ಐಐಎಂ ಪದವೀಧರ ದೇವ್ ತನೇಜಾ ತಮ್ಮ ಸ್ಟಾರ್ಟ್‌ಅಪ್‌ನಲ್ಲಿ ನಾಲ್ವರು ಐಐಟಿ ಪದವೀಧರರನ್ನು ತಿರಸ್ಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು: IIMನಲ್ಲಿ ಓದಿರುವ ದೇವ್ ತನೇಜಾ ಎಂಬ ಯುವಕ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಸ್ಟಾರ್ಟ್‌ಅಪ್ ಕಂಪನಿ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ನಾಲ್ವರು ಐಐಟಿ ಪದವೀಧರರನ್ನು ರಿಜೆಕ್ಟ್ ಮಾಡಿರುವ ವಿಷಯವನ್ನು ದೇವ್ ತನೇಜಾ ಹಂಚಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ಈ ನಾಲ್ವರು ರಿಜೆಕ್ಟ್ ಆಗಿದ್ದೇಕೆ ಎಂಬ ವಿಷಯವನ್ನು ದೇವ್ ತನೇಜಾ ಹಂಚಿಕೊಂಡಿದ್ದಾರೆ. ದೇವ್ ತನೇಜಾ ಸಂದರ್ಶನ ನಡೆಸಿರುವ ಸ್ಟಾರ್ಟ್‌ಅಪ್ ಕಂಪನಿಯ ಸ್ಥಾಪಕರಾಗಿದ್ದಾರೆ.
ಸ್ಟಾರ್ಟ್ಅಪ್ ನಡೆಸುತ್ತಿರುವ ದೇವ್ ತನೇಜಾ, ಈ ವಿಡಿಯೋದಲ್ಲಿ ನಾಲ್ವರು ಐಐಟಿ ಪದವೀಧರನ್ನು ರಿಜೆಕ್ಟ್ ಮಾಡಿದ್ದೇಕೆ ಎಂಬ ಕಾರಣವನ್ನು ತಿಳಿಸಿದ್ದಾರೆ. ಸಂದರ್ಶನಕ್ಕೆ ಬಂದ ಈ ನಾಲ್ವರು ಐಐಟಿಯಲ್ಲಿ ಓದಿದ್ದರೂ ತಮಗೆ ಅವರ ವೈಬ್ಸ್ ಇಷ್ಟವಾಗಲಿಲ್ಲ. ಈ ನಾಲ್ವರ ವೈಬ್ಸ್ ತನ್ನೊಂದಿಗೆ ಹೊಂದಾಣಿಕೆಯಾಗದ ಕಾರಣ ಅವರನ್ನು ರಿಜೆಕ್ಟ್ ಮಾಡಲಾಯ್ತು ಎಂದು ತಿಳಿಸಿದ್ದಾರೆ.
ಸಂದರ್ಶನಕ್ಕೆ ಬಂದಿದ್ದ ನಾಲ್ವರು ಐಐಟಿ ಅಭ್ಯರ್ಥಿಗಳು ತುಂಬಾ ಬುದ್ದಿವಂತರಾಗಿದ್ದರು. ನಾನು ಅವರ ಕಠಿಣ ಪರಿಶ್ರಮವನ್ನು ಖಂಡಿತವಾಗಿಗೂ ಗೌರವಿಸುತ್ತೇನೆ. ಆದರೆ ನನಗೆ ಅವರ ವೈಬ್ ಮಾತ್ರ ಇಷ್ಟವಾಗಲಿಲ್ಲ. ಆ ವೈಬ್ ಏನೆಂದು ನಾನು ಸ್ಪಷ್ಟವಾಗಿ ಹೇಳಲಾರೆ. ಕೆಲಸ ಮಾಡುವಾಗ ವೈಬ್ಸ್ ಮ್ಯಾಚ್ ಆಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ಈ ವಿಡಿಯೋದಲ್ಲಿ ದೇವ್ ತನೇಜಾ, ತಮ್ಮ ಅಭ್ಯರ್ಥಿಗಳಲ್ಲಿ ಏನೇನು ಹುಡುಕುತ್ತಿದ್ದಾರೆ ಎಂಬುದನ್ನು ಹೇಳಿದ್ದಾರೆ.
ಯಾರು ಈ ದೇವ್ ತನೇಜಾ?
ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ದೇವ್ ತನೇಜಾ ಬೆಂಗಳೂರಿನ ಐಐಎಂನಿಂದ ಕಾರ್ಯತಂತ್ರದ ನಿರ್ವಹಣೆಯ (Strategic Management) ಕುರಿತು ಆನ್‌ಲೈನ್ ಕೋರ್ಸ್ ಮಾಡಿದ್ದಾರೆ. ದೇವ್ ತನೇಜಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿಗಳ ಬಗ್ಗೆ ಮಾತನಾಡಿದ್ದು ತಪ್ಪೆಂದು ಬಹುತೇಕರು ವಾದಿಸಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಬಹುತೇಕರು ದೇವ್ ತನೇಜಾ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಆ ನಾಲ್ವರನ್ನು ಮೇಂಟೈನ್ ಮಾಡಲು ಸಾಧ್ಯವಾಗದ ಕಾರಣ ರಿಜೆಕ್ಟ್ ಮಾಡಿದ್ದೀರಿ ಎಂದು ಅರ್ಥ ಮಾಡಿಕೊಳ್ಳಿ. ನೀವು ಐಐಟಿಯನ್ನರನ್ನು ತಿರಸ್ಕರಿಸಿದ್ದೀರಿ ಏಕೆಂದರೆ ನೀವು ಅವರನ್ನು ಪಡೆಯಲು ಸಾಧ್ಯವಿಲ್ಲ. ಬಹುಶಃ ಅವರೇ ನಿಮ್ಮನ್ನು ತಿರಸ್ಕರಿಸಿರಬಹುದು ಅಲ್ಲವಾ ಎಂದು ವ್ಯಂಗ್ಯ ಮಾಡಿದ್ದಾರೆ. ನಿಮ್ಮದು ಪಕ್ಷಪಾತ ಧೋರಣೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಕೆಲ ಬಳಕೆದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಪಕ್ಷಪಾತ ಧೋರಣೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ದೇವ್ ತನೇಜಾ, ನನಗೆ ಐಐಟಿಯನ್ನರು ಅಂದ್ರೆ ಇಷ್ಟ. ಆದ್ರೆ ಈ ನಾಲ್ವರ ವೈಬ್ ಮಾತ್ರ ಇಷ್ಟವಾಗಲಿಲ್ಲ. ನನ್ನ ಮನಸ್ಥಿತಿಗೆ ಈ ನಾಲ್ವರು ಅಭ್ಯರ್ಥಿಗಳು ಹೊಂದಾಣಿಕೆಯಾಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದೇವ್ ತನೇಜಾ ವಿರುದ್ಧ ಐಐಟಿಯನ್ನರು ವಾಗ್ದಾಳಿ
ಐಐಟಿ ಪದವೀಧರರು ಎಂದಿಗೂ ಸ್ಟಾರ್ಟ್‌ಅಪ್ ಕಂಪನಿಗಳಿಗೆ ಸೂಕ್ತರಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಐಐಟಿ ಪದವೀಧರರು ತಮ್ಮದೇ ಸ್ಟಾರ್ಟ್‌ಅಪ್ ಆರಂಭಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅಂತ ಹಲವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ನಿಮಗೆ ಅವರ ವೈಬ್ ಹೊಂದಿಕೆಯಾಗಿಲ್ಲ ಅಂತ ಮಾತ್ರ ಹೇಳಬಹುದು. ಆದ್ರೆ ಐಐಟಿ ಎಂದು ಬಳಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಲೈಕ್ಸ್ ಪಡೆದುಕೊಳ್ಳಲು ಪ್ರಯತ್ನಿಸಿದ್ದೀರಿ ಎಂದು ಅರ್ಥವಾಗುತ್ತದೆ. ಐಐಟಿ ಎಂಬ ಪದ ಬಳಕೆಗಾಗಿಯೇ ನಿಮ್ಮ ರೀಲ್ಸ್ ವೈರಲ್ ಆಗ್ತಿದೆ ಎಂಬುವುದು ನಿಮಗೆ ಅರ್ಥವಾಗಲಿ ಎಂದು ಚಾಟಿ ಬೀಸಿದ್ದಾರೆ. ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ದೇವ್ ತನೇಜಾ ವಿಡಿಯೋ ಡಿಲೀಟ್ ಮಾಡಿದ್ದಾರೆ.