Headlines

ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಪ್ರಸ್ತಾವನೆಗೆ ಅನುಮೋದನೆ ದೊರೆಯುತ್ತಿದ್ದಂತೆ ಟೆಂಡರ್‌ ಆಹ್ವಾನಿಸಲು ಪಾಲಿಕೆ ಸಿದ್ಧತೆ | Tender For Silk Board To Hebbal Tunnel Project

ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಪ್ರಸ್ತಾವನೆಗೆ ಅನುಮೋದನೆ ದೊರೆಯುತ್ತಿದ್ದಂತೆ ಟೆಂಡರ್‌ ಆಹ್ವಾನಿಸಲು ಪಾಲಿಕೆ ಸಿದ್ಧತೆ | Tender For Silk Board To Hebbal Tunnel Project



ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ದೊರೆಯುತ್ತಿದ್ದಂತೆ ಟೆಂಡರ್‌ ಆಹ್ವಾನಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ

  ಬೆಂಗಳೂರು : ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ದೊರೆಯುತ್ತಿದ್ದಂತೆ ಟೆಂಡರ್‌ ಆಹ್ವಾನಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ

ಹೆಬ್ಬಾಳದ ಎಸ್ಟೀಮ್‌ಮಾಲ್‌ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗೆ 16.745 ಕಿ.ಮೀ. ಉದ್ದದ ಟ್ವಿನ್‌ ಟ್ಯೂಬ್‌ ಟನಲ್‌ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವ ಬೆನ್ನಲ್ಲೇ ಪಾಲಿಕೆ, ಎರಡು ಪ್ಯಾಕೇಜ್‌ಗಳಲ್ಲಿ ಸುರಂಗ ನಿರ್ಮಾಣಕ್ಕೆ ಟೆಂಡರ್‌ ಕರೆಯಲು ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದೆ.

ಪ್ಯಾಕೇಜ್‌-1ರಡಿ (ಉತ್ತರ) ಹೆಬ್ಬಾಳದ ಎಸ್ಟೀಮ್‌ ಮಾಲ್‌ ಜಂಕ್ಷನ್‌ನಿಂದ ಶೇಷಾದ್ರಿ ರಸ್ತೆವರೆಗೆ 8.748 ಕಿ.ಮೀ. ಹಾಗೂ ಪ್ಯಾಕೇಜ್‌-2ರಲ್ಲಿ ಶೇಷಾದ್ರಿ ರಸ್ತೆಯಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗೆ 8.748 ಕಿ.ಮೀ. ಉದ್ದದ ಸುರಂಗ ನಿರ್ಮಿಸಲಾಗುತ್ತದೆ.

ಪಾಲಿಕೆ ವ್ಯಾಪ್ತಿಯ ಹೆಬ್ಬಾಳದ ಎಸ್ಟೀಮ್‌ ಮಾಲ್‌ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗೆ ಉತ್ತರ-ದಕ್ಷಿಣ ಕಾರಿಡಾರ್‌ ಯೋಜನೆಯನ್ನು ಎರಡು ಪ್ಯಾಕೇಜ್‌ಗಳಲ್ಲಿ ಅನುಷ್ಠಾನಗೊಳಿಸಲು ಸಿದ್ಧಪಡಿಸಿರುವ 17,780 ಕೋಟಿ ರು. ಅಂದಾಜು ವೆಚ್ಚಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಈ ಪೈಕಿ ಪ್ಯಾಕೇಜ್ 1ಕ್ಕೆ ಬಿಬಿಎಂಪಿ ಪಾಲು 3,508 ಕೋಟಿ ರು. ಖಾಸಗಿ ಪಾಲು 5,262 ಕೋಟಿ ರು., ಪ್ಯಾಕೇಜ್ 2ಗೆ ಬಿಬಿಎಂಪಿ ಪಾಲು 3,571.37 ಕೋಟಿ ರು, ಖಾಸಗಿ ಪಾಲು 5,357 ಕೋಟಿ ರು. ಆಗಿದೆ. ಅವಳಿ ಸುರಂಗ ಮಾರ್ಗವು 33.490 ಕಿ.ಮೀ. ಉದ್ದವಿರಲಿದೆ. ಜೋಡಿ ಸುರಂಗವನ್ನು 26 ತಿಂಗಳಲ್ಲಿ ಕೊರೆದು, ನಂತರ 12 ತಿಂಗಳೊಳಗೆ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಸುರಂಗ ಕೊರೆಯುವುದಕ್ಕಾಗಿ 8 ಟನಲ್‌ ಬೋರಿಂಗ್‌ ಮೆಷಿನ್‌ಗಳನ್ನು (ಟಿಬಿಎಂ) ಬಳಸಿಕೊಳ್ಳಲಾಗುತ್ತಿದೆ.

ಪ್ರತಿ ಕಿ.ಮೀ.ಗೆ 19 ರು. ಟೋಲ್‌ ಶುಲ್ಕ

ವಾಹನಗಳಿಗೆ ಏಕ ಸಂಚಾರದ ಪೂರ್ಣ ಉದ್ದದ ಸುರಂಗ ಮಾರ್ಗ ಬಳಕೆಗೆ ಪ್ರತಿ ಕಿ.ಮೀ.ಗೆ ಕನಿಷ್ಠ 19 ರು. ಟೋಲ್‌ ಶುಲ್ಕ ನಿಗದಿಪಡಿಸಲಾಗಿದೆ. ಗುತ್ತಿಗೆ ಪಡೆಯುವ ಕಂಪನಿಗೆ 30 ವರ್ಷಗಳ ಕಾಲ ಸುರಂಗ ರಸ್ತೆಯಲ್ಲಿ ಟೋಲ್‌ ಸಂಗ್ರಹಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ಸುರಂಗ ರಸ್ತೆ ನಿರ್ಮಾಣದ ಟೆಂಡರ್‌ಗೆ ಸರ್ಕಾರ ಅನುಮೋದನೆ ನೀಡಿದೆ. ಆರ್ಥಿಕ ಇಲಾಖೆಯ ಒಪ್ಪಿಗೆ ಕಳುಹಿಸಲಾಗಿದೆ. ಅನುಮೋದನೆ ದೊರೆಯುತ್ತಿದ್ದಂತೆ ಟೆಂಡರ್‌ ಆಹ್ವಾನಿಸಲಾಗುವುದು.

– ಬಿ.ಎಸ್‌. ಪ್ರಹ್ಲಾದ್‌, ನಿರ್ದೇಶಕರು, ಬಿ ಸ್ಮೈಲ್‌ ಕಂಪನಿ

-ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲು ಪಾಲಿಕೆಯಿಂದ ಸಿದ್ಧತೆ

-ಪ್ಯಾಕೇಜ್‌-1 ಹೆಬ್ಬಾಳದ ಎಸ್ಟೀಮ್‌ ಮಾಲ್‌ ಜಂಕ್ಷನ್‌ನಿಂದ ಶೇಷಾದ್ರಿ ರಸ್ತೆವರೆಗೆ 8.748 ಕಿ.ಮೀ.

-ಪ್ಯಾಕೇಜ್‌-2ರಲ್ಲಿ ಶೇಷಾದ್ರಿ ರಸ್ತೆಯಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗೆ 8.748 ಕಿ.ಮೀ.



Source link

Leave a Reply

Your email address will not be published. Required fields are marked *