Headlines

22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ನಟ ಶಬರೀಶ್

22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ನಟ ಶಬರೀಶ್


ನಟ ಶಬರೀಶ್ ಶೆಟ್ಟಿ ಅವರಿಗೆ ನಿರ್ದೇಶಕ ನಂದ ಕಿಶೋರ್ (Nanda Kishore) 22 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶಬರೀಶ್ ಶೆಟ್ಟಿ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಬದಲು ವಾಣಿಜ್ಯ ಮಂಡಳಿಗೆ (Karnataka Film Chamber Of Commerce) ಬಂದಿರುವುದು ಯಾಕೆ ಎಂಬದನ್ನು ಶಬರೀಶ್ ಶೆಟ್ಟಿ ವಿವರಿಸಿದ್ದಾರೆ. ‘ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂದ ಕಿಶೋರ್ ನನ್ನ ಬಳಿ ಹಣ ಪಡೆದರು. ಆದರೆ ನನಗೆ ಮೋಸ ಆಗಿದೆ. ಚಿತ್ರರಂಗ ಒಂದು ಕುಟುಂಬದಂತೆ. ಹಾಗಾಗಿ ಕುಟುಂಬದ ಒಳಗೆ ಮೊದಲು ಸಮಸ್ಯೆ ಬಗೆಹರಿಸಿಕೊಳ್ಳೋಣ ಅಂತ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ. ಇಲ್ಲಿ ನ್ಯಾಯ ಸಿಗದೇ ಇದ್ದರೆ ಕಾನೂನಿನ ಮೊರೆ ಹೋಗುತ್ತೇನೆ’ ಎಂದು ಶಬರೀಶ್ ಶೆಟ್ಟಿ (Shabarish Shetty) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.



Source link

Leave a Reply

Your email address will not be published. Required fields are marked *