ವೈಲ್ಡ್ಕಾರ್ಡ್ ಮೂಲಕ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಸೂರಜ್ ಸಿಂಗ್ ಇದೀಗ ಮನೆಯಿಂದ ಹೊರಬಂದಿದ್ದಾರೆ. ಸ್ಪಂದನಾಗಿಂತ ತಮಗೆ ಹೆಚ್ಚು ಅರ್ಹತೆ ಇತ್ತು ಎಂದು ಹೇಳಿಕೊಂಡಿರುವ ಅವರು, ಹೆಚ್ಚು ಜನರೊಂದಿಗೆ ಬೆರೆಯದ ತಮ್ಮ ಸ್ವಭಾವವೇ ಆಟಕ್ಕೆ ಮುಳುವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ವೈಲ್ಡ್ಕಾರ್ಡ್ ಮೂಲಕ ಬಿಗ್ಬಾಸ್ 12 (Bigg Boss Kananda 12) ಎಂಟ್ರಿ ಕೊಟ್ಟಿ ಬಿಗ್ಬಾಸ್ ಕ್ರಷ್ ಸೂರಜ್ ಸಿಂಗ್ ಆಟದ ಮೂರನೆಯ ತಿಂಗಳು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ರಾಶಿಕಾ ಶೆಟ್ಟಿ ಜೊತೆಗಿನ ಲವ್ಸ್ಟೋರಿಯಿಂದಾಗಿ ಫೇಮಸ್ ಆಗಿದ್ದ ಸೂರಜ್ ಅವರು ಇದೀಗ ತಾವು ಮನೆಯಿಂದ ಹೊರಕ್ಕೆ ಬರಲು ಏನು ಕಾರಣ ಇದ್ದಿರಬಹುದು ಎನ್ನುವುದನ್ನು ಊಹಿಸಿಕೊಂಡಿದ್ದಾರೆ.

ಮಾಧ್ಯಮಗಳ ಜೊತೆಗಿನ ಸಂದರ್ಶನದಲ್ಲಿ ಸೂರಜ್ ಅವರು, ತಾವು ಇನ್ನೂ ಸ್ವಲ್ಪ ದಿನ ಇರಬೇಕಿತ್ತು. ಆ ಅರ್ಹತೆ ನನಗೆ ಇತ್ತು ಎನ್ನುವ ಮೂಲಕ ಇದಾಗಲೇ ಕೆಲವು ಸ್ಪರ್ಧಿಗಳು ಹೇಳಿದಂತೆ ಸ್ಪಂದನಾ ಸೋಮಣ್ಣ (Bigg Boss Spandana Somanna) ಅವರಿಗಿಂತಲೂ ನನಗೆ ಹೆಚ್ಚು ಅರ್ಹತೆ ಇತ್ತು. ಆದರೆ ಜನ ಅದನ್ನು ಹೇಗೆ ಸ್ವೀಕರಿಸಿದರೋ ಗೊತ್ತಿಲ್ಲ ಎಂದಿದ್ದಾರೆ.

ಇದೇ ವೇಳೆ, ತಾವು ಹೊರಕ್ಕೆ ಬರಲು ಒಂದು ವಿಷಯ ಕಾರಣ ಆಗಿದ್ದಿರಬಹುದು ಎಂದು ಅವರು ಹೇಳಿದ್ದಾರೆ. ನಾನು ಹೆಚ್ಚು ಜನರ ಜೊತೆ ಮಿಂಗಲ್ ಆಗುವುದಿಲ್ಲ. ಕ್ಯಾಮೆರಾ ಇಷ್ಟೊಂದು ಫೇಸ್ ಮಾಡಿ ಗೊತ್ತಿಲ್ಲ. ಬಹುಶಃ ಎಲ್ಲರ ಜೊತೆ ಸೇರದೇ ಇದ್ದದ್ದು ನೆಗೆಟಿವ್ ಆಗಿದ್ದಿರಬಹುದು ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ಒಂದೇ ಕಡೆ ಸ್ಟಕ್ ಆಗಿಬಿಟ್ಟೆ ಎಂದು ಜನರು ಏನೇನೋ ಮಾತನಾಡುತ್ತಿದ್ದಾರೆ ಎಂದು ರಾಶಿಕಾ ಶೆಟ್ಟಿ ಬಗೆಗಿನ ಮಾತಿನ ಕುರಿತು ಪರೋಕ್ಷವಾಗಿ ಸೂರಜ್ ಸಿಂಗ್ (Bigg Boss Suraj Singh) ಮಾತನಾಡಿದ್ದಾರೆ.

ನನಗೆ ಅವರು, ಇವರು ಅಂತೇನೂ ಇಲ್ಲ. ನನ್ನ ಜೊತೆ ಯಾರಾದ್ರೂ ಚೆನ್ನಾಗಿ ಮಾತನಾಡಿದರೆ ಅವರ ಜೊತೆ ಚೆನ್ನಾಗಿ ಇರುತ್ತೇನೆ ಅಷ್ಟೇ. ಹೆಚ್ಚು ಜನರ ಜೊತೆ ಸೇರುವುದು ನನ್ನ ಸ್ವಭಾವ ಅಲ್ಲ. ಆದರೆ, ಅದನ್ನೇ ಬೇರೆ ಬೇರೆ ರೀತಿಯಲ್ಲಿ ಎಲ್ಲರೂ ಅರ್ಥೈಸಿಕೊಂಡರು ಎಂದು ಹೇಳಿದ್ದಾರೆ.

Source link
Bigg Boss ಮನೆಯಿಂದ ಹೊರಬರಲು ಆ ಒಂದು ತಪ್ಪು ಕಾರಣವಾಯ್ತು ಎನ್ನಿಸುತ್ತೆ: ಸೂರಜ್ ಸಿಂಗ್ ಹೇಳಿದ್ದೇನು?