Headlines

Bigg Boss​ ಗೆಲ್ಲಲು ಯಾರೂ ಅರ್ಹರೇ ಅಲ್ಲ: ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟ ಮಾಳು ಹೇಳಿದ್ದೇನು?

Bigg Boss​ ಗೆಲ್ಲಲು ಯಾರೂ ಅರ್ಹರೇ ಅಲ್ಲ: ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟ ಮಾಳು ಹೇಳಿದ್ದೇನು?

Bigg Boss​ ಗೆಲ್ಲಲು ಯಾರೂ ಅರ್ಹರೇ ಅಲ್ಲ: ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟ ಮಾಳು ಹೇಳಿದ್ದೇನು?
ಬಿಗ್​ಬಾಸ್​ 12ರ ಫೈನಲ್​ ಹಂತಕ್ಕೂ ಮುನ್ನ ಮಾಳು ನಿಪನಾಳ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಎಲಿಮಿನೇಷನ್​ ಒಂದು ಅನ್ಯಾಯ ಎಂದಿರುವ ಅವರು, ಮನೆಯಲ್ಲಿರುವ ಯಾರೊಬ್ಬರೂ ವಿನ್ನರ್​ ಆಗಲು ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಗ್​ಬಾಸ್​ (Bigg Boss 12) ಮನೆಯಿಂದ ಮಾಳು ನಿಪನಾಳ ಅವರು ಹೊರಕ್ಕೆ ಬಂದಿದ್ದಾರೆ. ಬಿಗ್​ಬಾಸ್​ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ಎಲಿಮಿನೇಷನ್​ ಸಹಜವಾಗಿ ಎಲ್ಲರಿಗೂ ಶಾಕ್​ ಕೊಡುತ್ತದೆ.

ಅದೇ ರೀತಿ, ಮಾಳು ಅವರಿಗೂ ಈ ಶಾಕ್​ ತಡೆದುಕೊಳ್ಳಲು ಆಗುತ್ತಿಲ್ಲ. ತಾವು ಫೈನಲ್​​ ಸ್ಪರ್ಧಿಯಾಗಬೇಕಿತ್ತು. ನನಗೆ ಅಷ್ಟೊಂದು ಜನ ಪ್ರೀತಿ ಕೊಟ್ಟಿದ್ದಾರೆ. ಎಷ್ಟೆಲ್ಲಾ ಮಂದಿ ನನಗಾಗಿ ದುಡಿದಿದ್ದಾರೆ. ಈ ಸಂದರ್ಭದಲ್ಲಿ ನನ್ನನ್ನು ಎಲಿಮಿನೇಟ್​ ಮಾಡಿರೋದು ತುಂಬಾ ಅನ್ಯಾಯ ಎಂದು ಮಾಧ್ಯಮಗಳಿಗೆ ಮಾಳು ತಿಳಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಎಲಿಮಿನೇಟ್​ ಆಗಿರುವುದಕ್ಕೆ ತುಂಬಾ ನೋವಿನಿಂದ ನುಡಿದಿರುವ ಅವರು ನಾನು ಫೈನಲಿಸ್ಟ್​. ಸ್ಪಂದನಾ ಸೋಮಣ್ಣ (Bigg Boss Spandana Somanna) ಅವರಂಥ ಸ್ಪರ್ಧಿಗಳನ್ನು ಅಲ್ಲಿಯೇ ಇಟ್ಟುಕೊಂಡು ನನ್ನನ್ನು ಹೊರಕ್ಕೆ ಹಾಕಿರುವುದು ಸ್ಪಲ್ಪವೂ ಸರಿಯಲ್ಲ ಎಂದು ದುಃಖಿಸಿದ್ದಾರೆ.

ಬಿಗ್​ಬಾಸ್​ ವಿನ್ನರ್​ ಯಾರಾಗಬೇಕು? ಗಿಲ್ಲಿ ನಟನ ಹೆಸರು ಕೇಳಿಬರುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ ಮಾಳು.

ಗಿಲ್ಲಿ ನಟ ಕಾಮಿಡಿ ಮೂಲಕ ಎಲ್ಲರನ್ನೂ ರಂಜಿಸುತ್ತಾರೆ. ಫಿಸಿಕಲ್​ ಟಾಸ್ಕ್​ ಎಂದು ಬಂದಾಗ ಆಟವಾಡುವುದಿಲ್ಲ. ಹಾಗೆ ನೋಡಿದರೆ ಈಗ ಮನೆಯಲ್ಲಿ ಇರುವ ಯಾರೂ ವಿನ್ನರ್​ ಆಗಲು ಅರ್ಹರಲ್ಲ. ಯಾರು ಬಂದರೂ ನಾನು ಅದನ್ನು ಒಪ್ಪುವುದಿಲ್ಲ ಎಂದು ಅತಿ ಕೋಪದಿಂದ ನುಡಿದಿದ್ದಾರೆ ಮಾಳು.

ನನ್ನಲ್ಲಿ ಎಲ್ಲ ರೀತಿಯ ಅರ್ಹತೆ ಇದ್ದರೂ ಈ ಹಂತದಲ್ಲಿ ಎಲಿಮಿನೇಟ್​ ಮಾಡಿರುವುದು ಸರಿಯಲ್ಲ. ಉತ್ತರ ಕರ್ನಾಟಕದವರನ್ನು ಯಾಕೆ ಹೀಗೆ ಮಾಡ್ತಾರೋ ಗೊತ್ತಿಲ್ಲ. ಇಡೀ ಉತ್ತರ ಕರ್ನಾಟಕ ನನ್ನ ಪರವಾಗಿ ಇತ್ತು. ವೋಟ್​ ಮಾಡುತ್ತಿದ್ದರು. ಆದರೂ ನನ್ನನ್ನು ಹೊರಕ್ಕೆ ಕಳುಹಿಸಲಾಗಿದೆ. ಈಗ ಇರುವವರಲ್ಲಿ ಯಾರೂ ಅರ್ಹರಲ್ಲ ಎಂದಿದ್ದಾರೆ ಮಾಳು.

Source link

Leave a Reply

Your email address will not be published. Required fields are marked *