ಒಳ್ಳೆ ಹಾರರ್ ಸಿನಿಮಾ ಹುಡುಕ್ತಿದ್ದೀರಾ? ಹಾಗಾದ್ರೆ ’28 ಇಯರ್ಸ್ ಲೇಟರ್’ ಸಿನಿಮಾ ನೋಡಬಹುದು. ಚಿಕ್ಕ ಸಿನಿಮಾ ಆಗಿ ಬಿಡುಗಡೆಯಾಗಿ ದೊಡ್ಡ ಗೆಲುವು ಕಂಡಿದೆ. ಹಾರರ್ ಎಲಿಮೆಂಟ್ಸ್ ತುಂಬಾನೇ ಇವೆ. ಗಟ್ಟು ಗುಂಡಿಗೆ ಇದ್ದರಷ್ಟೇ ನೋಡಿ..

ಒಳ್ಳೆ ಹಾರರ್, ಥ್ರಿಲ್ಲರ್ ಸಿನಿಮಾ ಹುಡುಕ್ತಿದ್ದೀರಾ? ಹಾಗಾದ್ರೆ ’29 ಇಯರ್ಸ್ ಲೇಟರ್’ (28 years Later) ಸಿನಿಮಾ ನೋಡಬಹುದು. ಆದರೆ, ಈ ಸಿನಿಮಾ ನೋಡೋಕು ಮುಂಚೆ ನಿಮಗೆ ಧೈರ್ಯ ಇದೆಯೇ, ಗಟ್ಟಿ ಗುಂಡಿಗೆ ಇದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಿ. ರಕ್ತಪಾತ, ಹಿಂಸೆ ಜಾಸ್ತಿ ಇದೆ. ಥ್ರಿಲ್ಲರ್ ಎಲಿಮೆಂಟ್ಸ್ ಕೂಡ ಜಾಸ್ತಿನೇ ಇವೆ. ’28 ಡೇಸ್ ಲೇಟರ್’ ಸಿನಿಮಾಗೆ ಇದು ಮುಂದುವರಿದ ಭಾಗ. ಹಾಲಿವುಡ್ ಹಾರರ್ ಇಂಡಸ್ಟ್ರಿಗೆ ತುಂಬಾ ಇಷ್ಟವಾದ ಸಿನಿಮಾ ಇದು.

2002 ರಿಂದ ಕಥೆ ಶುರುವಾಗುತ್ತೆ. ಆ ವರ್ಷ ಬಂದ ರೇಜ್ ವೈರಸ್ ನಿಯಂತ್ರಣಕ್ಕೆ ಬರುತ್ತದೆ. ಆಮೇಲೆ 28 ವರ್ಷಗಳ ನಂತರ ಏನಾಯ್ತು ಅನ್ನೋದು ಈ ಕಥೆ. ಬ್ರಿಟನ್‌ನ ಒಂದು ದ್ವೀಪದಲ್ಲಿ ಕೆಲವರು ವೈರಸ್‌ನಿಂದ ಬಚಾವ್ ಆಗಿ ಪ್ರಾಣ ಉಳಿಸ್ಕೊಂಡಿರುತ್ತಾರೆ. ಹೀರೋ ಜೇಮಿ ಮಗ ಸ್ಪೈಕ್ ಜೊತೆ ಬೇಟೆಗೆ ಹೋಗುತ್ತಾನೆ. ಇವರಿಬ್ಬರೂ ಸಿನಿಮಾದ ಮುಖ್ಯ ಪಾತ್ರಗಳು.

ಆಗ ಅವರಿಗೆ ಅಲ್ಲಿ ಆಲ್ಫಾ ಅನ್ನೋ ವೈರಸ್ ಇರುವ ನಾಯಕ ಸಿಗುತ್ತಾನೆ. ಅವನು ನೋಡೋಕೆ ತುಂಬಾ ಭಯಂಕರವಾಗಿರುತ್ತಾನೆ. ಇವರಿಬ್ಬರ ನಡುವೆ ಥ್ರಿಲ್ಲಿಂಗ್ ಸನ್ನಿವೇಶಗಳು ನಡೆಯುತ್ತವೆ. ಇದು ಸೈಕಲಾಜಿಕಲ್ ಹಾರರ್ ಸಿನಿಮಾ. ಹಾಗಾಗಿ ಮಾನಸಿಕವಾಗಿ ಸ್ಟ್ರಾಂಗ್ ಇರೋರೆ ಈ ಸಿನಿಮಾ ನೋಡಿ. ಇಲ್ಲಿ ಮಾನವ ಸಂಬಂಧಗಳು, ಭಾವನೆಗಳು ಕೂಡ ಜಾಸ್ತಿ ಇರುತ್ತವೆ.

ಐಎಂಡಿಬಿಯಲ್ಲಿ ಈ ಸಿನಿಮಾಗೆ 6.9 ರೇಟಿಂಗ್ ಇದೆ. ಈ ಸಿನಿಮಾ ಮಾಡೋಕೆ 60 ರಿಂದ 75 ಮಿಲಿಯನ್ ಡಾಲರ್ ಖರ್ಚಾಗಿದೆ. ವಿಶ್ವದಾದ್ಯಂತ 150 ಮಿಲಿಯನ್ ಡಾಲರ್ ಗಳಿಸಿದೆ. ಕೆಲವು ಮುಖ್ಯವಾದ ಆಕ್ಷನ್ ಸೀನ್‌ಗಳನ್ನ 20 ಐಫೋನ್‌ಗಳಲ್ಲಿ ಚಿತ್ರೀಕರಿಸಿದ್ದಾರೆ. ದೊಡ್ಡ ಕ್ಯಾಮೆರಾಗಳನ್ನ ಬಳಸದೆ ಐಫೋನ್‌ಗಳಲ್ಲಿ ಶೂಟ್ ಮಾಡಿದ್ರೂ ಸಿನಿಮಾ ಚೆನ್ನಾಗಿ ಬಂದಿದೆ.

ನೀವು ’28 ಇಯರ್ಸ್ ಲೇಟರ್’ ಸಿನಿಮಾ ನೋಡಬೇಕು ಅಂದರೆ ‘ಅಮೆಜಾನ್ ಪ್ರೈಮ್ ಮೀಡಿಯಾ’ದಲ್ಲಿ ಹುಡುಕಿ. ಆಪಲ್ ಟಿವಿ ಪ್ಲಸ್, ಬುಕ್ ಮೈ ಶೋ ಸ್ಟ್ರೀಮಿಂಗ್‌ನಲ್ಲೂ ನೋಡಬಹುದು. ಈಗ ಈ ಸಿನಿಮಾ ಬಾಡಿಗೆಗೆ ಸಿಗುತ್ತದೆ. ಮುಂದೆ ಫ್ರೀಯಾಗಿ ನೋಡೋ ಅವಕಾಶ ಇರಬಹುದು.

Source link
ಐಫೋನ್‌ನಲ್ಲಿ ಚಿತ್ರೀಕರಿಸಿದ ’28 ಇಯರ್ಸ್ ಲೇಟರ್’ ಹಾರರ್ ಸಿನಿಮಾ: ಗಟ್ಟಿ ಗುಂಡಿಗೆ ಇದ್ದರಷ್ಟೇ ನೋಡಿ!