2026 ರ ಮೊದಲ ತಿಂಗಳು ಇದಾಗಿದ್ದರೆ ನಾಲ್ಕು ಗ್ರಹಗಳ ಮಹತ್ತ್ವದ ಬದಲಾವಣೆಯಾಗಲಿದೆ. ಸಂಗಾತಿ, ಸುಖ, ತಂದೆ, ಸರ್ಕಾರ, ಸಾಹೋದರ್ಯ, ಪರಾಕ್ರಮ, ವಾಕ್ಚಾತುರ್ಯ, ಮೊದಲಾದ ಅನೇಕ ಸಂಗತಿಗಳು ನಡೆಯುತ್ತವೆ, ಶುಭವೇ ಈ ತಿಂಗಳು ಅಧಿಕವಾಗಿದೆ. ಬೌದ್ಧಿಕವಾದ ನಿಲುವಿನಲ್ಲಿ ನಿಂತು ತಮ್ಮ ಕಾರ್ಯವನ್ನು ಮಾಡುವುದು ಶ್ರೇಯಸ್ಕರ.
ಮೇಷ ರಾಶಿ :
ಹೊಸ ವರ್ಷದ ಮೊದಲ ತಿಂಗಳಲ್ಲಿ ಮೊದಲ ರಾಶಿಯವರಿಗೆ ಶುಭ. ರಾಶಿಯ ಅಧಿಪತಿ ನವಮದಿಂದ ದಶಮಕ್ಕೆ ಹೋಗಲಿದೆ ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿ, ಸ್ಥಾನಮಾನ ಪ್ರಾಪ್ತಿಯಾಗಲಿದೆ. ವಿವಾಹ ಅಥವಾ ಪ್ರೇಮ ವಿಚಾರಗಳು ಕೈಗೂಡುವುದು. ಕುಜ ದಶೆ ಧೈರ್ಯ ಸ್ಥೈರ್ಯಗಳನ್ನು ವೃದ್ಧಿಸುವುದು. ಉದ್ಯಮದಲ್ಲಿ ಆಲಸ್ಯ ಬರಲಿದೆ. ವಿದೇಶದ ವ್ಯಾಪಾರಕ್ಕೆ ಪ್ರಯತ್ನಿಸಿದರೆ ಸಫಲತೆಯನ್ನು ಕಾಣಬಹುದು. ನೀರಿನ ವ್ಯಾಪಾರಕ್ಕೆ ಮಾರುಕಟ್ಟೆ ತೆರೆದುಕೊಳ್ಳುವುದು. ಆರ್ಥಿಕ ಅಭಿವೃದ್ಧಿಗೆ ಶನಿಸ್ತೋತ್ರ ಮಾಡಿ.
ವೃಷಭ ರಾಶಿ :
ರಾಶಿ ಚಕ್ರದ ಎರಡನೇ ರಾಶಿಯವರಿಗೆ ತಿಂಗಳು ನಿಮಗೆ ಶುಭ. ರಾಶಿಯ ಅಧಿಪತಿ ಅಷ್ಟಮದಲ್ಲಿ ಆರ್ಥಿಕ ನಷ್ಟ, ಅಪಮಾನ, ವಾಹನದಿಂದ ನೋವು ಅನುಭವಿಸಿದವರಿಗೆ ಎಲ್ಲವೂ ಮಾಯಾಜಾಲದಂತೆ ಕಾಣಿಸುತ್ತದೆ. ವಿವಾಹಕ್ಕೆ ಪ್ರೇಮವು ಬಲ ತುಂಬುವುದು. ಶನಿ ದಶೆ ಉತ್ತಮವಾಗಿದ್ದು ಉದ್ಯೋಗದಲ್ಲಿ ಬೆಳವಣಿಗೆ ಯಥಾಪ್ರಕಾರವಾಗಿ ಮುಂದುವರಿಯುತ್ತದೆ. ಬರುವ ಹಣವೆಲ್ಲ ಕೈಸೇರಿ ಸಂತೋಷ ನಿಮ್ಮದಾಗುವುದು. ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲಾಗುವಂತೆ ನೋಡಿಕೊಳ್ಳಿ.
ಮಿಥುನ ರಾಶಿ :
ರಾಶಿಯ ಅಧಿಪತಿ ಅಷ್ಟಮದಲ್ಲಿ ಇರಲಿದೆ ನಿಮಗೆ ಅಶುಭ. ಸಪ್ತಮದಲ್ಲಿ ಇದ್ದಾಗಿನ ಧೈರ್ಯ, ವರ್ಚಸ್ಸು, ಮಾತುಗಾರಿಕೆ ಎಲ್ಲ ಕಡೆ ಗೆಲವಿದ್ದು ಈಗ ಅದೆಲ್ಲವೂ ಕಾಣಿಸದು. ಬುಧ ದಶೆಯವರಿಗೆ ಇದರ ಅತಿಯಾದ ಅನುಭವ. ವಿವಾಹಕ್ಕೆ ಬಂಧುಗಳಿಂದ ಆಗಲಿದೆ. ಈ ತಿಂಗಳ ಗೃಹೋದ್ಯಮ ಲಾಭದಾಯಕವಾಗಿದ್ದು, ಶಕ್ತಿ ಹೆಚ್ಚುವುದು. ಲೇಖನ, ಸಾಹಿತ್ಯ, ಭಾಷಣ ಕ್ಷೇತ್ರಕ್ಕೆ ನಿಮಗೆ ಒತ್ತಡ ಬರಲಿದೆ. ಗಣಪತಿಯನ್ನು ಯಶಸ್ಪ್ರಾಪ್ತಿಗೆ ಪ್ರಾರ್ಥಿಸಿ.
ಕರ್ಕಾಟಕ ರಾಶಿ :
ಈ ರಾಶಿಯವರಿಗೆ ಜನವರಿಯಲ್ಲಿ ಮಿಶ್ರಫಲ. ಸಪ್ತಮದಲ್ಲಿ ನಾಲ್ಕು ಗ್ರಹದ ಸಮಾಗಮದಿಂದ ಶುಭವಾಗಿದ್ದರೂ ಸಂಗಾತಿಯು ಪ್ರಬಲವಾಗಿರುವರು. ಕುಜನು ಉಚ್ಚಸ್ಥಾನದಲ್ಲಿದ್ದು ಇದರ ಪ್ರಭಾವದಿಂದ ತಂದೆಗೂ ಪರಿಣಾಮ ಬೀರುತ್ತದೆ. ಆನ್ ಲೈನ್ ಮೂಲಕ ವ್ಯಾಪರಕ್ಕೆ ಹೆಚ್ಚು ಮಹತ್ತ್ವ ಬರಲಿದೆ. ಬೇಕಾದ ವ್ಯವಸ್ಥೆ ಮಾಡಿರಿ. ಶನಿ ಹಾಗೂ ಕುಜ ದಶೆ ನಿಮಗೆ ಉದ್ಯಮ ಹಾಗೂ ದಾಂಪತ್ಯ ಜೀವನಕ್ಕೆ ಪೂರಕವಾಗಿದೆ. ಶಿವಪಾರ್ವತಿಯರು ಒಟ್ಟಾಗಿರುವ ಸ್ಥಳಕ್ಕೆ ಹೋಗಿ.
ಸಿಂಹ ರಾಶಿ :
ರಾಶಿ ಚಕ್ರದ ಐದನೇ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ಅಶುಭ. ರಾಶಿಯ ಅಧಿಪತಿ ಶತ್ರುವಿನ ರಾಶಿಯಲ್ಲಿ ಇರುವುದರ ಜೊತೆಗೆ ಶತ್ರುಸ್ಥಾನದಲ್ಲಿಯೂ ಇರುವ ಕಾರಣ ನಿಮ್ಮ ಗುಣಗಳೇ ನಿಮಗೆ ಶತ್ರುಗಳು. ಸ್ವಭಾವದ ಕಾರಣ ಎಲ್ಲರಿಂದ ದೂರವಾಗಬೇಕಾಗುವುದು. ರವಿ ದಶೆ ನಿಮಗೆ ಸಂಪೂರ್ಣ ನಕಾರಾತ್ಮಕ ಅಂಶವನ್ನು ಕೊಡಲಿದೆ. ಸರ್ಕಾರದ ಕಾರ್ಯದಲ್ಲಿ ವೈಫಲ್ಯ, ಆರೋಗ್ಯದಲ್ಲಿ ಮುನ್ನೆಚ್ಚರಿಕೆ ಬೇಕು. ತಂದೆಯ ಬಗ್ಗೆ ಸದ್ಭಾವ ದೂರವಾಗುವುದು. ಶಿವನ ವ್ರತವನ್ನು ಮಾಡುವುದು ಉತ್ತಮ.
ಕನ್ಯಾ ರಾಶಿ :
ಜನವರಿ ತಿಂಗಳಲ್ಲಿ ನಿಮಗೆ ಮಿಶ್ರಫಲ. ರಾಶಿಯ ಅಧಿಪತಿ ಪಂಚಮದಲ್ಲಿ ಇರಲಿದ್ದು ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಿಸುತ್ತದೆ. ವೈವಾಹಿಕ ಸಂಬಂಧದಲ್ಲಿ ಭಾವನೆಗಳು ಅನರ್ಥಕ್ಕೆ ದಾರಿ ಮಾಡುವುದು. ಹೋಟೆಲ್, ಉದ್ಯಮದಿಂದ ಲಾಭ. ಕಲಾವಿದರಿಗೆ ಅವಕಾಶ ಸಿಗುತ್ತದೆ, ಅದನ್ನು ಬಳಸಿಕೊಳ್ಳಿ. ಸಹೋದ್ಯೋಗಿಗಳ ಜೊತೆ ಮನಸ್ತಾಪವನ್ನು ಬೆಳೆಸಿಕೊಳ್ಳಿ. ಬುಧ ದಶೆ ಸಾಧಾರಣವಾಗಿರಲಿದೆ.
ತುಲಾ ರಾಶಿ :
ಏಳನೇಯ ರಾಶಿಯವರಿಗೆ ಜನವರಿ ತಿಂಗಳ ಶುಭ ಫಲ. ರಾಶಿ ಅಧಿಪತಿ ಶುಕ್ರ ಚತುರ್ಥದಲ್ಲಿ ಇರುವನು. ಮಿತ್ರನ ರಾಶಿಯಲ್ಲಿ ಇದ್ದು, ಭೋಗದ ಸುಖವನ್ನು ನೀಡುವನು. ಕುಟುಂಬದ ಜೊತೆ ಕಾಲ ಕಳೆಯುವಿರಿ. ಇನ್ನು ಉದ್ಯೋಗಕ್ಕೆ ಕೃಷಿ ಚಟುವಟಿಕೆಯಲ್ಲಿ ಪ್ರಗತಿ ಕಾಣುತ್ತಿದೆ. ಯಂತ್ರೋಪಕರಣ ಔಷಧೀಯ ವ್ಯಾಪಾರದಿಂದ ಲಾಭವಿದೆ. ವಾಹನವೂ ನಿಮಗೆ ತಕ್ಕಮಟ್ಟಿನ ಲಾಭವನ್ನು ಕೊಡುವುದು. ಶುಕ್ರದಶೆಯಿಂದ ನೆಮ್ಮದಿ ನಿಮ್ಮದಾಗುವುದು.
ವೃಶ್ಚಿಕ ರಾಶಿ :
ಜನವರಿ ತಿಂಗಳಿನಲ್ಲಿ ಎಂಟನೇ ರಾಶಿಯವರಿಗೆ ಅಶುಭ. ಗುರುವಿನ ಪ್ರಭಾವ ನಿಮ್ಮ ಮೇಲೆ ಪೂರ್ಣವಾಗಿ ಇರದ ಕಾರಣ ಪ್ರಯತ್ನ ಪೂರ್ವಕವಾಗಿ ಪಡೆಯಬೇಕು. ಈ ತಿಂಗಳು ನಿಮ್ಮ ಸಾಮರ್ಥ್ಯದ ಹೊಳಪಿನಿಂದ ಕೂಡಿರುವುದು. ಯಾರ ಪ್ರಶಂಸೆಯನ್ನೂ ಅಪೇಕ್ಷಿಸದೇ ನಿಮ್ಮಷ್ಟೇ ಮಹತ್ಕಾರ್ಯದಲ್ಲಿ ತತ್ಪರರಾಗುವಿರಿ. ಉದ್ಯೋಗಕ್ಕಾಗಿ ರವಿ ದಶೆ ಉತ್ತಮ. ಇನ್ನು ವೈವಾಹಿಕ ವಿಚಾರದಲ್ಲಿ ಬಲವಂತ ಬೇಡ. ನಿಮ್ಮತಲೆ ಗಟ್ಟಿಯಿದೆ ಎಂದು ಬಂಡೆಗೆ ಕುಟ್ಟಲಾಗದು. ಕಾಲಕ್ಕಾಗಿ ಕಾಯಬೇಕು.
ಧನು ರಾಶಿ :
ರಾಶಿ ಚಕ್ರದ ಒಂಭತ್ತನೆಯ ರಾಶಿಯವರಿಗೆ ಈ ತಿಂಗಳ ಶುಭಪ್ರದ. ಗುರವಿನ ರಾಶಿಗೆ ಗುರವಿನ ದೃಷ್ಟಿ ಇದೆ. ಉದ್ಯೋಗದ ಅಧಿಪತಿ ದ್ವಿತೀಯದಲ್ಲಿ ಇದ್ದಾನೆ. ಸಾಲವನ್ನು ಮಾಡಿಕೊಂಡಿದ್ದರೆ ತೀರಿಹೋಗುವುದು. ಗ್ರಾಹಕ ಕೇಂದ್ರದಲ್ಲಿ ಇರುವವರಿಗೆ ಶುಭ. ಖಾರದ ಮಾತುಗಳಿಂದ ಬೇಸರವೂ ಉಂಟಾಗುವುದು. ಹೇಳಬೇಕಾದ ವಿಚಾರಗಳನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಮಾತನಾಡುವಿರಿ.
ಮಕರ ರಾಶಿ :
ಈ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ಶುಭಫಲ. ನಿಮ್ಮ ರಾಶಿಯಲ್ಲಿ ಈ ತಿಂಗಳ ನಾಲ್ಕು ಗ್ರಹಗಳ ಸಂಯೋಗವಾಗಲಿದ್ದು ಪರಸ್ಪರ ಸಾಮರಸ್ಯವುಳ್ಳ ಗ್ರಹಗಳೇ ಆಗಿವೆ. ಕುಜನ ಉಚ್ಚಕ್ಷೇತ್ರವಿದಾಗಿದೆ. ಭೂಮಿಯ ಲಾಭ. ಮನೆಯಿಂದ ದೂರವಿದ್ದವರಿಗೆ ಈ ತಿಂಗಳಿನಲ್ಲಿ ಸಂತೋಪ ಪ್ರದವಾದ ಸಂಗತಿಗಳು ಇರಲಿ. ಕುಜ, ಶುಕ್ರ ದಶೆಗಳು ಶುಭ ದಿನ. ಸಹೋದರರಲ್ಲಿ ಭಿನ್ನಾಭಿಪ್ರಾಯ ಬರುವುದು.
ಇದನ್ನೂ ಓದಿ: ಈ ರಾಶಿಯ ನಿರುದ್ಯೋಗಿಗಳಿಗೆ ಈ ಪ್ರಭಾವಿ ವ್ಯಕ್ತಿಗಳಿಂದ ಉದ್ಯೋಗಕ್ಕೆ ಸಹಾಯ ಮಾಡಿ
ಕುಂಭ ರಾಶಿ :
ಜನವರಿ ತಿಂಗಳಲ್ಲಿ ನಿಮಗೆ ಮಿಶ್ರಫಲ. ನಾಲ್ಕು ಗ್ರಹರು ದ್ವಾದಶಸ್ಥಾನದಲ್ಲಿ ಇವೆ. ತಂದೆಯಿಂದ ನಷ್ಟ, ಸಂಗಾತಿಯಿಂದ ಬೇಸರ, ಸ್ಪರ್ಧೆಯಲ್ಲಿ ಸೋಲು, ಮಾತಿನ ಮೇಲೆ ಅಪನಂಬಿಕೆ, ಬಂಧುಗಳ ಮೇಲಿನ ವಿಶ್ವಾಸ ಸಾಹಿತ್ಯ ಇವೆಲ್ಲವೂ ಇರಲಿ. ಗುರುವಿನ ದೃಷ್ಟಿ ನಿಮ್ಮ ಮೇಲಿರುವ ಕಾರಣ, ಎಂತಹ ಆಪತ್ತನ್ನೂ ಗೆಲ್ಲುವ ಸಾಮರ್ಥ್ಯ ಬರಲಿದೆ. ದೇಹ ಮನಸ್ಸಿಗೆ ಬಂಧನದ ಭಾವ ಬಂದರೂ ಅದರಿಂದ ಮುಕ್ತರಾಗುವಿರಿ. ಗುರು ದಶೆ ಉತ್ತಮ ಪ್ರದರ್ಶನ.
ಮೀನ ರಾಶಿ :
ಈ ತಿಂಗಳ ಕೊನೆಯ ರಾಶಿಯವರಿಗೆ ಶುಭಫಲ. ನಿಮಗೆ ನಾಲ್ಕು ಗ್ರಹಗಳ ಸ್ಥಿತಿಯಿಂದ ಶುಭದ ಪ್ರವಾಹ ನಿಮಗೆ. ಹಲವು ದಿನಗಳಿಂದಲೂ ಸಂಕಟದಲ್ಲಿ, ನಿಮಗೆ ಒಂದೆಡೆ ಇರುವ ಮಾರ್ಗಗಳು ತೆರೆಯಲಿಲ್ಲ ನೆಮ್ಮದಿ, ಸಂಪತ್ತು, ಆರೋಗ್ಯ ಎಲ್ಲವೂ ಬರುವ ಸೂಚನೆ ಸಿಗಲಿದೆ. ಸೋಲುಂಡ ಗೆಲವು ನಿಶ್ಚಯ ನಿಮಗೆ. ತಾಯಿ ಪ್ರೀತಿ ನಿಮಗೆ ಸಿಗಲಿದೆ. ಕುಜ, ಶುಕ್ರ, ಶನಿ ದಶೆಗಳು ನಿಮಗೆ ಬದಲಾವಣೆ ತಂದುಕೊಡುವವು.
– ಲೋಹಿತ ಹೆಬ್ಬಾರ್ – 8762924271 (What’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ಮಾಡಿ