
ಬೆಂಗಳೂರು ವಿಜಯನಗರ ಚಂದ್ರ ಲೇಔಟ್ ನಲ್ಲಿರುವ ಅಪ್ಪು ಮ್ಯೂಸಿಕ್ ಅಕಾಡೆಮಿಯ ಸಭಾಂಗಣದಲ್ಲಿ ಮಧುರ ಗೆಳೆಯರ ಬಳಗದ ವತಿಯಿಂದ ಕನ್ನಡದ ಹಿರಿಯ ನಟಿ ಬಹು ಭಾಷಾ ತಾರೆ ಬಿ.ಸರೋಜದೇವಿ ಅವರ ಸ್ಮರಣಾರ್ಥ ಗಾನ ನಮನ ಹಾಗೂ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಮನಗರದ ಜಿಲ್ಲೆಯ ನಿವೃತ್ತ.ಭೂಗೋಳಶಾಸ್ತ್ರ ಉಪನ್ಯಾಸಕರಾದ ಶ್ರೀ ಪೂರ್ಣಚಂದ್ರ ಎಂ.ಎ. ಅವರು ಮಾತನಾಡಿ ಬಹುಬಾಷಾ ತಾರೇ ಸರೋಜದೇವಿ ನಮ್ಮ ಕನ್ನಡದ ಕಣ್ಮಣಿ. ಅಭಿನವ ಸರಸ್ವತಿ ಸುಮಾರು 200ಕ್ಕೂ ಹೆಚ್ಚು ಅಭಿನಯಿಸಿ ಕಣ್ಮರೆಯಾಗಿದ್ದಾರೆ. ನಮ್ಮ ಕನ್ನಡ ಚಿತ್ರ ರಂಗಕ್ಕೆ ತುಂಬಲಾರ ನಷ್ಟ. ಕನ್ನಡ ತಮಿಳು ತೆಲುಗು ಹಿಂದಿ ನಟಿಸಿದ್ದಾರೆ.ಮೇರು ನಟರ ಮೋಹಕ ತಾರೇ. ಹಲವಾರು ದಶಕಗಳ ಕಾಲ ಬೆಳ್ಳಿತೆರೆ ಆಳಿದ ಕನ್ನಡ ಅರಗಿಣಿ. ಇವರು ನಮ್ಮ ಜಿಲ್ಲೆಯವರು. ನಮ್ಮ ಹೆಮ್ಮೆ. ಪದ್ಮಭೂಷಣ ಪಡೆದ ಮೊದಲ ಕನ್ನಡದ ನಟಿ. ಡಾ. ರಾಜಕುಮಾರ್ ಶಿವಾಜಿ ಗಣೇಶ್ನ್. ಎಂ. ಜಿ. ರಾಮಚಂದ್ರನ್ ಏನ್. ಟಿ. ರಾಮರಾವ್ ರವರಂತ ಮೇರುನಟರ ಜೊತೆ ಅಭಿನಯಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.ಈ ಸಂದರ್ಭ ಬಿ.ಸರೋಜ ದೇವಿಯ ಅಭಿಮಾನಿಗಳಾದ ದಾವಣಗೆರೆಯ ಶಿಕ್ಷಕಿ ಕೆ.ಶೋಭ. ಬೆಂಗಳೂರಿನ ಗಾಯಕಿ ಜ್ಞಾನವಿ ಆನಂದ್. ರಾಮನಗರ ಜಿಲ್ಲೆಯ ಸಹಾಯಕ ಪ್ರಾಧ್ಯಾಪಕರಾದ ಕಿರಣ್ ಕುಮಾರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಗಾಯಕರಾದ ನಿರ್ಮಲ. ಅಶೋಕ ಪೋತಿ. ಅರ್ಪಿತಾ ವಿ.ಹಿರೇಮಠ್.ಡಾ.ಪುರುಷೋತ್ತಮ್.ಶಿವಶಂಕರ್.ಬಳಗದ ಅಧ್ಯಕ್ಷರಾದ ಡಾ.ಎಂ.ಪುಟ್ಟರಾಜು ಉಪಸ್ಥಿತರಿದ್ದರು.