Suraj-Ganavi Case: Viral Wedding Video Shows Suraj Recalling His Mother During Makeup ನವವಿವಾಹಿತರಾದ ಗಾನವಿ ಮತ್ತು ಸೂರಜ್ ಆ*ತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೂರಜ್ ಅವರ ಮದುವೆಯ ಮೇಕಪ್ ವಿಡಿಯೋವೊಂದು ವೈರಲ್ ಆಗಿದೆ.

ನವವಿವಾಹಿತೆ ಗಾನವಿ ಹಾಗೂ ಸೂರಜ್ ಆ*ತ್ಮಹತ್ಯೆ ಕೇಸ್‌ನಲ್ಲಿ ಈಗ ಹೊಸ ವಿಡಿಯೋ ಹೊರಬಿದ್ದಿದೆ. ಈ ವಿಡಿಯೋದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿತ್ತು ಅನ್ನೋದನ್ನ ತೋರಿಸಿದೆ.

’ಗ್ಲಂಪ್ ಬೈ ಶಾಲಿನಿ..’ ಅನ್ನೋ ಕಂಪನಿ ಹೊಂದಿರುವ ಶಾಲಿನಿ ಎನ್ನುವವರು ಮೆನ್ಸ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಅಕ್ಟೋಬರ್ 29 ರಂದು ಅವರು ಸೂರಜ್‌ಗೆ ಮಾಡಿರುವ ಮೇಕಪ್‌ಅನ್ನು ತೋರಿಸಿದ್ದಾರೆ.

ಮೇಕಪ್‌ನ ಸಮಯದಲ್ಲೂ ಸೂರಜ್ ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದರು. ‘ನಮ್ಮಮ್ಮ ರೆಡಿಯಾಗವ್ರೇನೋ..’ ಎಂದು ಸ್ನೇಹಿತರನ್ನು ಕೇಳಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.

’ಫೋಟೋ ಶೂಟ್ ಐತೋ..’, ‘ಇವಾಗ ನಾನ್ ಬೇರೆ ರೂಮ್‌ನಲ್ಲಿದ್ದೇನೆ.. ಅವರು ಬೇರೆ ರೂಮ್‌ನಲ್ಲಿದ್ದಾರೆ..’, ‘ಇನ್ನೊಂದು ಚೂರು ಇಲ್ಲಿ ಬೆಂಡ್ ಮಾಡೋಕೆ ಆಗುತ್ತಾ..’ ಅನ್ನೋ ಮಾತುಗಳು ಮೇಕಪ್ ಟೈಮ್‌ನಲ್ಲಿ ಆಡಿದ್ದಾರೆ.

ತಮ್ಮ ಲುಕ್‌ಗಳ ಬಗ್ಗೆ ಸೂರಜ್‌ಗೆ ಅವರದ್ದೇ ಆದ ನಿರೀಕ್ಷೆಗಳಿದ್ದವು ಅನ್ನೋದು ಈ ವಿಡಿಯೋ ಮೂಲಕ ಸ್ಪಷ್ಟವಾಗಿದೆ.

ಇದಕ್ಕೆ ಕಾಮೆಂಟ್ ಮಾಡಿರುವ ಹಲವರು, ಈ 33 ಸೆಕೆಂಡ್‌ನ ವಿಡಿಯೋದಲ್ಲಿಯೇ, ಆತನ ಸೆಕ್ಸುಯಲ್ ಓರಿಯಂಟಲ್ ನೇರವಾಗಿಲ್ಲ ಅನ್ನೋದು ನನಗೆ ಗೊತ್ತಾಗುತ್ತಿದೆ. ಆದರೆ, ಗಾನವಿ ಅವರ ಕುಟುಂಬ ಮೋಸ ಹೋಗಿದ್ದೆಲ್ಲಿ ಎಂದು ಯೂಸರ್ ಒಬ್ಬರು ಬರೆದಿದ್ದಾರೆ.

ಮದುವೆ ರೆಸಾರ್ಟ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆದಿತ್ತು. ಯಕ್ಷಗಾನ ಕಲಾವಿದರು ಕೂಡ ಮದುವೆಯಲ್ಲಿದ್ದರು. ಕಣ್ಮನ ಸೆಳೆಯುವ ಹೂವುಗಳ ಅಲಂಕಾರ ಮಾಡಲಾಗಿತ್ತು. ಬಹುಶಃ ರೆಸಾರ್ಟ್‌ನಲ್ಲಿ ಮದುವೆಗಾಗಿಯೇ ದೊಡ್ಡ ಮಟ್ಟದ ಖರ್ಚಾಗಿರುವುದು ಕಂಡಿದೆ.

ಇನ್ನು ಈ ವಿಡಿಯೋದ ಒಂದು ಕ್ಷಣದಲ್ಲಿ ಗಾನವಿ ಕೂಡ ಕಾಣಿಸಿಕೊಳ್ಳುತ್ತಾರೆ. ಗಾನವಿ ಪ್ರಕರಣ ವೈರಲ್ ಆಗುತ್ತಿರುವ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಎರಡು ತಿಂಗಳ ಹಿಂದೆ ಹಂಚಿಕೊಂಡ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಪ್ರಕರಣದಲ್ಲಿ ಈಗಾಗಲೇ ಗಾನವಿ ಹಾಗೂ ಸೂರಜ್ ಇಬ್ಬರೂ ಸಾವು ಕಂಡಿದ್ದರೆ, ಸೂರಜ್ ಅವರ ತಾಯಿ ಜಯಂತಿ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಇನ್ನೊಂದೆಡೆ ಸೂರಜ್ ಅವರ ಅತ್ತಿಗೆ ಹೊಸ ದೂರು ದಾಖಲಿಸಿದ್ದು, ಗಾನವಿ ಕುಟುಂಬದ ವಿರುದ್ಧ ಆರೋಪ ಮಾಡಿದ್ದಾರೆ.

ಶ್ರೀಲಂಕಾಕ್ಕೆ ಹನಿಮೂನ್‌ಗೆ ಹೋಗಿದ್ದಾಗ ಗಾನವಿ, ಸೂರಜ್‌ನ ಬಳಿ ತಾನು ಹರ್ಷ ಎನ್ನುವ ವ್ಯಕ್ತಿಯನ್ನು ಪ್ರೀತಿ ಮಾಡುತ್ತಿದ್ದೆ ಎಂದು ಹೇಳಿದ್ದಳು. ಮನೆಯವರ ಒತ್ತಾಯಕ್ಕೆ ಮದುವೆ ಆಗಿದ್ದಾಗಿ ತಿಳಿಸಿದ್ದಳು. ಇದು ಸೂರಜ್‌ಗೆ ಶಾಕ್ ನೀಡಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Source link
'ನಮ್ಮಮ್ಮ ರೆಡಿಯಾಗವ್ರೇನೋ..' ಮೇಕಪ್ ಟೈಮ್‌ನಲ್ಲೂ ನೆನೆದಿದ್ದ ಸೂರಜ್, ಅದ್ದೂರಿತನಕ್ಕೆ ಸಾಕ್ಷಿಯಾಗಿತ್ತು ಗಾನವಿ ಮದುವೆ!