ಹಲವರು ಆಗ್ರಹಿಸಿದ್ದಾರೆ. ಈ ರೀತಿಯ ಪ್ರಚಾರದ ಸ್ಟಂಟ್ ಉತ್ತಮವಲ್ಲ ಎಂದು ಹಲವರು ಎಚ್ಚರಿಸಿದ್ದಾರೆ.
Scroll to load tweet…
ಈಕೆ ಭಾರತೀಯ ಮೂಲದವಳಾಗಿದ್ದು ಈ ರೀತಿಯ ಅಪಮಾನ ಮಾಡುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ. ಈಕೆ ಹುಟ್ಟಿ ಬೆಳೆದಿದ್ದು ಕೆನಾಡದಲ್ಲೇ. ಆದರೆ ಈಕೆಯ ತಂದೆ ಮೂಲ ತಮಿಳನಾಡು ಹಾಗೂ ತಾಯಿ ಸ್ವೀಡನ್ ಮೂಲದವರು. ಹೀಗಾಗಿ ಈಕೆಯ ಹೆಸರಿನಲ್ಲಿ ಮೋಹನರಾಜ್ ಎಂದಿದೆ. ಪ್ರತಿ ಭಾರಿ ವಿವಾದಾತ್ಮಕ ಮ್ಯೂಸಿಕ್ ಮೂಲಕವೇ ಈಕೆ ಸದ್ದು ಮಾಡಿದ್ದಾಳೆ. 2015ರಿಂದ ಸತತವಾಗಿ ಮ್ಯೂಸಿಕ್ ವಿಡಿಯೋಗಳನ್ನು ಹೊರತರುತ್ತಿದ್ದಾರೆ. ಪ್ರತಿ ವಿಡಿಯೋ ಒಂದಲ್ಲೂ ಒಂದು ವಿವಾದಕ್ಕೆ ಗುರಿಯಾಗಿದೆ.
Scroll to load tweet…
ಸಿಂಗರ್ ವಿರುದ್ದ ಹೆಚ್ಚಾದ ಆಕ್ರೋಶ
ಜೆನಿಸಿಸ್ ಉದ್ದೇಶಪೂರ್ವಕವಾಗಿ ಹಿಂದೂ ದೇವರನ್ನು ಹಾಗೂ ಕ್ರಿಶ್ಚಿಯನ್ ಧರ್ಮವನ್ನು ಅಮಾನಿಸಿದ್ದಾರೆ. ಬಿಕಿನಿ ಹಾಕಿದ ಹಿಂದೂ ದೇವತೆಯಂತೆ ಪೋಸ್ ಕೊಟ್ಟಿದ್ದಾರೆ. ಇದರ ಜೊತೆ ಶಿಲುಬೆಯನ್ನು ಅಸಹ್ಯ ರೀತಿಯಲ್ಲಿ ಹಿಡಿದು ಪೋಸ್ ಕೊಟ್ಟಿರುವ ವಿಡಿಯೋಗಳಿಗೆ ಹಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ರೀತಿ ಅಗೌರವ ತೋರುವುದು, ಅಪಮಾನ ಮಾಡುವುದನ್ನು ಸಹಿಸುವುದಿಲ್ಲ ಎಂದು ಹಲವರು ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಪ್ರತಿಕ್ರಿಯೆಗಳಿಗೆ ಜೆನಿಸಿಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೇ ಅಲ್ಲ ವಿಡಿಯೋವನ್ನು ಮತ್ತಷ್ಟು ಪ್ರಚಾರ ಮಾಡುತ್ತಿದ್ದಾರೆ. ವಿವಾದ ಮೂಲಕ ತನ್ನ ವಿಡಿಯೋ ಹೆಚ್ಚು ಪ್ರಚಾರ ಸಿಗುವಂತೆ ಮಾಡುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.
Scroll to load tweet…