ಕಾರವಾರ, ಜೂನ್ 28: ಉತ್ತರ ಕನ್ನಡ (Uttar Kannada) ಅಬಕಾರಿ ಇಲಾಖೆ (Excise Department) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗೋವಾದಿಂದ (Goa) ಅಕ್ರಮವಾಗಿ ರಾಜ್ಯಕ್ಕೆ ಬರುತ್ತಿದ್ದ 4,37,265 ರೂ. ಮೌಲ್ಯದ ಮದ್ಯ (Alcohol) ಜಪ್ತಿ ಮಾಡಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು 640 ಲೀ. ಮದ್ಯ, 72 ಲೀ. ಬಿಯರ್ ಕ್ಯಾನ್ಗಳು ಸೇರಿಂದತೆ ಎರಡು ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಕಾರವಾರ ಅಬಕಾರಿ ಇಲಾಖೆ ಡಿವೈಎಸ್ಪಿ ರಮೇಶ್ ಭಜಂತ್ರಿ ಮಾತನಾಡಿ, ಒಂದೂವರೆ ವರ್ಷದ ಬಳಿಕ ಅಬಕಾರಿ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ. ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಾಟ ಮಾಡುತಿದ್ದ ಮದ್ಯವನ್ನು ಅಬಕಾರಿ ಇಲಾಖೆ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ ಎಂದರು.
4,37,265 ರೂ. ಮೌಲ್ಯದ 640 ಲೀಟರ್ ಗೋವಾ ಮದ್ಯ ಮತ್ತು 72 ಲೀಟರ್ ಬಿಯರ್ ಕ್ಯಾನ್ಗಳು ಹಾಗೂ 2,80,000 ರೂ. ಮೌಲ್ಯದ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 7,17,265 ರೂ. ಮೌಲ್ಯದ ಗೋವಾ ಮದ್ಯ ಹಾಗೂ ವಾಹನ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಆತಂಕ: ತಜ್ಞರ ತಂಡ ಹೇಳಿದ್ದೇನು? ಇಲ್ಲಿದೆ ವಿವರ
ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ದಾಳಿ ಮಾಡಲು ಆಗುತ್ತಿಲ್ಲ. ಮಳೆಯಲ್ಲೇ ಕಷ್ಟಪಟ್ಟು ದಾಳಿ ನಡೆಸಿ ವಶಕ್ಕೆ ಪಡೆದಿದ್ದೇವೆ. ಸಿಬ್ಬಂದಿ ಕೊರತೆಯಿಂದ ದಾಳಿ ಮಾಡಿ ಗೋವಾ ಮದ್ಯ ವಶಪಡಿಸಿಕೊಳ್ಳಲಾಗುತ್ತಿಲ್ಲ. ಗೋವಾದಿಂದ ಸಮುದ್ರ ಮಾರ್ಗವಾಗಿ ಬರುವ ಮಧ್ಯ ಇದುವರೆಗೂ ಯಾವುದು ಸಿಕ್ಕಿಲ್ಲ. ಸೂಕ್ತ ಬೋಟ್ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಕಾರ್ಯಾಚರಣೆ ಕಷ್ಟವಾಗಿದೆ. ಬಂದರು ಹಾಗೂ ಕಡಲ ತೀರದಲ್ಲಿ ಆಗಾಗ ಹೋಗಿ ಚೆಕ್ ಮಾಡುತ್ತಿರುತ್ತೇವೆ. ಗೋವಾ ಮದ್ಯ ರಾಜಾರೋಷವಾಗಿ ಬಂದರೂ ತಡೆಯುವುದಕ್ಕೆ ನಮ್ಮಿಂದ ಆಗಲ್ಲ ಎಂದು ಅಳಲು ತೊಡಿಕೊಂಡರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ