Headlines

Best Indian Movies: ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಅತ್ಯುತ್ತಮ ಸಿನಿಮಾಗಳಿವು! ಅದರಲ್ಲಿ ಕನ್ನಡದ್ದೆಷ್ಟು?

Best Indian Movies: ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಅತ್ಯುತ್ತಮ ಸಿನಿಮಾಗಳಿವು! ಅದರಲ್ಲಿ ಕನ್ನಡದ್ದೆಷ್ಟು?

Best Indian Movies: ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಅತ್ಯುತ್ತಮ ಸಿನಿಮಾಗಳಿವು! ಅದರಲ್ಲಿ ಕನ್ನಡದ್ದೆಷ್ಟು?

ಈ ಕೆಳಗಿನ ಹದಿನೈದು ಸಿನಿಮಾಗಳು ಭಾರತೀಯ ಚಿತ್ರರಂಗಕ್ಕೆ ಹೊಸ ಮೆರುಗು, ಚೈತನ್ಯ ನೀಡಿವೆ. ಅವು ಯಾವುವು?

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳು ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿವೆ. ಇವು ಕಮರ್ಷಿಯಲ್‌ ಆಗಿ ಒಂದೇ ಅಲ್ಲದೆ ಭಾರತದ ಕಲಾತ್ಮಕ, ಭಾವನಾತ್ಮಕ ಪ್ರಪಂಚವನ್ನು ತೆರೆದಿಟ್ಟಿವೆ.

ರಿಷಬ್ ಶೆಟ್ಟಿಯವರ ‌ʼಕಾಂತಾರʼ ಸಿನಿಮಾವು ಕನ್ನಡ ಚಿತ್ರರಂಗದ ಹಾಗೂ ನಮ್ಮ ನಾಡಿನ ಕಥೆ ಹೇಳುವಲ್ಲಿ ಒಂದು ಸಾಂಸ್ಕೃತಿಕ ಮೈಲಿಗಲ್ಲು ಎಂದು ಹೇಳಬಹುದು. ದಕ್ಷಿಣ ಕನ್ನಡದ ಸಂಪ್ರದಾಯವನ್ನು ಭೂಮಿ ವಿವಾದ, ಮನರಂಜನೆ ಜೊತೆಗೆ ಸಂಯೋಜಿಸಿದ ಈ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿತ್ತು. ಅತಿ ಹೆಚ್ಚು ಗಳಿಕೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ದೊಡ್ಡ ಮನ್ನಣೆಯನ್ನು ತಂದಿತು.

ಜೀತು ಜೋಸೆಫ್‌ರವರ ದೃಶ್ಯಂ 2 ಸಿನಿಮಾವು ಇದರ ಮೊದಲ ಸಿನಿಮಾದ ಯಶಸ್ಸನ್ನು ಮೀರಿಸಿತು. ಮೋಹನ್‌ಲಾಲ್‌ ಅವರ ಜಾರ್ಜ್‌ಕುಟ್ಟಿಯ ಪಾತ್ರವು ಒಂದು ಸಾಮಾನ್ಯ ಕುಟುಂಬದ ಮನುಷ್ಯನ ಜಾಣತನ ಹೇಗಿದೆ ಅಂತ ಹೇಳಿತ್ತು. ಈ ಸಿನಿಮಾವು ಹಿಂದಿಯಲ್ಲಿಯೂ ರಿಮೇಕ್ ಆಗಿ, ಮಲಯಾಳಂ ಚಿತ್ರರಂಗದ ಥ್ರಿಲ್ಲರ್ ಜಾನರ್‌ಗೆ ಶಕ್ತಿ ತುಂಬಿತು.

ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಜಿ ಆರ್ ಗೋಪಿನಾಥ್‌ ಅವರ ಬಯೋಗ್ರಫಿ ಆಧಾರಿತ ಸಿನಿಮಾವಾಗಿದೆ. ಇದನ್ನು ಸುಧಾ ಕೊಂಗರಾ ನಿರ್ದೇಶನ ಮಾಡಿದ್ದರು. ನಟ ಸೂರ್ಯ, ಅಪರ್ಣಾ ಬಾಲಮುರಳಿ ಅವರ ನಟನೆಯ ಈ ಸಿನಿಮಾವು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು, ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು.

ಪ್ರಶಾಂತ್ ನೀಲ್‌ ಅವರ KGF Movie 1 ಕನ್ನಡ ಚಿತ್ರರಂಗದಲ್ಲಿ ಮೊದಲು ₹250 ಕೋಟಿ ಗಳಿಸಿದ ಸಿನಿಮಾವಾಗಿದೆ. ಯಶ್‌ ಅವರ ರಾಕಿಯ ಪಾತ್ರವು ಐಕಾನಿಕ್ ಆಗಿ, ಈ ಸಿನಿಮಾವು ಕನ್ನಡ ಚಿತ್ರರಂಗವನ್ನು ಪ್ಯಾನ್‌ ಇಂಡಿಯಾ ಮಟ್ಟಕ್ಕೆ ಕರೆದುಕೊಂಡು ಹೋಗಿದೆ.

ಎಸ್ ಎಸ್ ರಾಜಮೌಳಿಯವರ ಬಾಹುಬಲಿ ಸಿನಿಮಾವು ಭಾರತೀಯ ಚಿತ್ರರಂಗದಲ್ಲಿ ಒಂದು ದೃಶ್ಯ ಮಹಾಕಾವ್ಯ. ಈ ಸಿನಿಮಾವು ತನ್ನ ಭವ್ಯವಾದ ದೃಶ್ಯ, ಆಕ್ಷನ್ ದೃಶ್ಯ, ಭಾವನಾತ್ಮಕ ಸ್ಟೋರಿಯೊಂದಿಗೆ ಜಾಗತಿಕ ಮಟ್ಟದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಮನ್ನಣೆ ಕೊಟ್ಟಿತು.

ಯೋಗರಾಜ್ ಭಟ್‌ರವರ ಮುಂಗಾರು ಮಳೆ ಸಿನಿಮಾ ಕನ್ನಡ ಚಿತ್ರರಂಗದ ಗೋಲ್ಡನ್‌ ಸಿನಿಮಾವಾಗಿದ್ದು, ₹50 ಕೋಟಿಗ ರೂಪಾಯಿಗಳನ್ನು ಕೊಳ್ಳೆ ಹೊಡೆದಿತ್ತು. ಗಣೇಶ್, ಪೂಜಾ ಗಾಂಧಿ, ಯೋಗರಾಜ್‌ ಭಟ್‌ ಕಾಂಬಿನೇಶನ್‌ ನಿಜಕ್ಕೂ ಭಾವನಾತ್ಮಕ ಕಥೆ, ಮ್ಯೂಸಿಕ್‌, ಕ್ಯಾಮರಾ ಕೆಲಸದಿಂದ ಕನ್ನಡ ಚಿತ್ರರಂಗಕ್ಕೆ ಒಂದು ಮೈಲಿಗಲ್ಲಾಯಿತು.

ಪೂರಿ ಜಗನ್ನಾಥ್‌ರವರ ಪೋಕಿರಿ ಸಿನಿಮಾವು ಮಹೇಶ್ ಬಾಬು ಕರಿಯರ್‌ಗೆ ಒಂದು ಟರ್ನಿಂಗ್ ಪಾಯಿಂಟ್ ಆಗಿತ್ತು. ಈ ಆಕ್ಷನ್ ಸಿನಿಮಾವು ತಮಿಳು (ಪೊಕ್ಕಿರಿ), ಹಿಂದಿ, ಕನ್ನಡ (ಪೊರಕಿ), ಬಾಂಗ್ಲಾದೇಶದಲ್ಲಿ ರಿಮೇಕ್ ಆಗಿ ದೊಡ್ಡ ಯಶಸ್ಸನ್ನು ಕಂಡಿದೆ. ಈ ಸಿನಿಮಾವು ತೆಲುಗು ಚಿತ್ರರಂಗದಲ್ಲಿ ಆಕ್ಷನ್ ಜಾನರ್‌ಗೆ ಹೊಸ ಆಯಾಮ ನೀಡಿತು.

ಬಾಲಾ ನಿರ್ದೇಶನದ ಸೇತು ವಿಕ್ರಮ್‌ ಸಿನಿಮಾವಿದು. ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದು, ಆ ನಂತರದಲ್ಲಿ ಹಿಂದಿ (ತೇರೆ ನಾಮ್), ತೆಲುಗು, ಕನ್ನಡ, ಒಡಿಯಾ, ಬಂಗಾಳಿಯಲ್ಲಿ ರಿಮೇಕ್ ಆಗಿತು. ತಮಿಳು ಚಿತ್ರರಂಗದಲ್ಲಿ ಭಾವನಾತ್ಮಕ ಸಿಮಿಮಾಗೆ ಹೊಸ ಮಾನದಂಡವನ್ನು ಸೃಷ್ಟಿ ಮಾಡಿತು.

ಮಣಿರತ್ನಂ ಅವರ ಬಾಂಬೆ 1990ರ ದಶಕದಲ್ಲಿ ಮುಂಬೈನಲ್ಲಿ ನಡೆದ ಗಲಭೆಗಳನ್ನು ಹೇಳುವ ಭಾವನಾತ್ಮಕ ಕಥಾಹಂದರ. ಹಿಂದೂ-ಮುಸ್ಲಿಂ ದಂಪತಿಯ ಲವ್‌ಸ್ಟೋರಿ ಮೂಲಕ ಸಾಮಾಜಿಕ ಸಂದೇಶವನ್ನು ನೀಡಿದೆ.

ಮಣಿಚಿತ್ರತಾಳ್ ಒಂದು ಮಾನಸಿಕ ಥ್ರಿಲ್ಲರ್ ಚಿತ್ರವಾಗಿದ್ದು, ವಿಭಿನ್ನ ವ್ಯಕ್ತಿತ್ವದ ಗೊಂದಲದ ಬಗ್ಗೆ ಇದೆ. ಮಾನಸಿಕ ಗೊಂದಲದ ಬಗ್ಗೆ ಭಾರತದಲ್ಲಿ ಮೊದಲು ಪರಿಚಯಿಸಿದ ಸಿನಿಮಾವಿದು. ಈ ಸಿನಿಮಾದಲ್ಲಿ ಮೋಹನ್‌ಲಾಲ್, ಶೋಭನಾ, ಸುರೇಶ್ ಗೋಪಿ ನಟಿಸಿದ್ದರು. ತಮಿಳು, ಕನ್ನಡ, ಬಂಗಾಳಿ, ಹಿಂದಿಯಲ್ಲಿ ಕೂಡ ರಿಮೇಕ್ ಆಗಿ ಕಮರ್ಷಿಯಲ್‌ ಸಕ್ಸಸ್‌ ಕಂಡಿದೆ.

ರಾಮ್ ರಾಮ್ ಸೀತಾರಾಮ್ (ರಾಮ್ಜಿ ರಾವ್ ಸ್ಪೀಕಿಂಗ್) ಸಿದ್ದಿಕ್-ಲಾಲ್ ಜೋಡಿಯ ಒಂದು ಐತಿಹಾಸಿಕ ಕಾಮಿಡಿ ಸಿನಿಮಾ. ಈ ಸಿನಿಮಾವು ಹಿಂದಿಯ ಹೇರಾ ಫೇರಾ ಸೇರಿದಂತೆ ತಮಿಳು, ತೆಲುಗು, ಕನ್ನಡ, ಒಡಿಯಾದಲ್ಲಿ ರಿಮೇಕ್ ಆಗಿತ್ತು. ಈ ಮೂಲಕ ದೊಡ್ಡ ಯಶಸ್ಸನ್ನು ಕಂಡಿದೆ ಈ ಸಿನಿಮಾವು ಮಲಯಾಳಂ ಕಾಮಿಡಿ ಜಾನರ್‌ಗೆ ಹೊಸ ದಾರಿಯನ್ನು ಮಾಡಿಕೊಟ್ಟಿದೆ.

ಖ್ಯಾತ ಲೇಖಕ ಗಿರೀಶ್ ಕಾಸರವಳ್ಳಿಯವರ ಘಟಶ್ರಾದ್ಧ ಎಂಬ ಸಿನಿಮಾವು ಕನ್ನಡ ಚಿತ್ರರಂಗದಲ್ಲಿ ನವ್ಯ ಚಳವಳಿಯ ಆರಂಭವನ್ನು ಗುರುತಿಸಿದೆ. ಬ್ರಾಹ್ಮಣ ಸಮಾಜದಲ್ಲಿ ಬಹಿಷ್ಕಾರದ ವಿಷಯವನ್ನು ಈ ಸಿನಿಮಾ ಹೇಳಿತ್ತು. ಈ ಸಿನಿಮಾವು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದು, ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮನ್ನಣೆಯನ್ನು ತಂದು ಕೊಟ್ಟಿದೆ.

ಯು ಆರ್ ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಸಂಸ್ಕಾರ ಸಿನಿಮಾಕ್ಕೆ ಪಟ್ಟಾಭಿರಾಮ ರೆಡ್ಡಿಯವರ ನಿರ್ದೇಶನವಿದೆ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ತರಂಗವನ್ನು ಸೃಷ್ಟಿಸಿತು. ಬ್ರಾಹ್ಮಣ ಸಮಾಜದ ಆಚಾರ-ವಿಚಾರಗಳನ್ನು ಪ್ರಶ್ನಿಸಿದ ಈ ಸಿನಿಮಾವು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದು, ಕನ್ನಡದಲ್ಲಿ ಕಲಾತ್ಮಕ ಚಿತ್ರಗಳಿಗೆ ದಾರಿಮಾಡಿಕೊಟ್ಟಿತು.

ಎಂ ಜಿ ರಾಮಚಂದ್ರನ್ ನಟಿಸಿದ ಈ ಸಿನಿಮಾವು ಒಂದು ಸಾಮಾಜಿಕ ಸಂದೇಶದೊಂದಿಗೆ ವಾಣಿಜ್ಯ ಯಶಸ್ಸನ್ನು ಸಾಧಿಸಿದೆ. ಒಡಹುಟ್ಟಿದವರ ನಡುವಿನ ಬಾಂಧವ್ಯ ಹಾಗೂ ಸಾಮಾಜಿಕ ಶೋಷಣೆಯ ವಿರುದ್ಧದ ಹೋರಾಟವ ಈ ಸಿನಿಮಾದಲ್ಲಿದೆ. ಈ ಸಿನಿಮಾವು ಆಮೇಲೆ ರಾಮ್ ಔರ್ ಶ್ಯಾಮ್ ಎಂಬ ಹಿಂದಿ ರಿಮೇಕ್‌ ಆಗಿದೆ. ಈ ಚಿತ್ರದಲ್ಲಿ ದಿಲೀಪ್ ಕುಮಾರ್ ನಟಿಸಿದ್ದರು. ಇದು ತಮಿಳು ಚಿತ್ರರಂಗದ ಸಾಮಾಜಿಕ ಸಿನಿಮಾಗಳ ಒಂದು ಉದಾಹರಣೆಯಾಯಿತು.

ಕೆವಿ ರೆಡ್ಡಿ ನಿರ್ದೇಶನದ ‘ಮಾಯಾಬಜಾರ್’ ತೆಲುಗು ಇಂಡಸ್ಟ್ರಿಯ ಐತಿಹಾಸಿಕ ಸಿನಿಮಾವಾಗಿದೆ. ಮಹಾಭಾರತದ ಕಥೆಯ ಒಂದು ಭಾಗವನ್ನು ಆಧರಿಸಿದ ಈ ಸಿನಿಮಾವು ತನ್ನ ವಿಶಿಷ್ಟ ವಿಷುಯಲ್ ಎಫೆಕ್ಟ್ಸ್, ಸಂಗೀತ, ಎನ್.ಟಿ. ರಾಮರಾವ್, ಎಸ್.ವಿ. ರಂಗರಾವ್ ಅವರ ನಟನೆಯಿಂದ ಗಮನ ಸೆಳೆದಿದೆ. ಈ ಸಿನಿಮಾವು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಫ್ಯಾಂಟಸಿ ಜಾನರ್‌ಗೆ ಒಂದು ಮಾನದಂಡವನ್ನು ಹಾಕಿಕೊಟ್ಟಿತು.

Source link

Leave a Reply

Your email address will not be published. Required fields are marked *