12 ದಿನಗಳ ಕಾಲ ನಡೆದ ಇಸ್ರೇಲ್ ಇರಾನ್ ಕದನದಲ್ಲಿ ತನ್ನ ಮಿತ್ರ ರಾಷ್ಟ್ರ ಇಸ್ರೇಲ್‌ನನ್ನು ಇರಾನ್‌ನ ಕ್ಷಿಪಣಿಗಳಿಂದ ಕಾಪಾಡಲು ಅಮೆರಿಕವು ತನ್ನ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ‘ಥಾಡ್’ ಒಟ್ಟು ಪ್ರಮಾಣದಲ್ಲಿ ಶೇ.20ರಷ್ಟನ್ನು ಇಸ್ರೇಲ್‌ಗೆ ಕೊಟ್ಟಿತ್ತು ಎಂದು ವರದಿಯೊಂದು ಹೇಳಿದೆ.
ವಾಷಿಂಗ್ಟನ್: 12 ದಿನಗಳ ಕಾಲ ನಡೆದ ಇಸ್ರೇಲ್ ಇರಾನ್ ಕದನದಲ್ಲಿ ತನ್ನ ಮಿತ್ರ ರಾಷ್ಟ್ರ ಇಸ್ರೇಲ್‌ನನ್ನು ಇರಾನ್‌ನ ಕ್ಷಿಪಣಿಗಳಿಂದ ಕಾಪಾಡಲು ಅಮೆರಿಕವು ತನ್ನ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ‘ಥಾಡ್’ ಒಟ್ಟು ಪ್ರಮಾಣದಲ್ಲಿ ಶೇ.20ರಷ್ಟನ್ನು ಇಸ್ರೇಲ್‌ಗೆ ಕೊಟ್ಟಿತ್ತು ಎಂದು ವರದಿಯೊಂದು ಹೇಳಿದೆ. ಇದಕ್ಕೆ ಒಟ್ಟು 10,500 ಕೋಟಿ ರು. ಬಳಕೆಯಾಗಿದೆ ಎಂದು ಅಂದಾಜಿಸಲಾಗಿದೆ.
ವರದಿಯನ್ವಯ 12 ದಿನಗಳ ಕಾಳಗದಲ್ಲಿ ಒಟ್ಟು 60-80 ಥಾಡ್‌ಗಳನ್ನು ಇರಾನ್ ವಿರುದ್ಧ ಬಳಕೆ ಮಾಡಲಾಗಿದೆ. ಇದರ ವೆಚ್ಚವೂ ದುಬಾರಿ. ಜೊತೆಗೆ ಇವುಗಳ ಉಡ್ಡಯನ ವೆಚ್ಚ ಕೂಡಾ ಭಾರೀ ದುಬಾರಿ. ಹೀಗೆ ಒಟ್ಟಾರೆ 12 ದಿನದಲ್ಲಿ ಅಮೆರಿಕದ ಇಸ್ರೇಲ್ ರಕ್ಷಣೆಗೆ ಅಂದಾಜು 10,500 ಕೋಟಿ ರು. ವೆಚ್ಚ ಮಾಡಿದೆ ಎಂದು ವರದಿ ಹೆಳಿದೆ.
ಅಮೆರಿಕವು ಉತ್ತರ ಕೊರಿಯಾ ಮತ್ತು ಇರಾನ್‌ನಿಂದ ಖಂಡಾಂತರ ಕ್ಷಿಪಣಿಗಳ ಪರೀಕ್ಷೆಯ ಭೀತಿಯಿಂದಾಗಿ ಈ ಅತ್ಯಾಧುನಿಕ ಕ್ಷಿಪಣಿ ನಾಶಕವನ್ನು ತಯಾರಿಸಿತ್ತು. ವರ್ಷಕ್ಕೆ 60-60 ಥಾಡ್‌ಗಳನ್ನು ಅಮೆರಿಕ ತಯಾರಿಸಿತ್ತು.
ನಮ್ಮ ಮೇಲೆ ಮತ್ತೇನಾದರೂ ಅಮೆರಿಕ ದಾಳಿ ನಡೆಸಿದರೆ ಹುಷಾರ್
ದುಬೈ: ಇಸ್ರೇಲ್ ಇರಾನ್ ಯುದ್ಧ ಶುರುವಾದಾಗಿನಿಂದ ಭೂಗತವಾಗಿ ಅಡಗಿಕೊಂಡಿದ್ದ ಇರಾನ್ ಸರ್ವೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿ, ನಮ್ಮ ಮೇಲೆ ಮತ್ತೇನಾದರೂ ಅಮೆರಿಕ ದಾಳಿ ನಡೆಸಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಯಹೂದಿ ಆಡಳಿತ ಅಂತ್ಯವಾಗುವ ಆತಂಕದಿಂದಷ್ಟೇ ಅಮೆರಿಕ ಯುದ್ಧಕ್ಕೆ ಮಧ್ಯಪ್ರವೇಶ ಮಾಡಿತ್ತು ಎಂದು ಹೇಳಿದ್ದಾರೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಖಮೇನಿ, ‘ಕತಾರ್‌ನಲ್ಲಿ ಅಮೆರಿಕ ನೆಲೆಗಳ ಮೇಲಿನ ನಮ್ಮ ದಾಳಿ ನಾವು ಏನು ಬೇಕಾದರೂ ಮಾಡಬಲ್ಲೆವು, ಅಮೆರಿಕ ನಮ್ಮ ದಾಳಿ ವ್ಯಾಪ್ತಿಯಿಂದ ಹೊರಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಈ ದಾಳಿಯ ಮೂಲಕ ನಾವು ಅಮೆರಿಕಕ್ಕೆ ಕಪಾಳಮೋಕ್ಷ ಮಾಡಿದ್ದೇವೆ. ಮುಂದೇನಾದರೂ ಮತ್ತೆ ಅಮೆರಿಕ ನಮ್ಮ ಮೇಲೆ ದಾಳಿ ನಡೆಸಲು ಮುಂದಾದರೆ ನಾವು ಸೂಕ್ತ ತಿರುಗೇಟು ನೀಡಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ದಾಳಿಯ ನಮ್ಮ ಪರಮಾಣು ಶಕ್ತಿ ತಡೆಯಬಹುದೆಂಬ ಅಮೆರಿಕದ ಊಹೆ ವಿಫಲವಾಗಿದೆ. ದಾಳಿಯಿಂದ ಯಾವುದೇ ಮಹತ್ವ ಉದ್ದೇಶ ಸಾಧಿಸುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ಖಮೇನಿ ಹೇಳಿದ್ದಾರೆ.
ಉಧಂಪುರ ಅರಣ್ಯದಲ್ಲಿ ಒಬ್ಬ ಉಗ್ರನ ಹತ್ಯೆ: ಮೂವರ ಬಂಧನಕ್ಕೆ ಸೇನೆ ಬಲೆ
ಜಮ್ಮು: ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರು ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಆ ಪೈಕಿ ಒಬ್ಬನನ್ನು ಹತ್ಯೆ ಮಾಡಲಾಗಿದೆ. ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮಳೆ ಹಾಗೂ ಹಿಮದ ನಡುವೆಯೂ ಜಂಟಿಯಾಗಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ‘ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಸಂತ್‌ಗಢದ ಬಿಹಾಲಿ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿವೆ. ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಇನ್ನು ಮೂವರ ಸೆರೆಗೆ ಬಲೆ ಬೀಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.