Headlines

ಇಂದು ಈ ನಾಲ್ಕು ಮ್ಯಾಜಿಕ್ ನಡೆದರೆ, ಭಾರತ ಓವಲ್ ಟೆಸ್ಟ್ ಗೆಲ್ಲೋದು ಫಿಕ್ಸ್!

ಇಂದು ಈ ನಾಲ್ಕು ಮ್ಯಾಜಿಕ್ ನಡೆದರೆ, ಭಾರತ ಓವಲ್ ಟೆಸ್ಟ್ ಗೆಲ್ಲೋದು ಫಿಕ್ಸ್!

ಇಂದು ಈ ನಾಲ್ಕು ಮ್ಯಾಜಿಕ್ ನಡೆದರೆ, ಭಾರತ ಓವಲ್ ಟೆಸ್ಟ್ ಗೆಲ್ಲೋದು ಫಿಕ್ಸ್!

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ದಿನದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೆಸ್ಟ್ ಪಂದ್ಯದಲ್ಲಿ ಈ 4 ಮ್ಯಾಜಿಕ್ ನಡೆದರೆ, 5ನೇ ಟೆಸ್ಟ್ ಪಂದ್ಯ ಭಾರತದ ಪಾಲಾಗಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ರೋಚಕ ಘಟ್ಟ ತಲುಪಿದೆ. ಈ ಟೆಸ್ಟ್ ಪಂದ್ಯವನ್ನು ಗೆಲ್ಲಲು ಎರಡೂ ತಂಡಗಳಿಗೆ ಈಗಲೂ ಸಮಾನ ಅವಕಾಶವಿದೆ.

374 ರನ್ ಗುರಿ ಬೆನ್ನತ್ತಿರುವ ಆತಿಥೇಯ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್ ಬಾರಿಸಿದ್ದು, ಕೊನೆಯ ದಿನದಾಟದಲ್ಲಿ ಗೆಲ್ಲಲು ಇನ್ನೂ 35 ರನ್ ಅಗತ್ಯವಿದೆ.

ಇನ್ನೊಂದಡೆ ಪ್ರವಾಸಿ ಭಾರತ ತಂಡವು ಓವಲ್ ಟೆಸ್ಟ್ ಪಂದ್ಯವನ್ನು ಗೆಲ್ಲಲು ಕೊನೆಯ ದಿನ ಕೇವಲ ಇಂಗ್ಲೆಂಡ್‌ನ 4 ವಿಕೆಟ್ ಕಬಳಿಸಬೇಕಿದೆ. ಇದು ಸಾಧ್ಯವಾಗಬೇಕಿದ್ರೆ ಈ ನಾಲ್ಕು ಮ್ಯಾಜಿಕ್ ನಡೆಯಬೇಕಿದೆ.

ಐದನೇ ದಿನದಾಟದ ಆರಂಭದ ಮೊದಲ ಎಸೆತದಿಂದಲೇ ಟೀಂ ಇಂಡಿಯಾ ಬೌಲರ್‌ಗಳು ಆಕ್ರಮಣಕಾರಿ ದಾಳಿ ನಡೆಸಬೇಕು. ಆಗ ಒತ್ತಡದಲ್ಲಿ ಇಂಗ್ಲೆಂಡ್ ಬಾಲಂಗೋಚಿಗಳ ವಿಕೆಟ್ ಪತನವಾಗುವ ಸಾಧ್ಯತೆ ಹೆಚ್ಚಿರಲಿದೆ.

ಭಾರತ ತಂಡದ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ದ್ ಕೃಷ್ಣ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಇನ್ನು 4 ಓವರ್ ಬಳಿಕ ಹೊಸ ಚೆಂಡು ಸಿಗುವುದರಿಂದ ಈ ವೇಗಿಗಳ ಇಂಗ್ಲೆಂಡ್ ಕೆಳಕ್ರಮಾಂಕವನ್ನು ಆಲೌಟ್ ಮಾಡುವಲ್ಲಿ ಸಫಲವಾಗುವ ಲಕ್ಷಣಗಳಿವೆ.

ಮಾಡು ಇಲ್ಲವೇ ಮಡಿ ಎನ್ನುವಂತಹ ರೀತಿಯ ಮೈಂಡ್‌ಸೆಟ್‌ನೊಂದಿಗೆ ಕೊನೆಯ ದಿನ ಭಾರತ ಕಣಕ್ಕಿಳಿಯಬೇಕು. ಕೇವಲ ಬೌಲಿಂಗ್ ಮಾತ್ರವಲ್ಲದೇ ಫೀಲ್ಡಿಂಗ್‌ ಸೇರಿದಂತೆ ಭಾರತದ ಎಲ್ಲಾ ಆಟಗಾರರು 100% ಎಫರ್ಟ್ ಹಾಕಿದರೆ, ಕೊನೆಯ ಟೆಸ್ಟ್ ಗೆಲ್ಲುವುದು ಕಷ್ಟವೇನಲ್ಲ.

ಸಿಂಗಲ್ ರನ್ ಬಿಟ್ಟುಕೊಡುವುದನ್ನು ಆದಷ್ಟು ತಡೆಯಬೇಕು. ಗುರಿ ಕೇವಲ 35 ರನ್ ಆಗಿರುವುದರಿಂದ ಇಂಗ್ಲೆಂಡ್ ಮೇಲೆ ಒತ್ತಡ ಹೇರಿದಷ್ಟು ಭಾರತಕ್ಕೆ ಲಾಭವಾಗಲಿದೆ. ಹೀಗಾಗಿ ಈ ನಾಲ್ಕು ಟ್ರಿಕ್ಸ್ ಸರಿಯಾಗಿ ಬಳಸಿದರೆ, ಭಾರತ ಕೊನೆಯ ಟೆಸ್ಟ್ ಗೆಲ್ಲಬಹುದು.

Source link

Leave a Reply

Your email address will not be published. Required fields are marked *